Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 30 ನವೆಂಬರ್ 2020 (08:43 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಎದುರು ಹಾಕಿಕೊಂಡರೆ ಉಳಿದವರಿಗೆ ಉಳಿಗಾಲವಿರದು. ಸಹೋದ್ಯೋಗಿಗಳಿಗೆ ನಿಮ್ಮ ಮಹತ್ವ ತಿಳಿಯಲಿದೆ. ಕೌಟುಂಬಿಕವಾಗಿ ಸಂಗಾತಿಯ ಮಾತುಗಳು ಮನಸ್ಸಿಗೆ ಘಾಸಿ ಉಂಟು ಮಾಡೀತು. ಬಹಳ ದಿನಗಳ ಬಾಕಿಯಿದ್ದ ಕೆಲಸ ಪೂರ್ತಿ ಮಾಡಲಿದ್ದೀರಿ.

ವೃಷಭ: ಹೊಗಳಿಕೆಯ ಮಾತಿಗೆ ಮರುಳಾಗಿ ವಂಚನೆಗೊಳಗಾಗದಿರಿ. ವೃತ್ತಿರಂಗದಲ್ಲಿ ನೀವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಇತರರ ಮೇಲೂ ಪರಿಣಾಮ ಬೀರಲಿದೆ. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಸರಿಯಾದ ಯೋಜನೆ ಹಾಕುವುದು ಮುಖ್ಯ.

ಮಿಥುನ: ಬೇರೆಯವರು ನಿಮ್ಮ ನಿರ್ಧಾರಗಳಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ಸಾಂಸಾರಿಕವಾಗಿ ಸಂಗಾತಿಯ ಬಹುದಿನದ ಆಸೆ ಈಡೇರಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

ಕರ್ಕಟಕ: ಆರ್ಥಿಕವಾಗಿ ಹಿಂದೆ ಮಾಡಿದ ಯೋಜನೆಗಳು ಇಂದು ಫಲಕೊಡಲಿವೆ. ಸಕಾಲದಲ್ಲಿ ಮಿತ್ರರ ನೆರವು ಸಿಗುವುದರಿಂದ ಸಂಭಾವ್ಯ ಸಮಸ್ಯೆಯಿಂದ ಪಾರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವಿರಲಿದೆ.

ಸಿಂಹ: ಅತಿಯಾದ ವ್ಯಾಮೋಹವಿಟ್ಟುಕೊಂಡ ವಸ್ತುವನ್ನು ಪಡೆದುಕೊಳ್ಳಲು ಕಷ್ಟಪಡಬೇಕಾಗುತ್ತದೆ. ರಾಜಕೀಯ ರಂಗದಲ್ಲಿರುವವರಿಗೆ ಪದೋನ್ನತಿಯ ಯೋಗವಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭ ಕಂಡುಬರುವುದು.

ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಕೆಲವು ನಿರ್ಧಾರಗಳು ಸಹೋದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾದೀತು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬಾರದೇ ನಿರಾಸೆಯಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಮನೆಗೆ ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದ್ದು ಸಂತಸವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಮಹಿಳೆಯರಿಗೆ ಸಂಗಾತಿಯ ಪ್ರೀತಿ, ಆದರ ಸಿಗಲಿದೆ. ಕಿರು ಓಡಾಟ ನಡೆಸುವಿರಿ.

ವೃಶ್ಚಿಕ: ಕಾರ್ಯನಿಮಿತ್ತ ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ನಿಮ್ಮ ಬಗ್ಗೆ ಕೇಳಿಬರುವ ಚಾಡಿ ಮಾತುಗಳ ಬಗ್ಗೆ ತಲೆಕಡಿಸಿಕೊಳ್ಳದೇ ಕರ್ತವ್ಯದ ಬಗ್ಗೆ ಯೋಚನೆ ಮಾಡಿ. ಕುಲದೇವರ ಪ್ರಾರ್ಥನೆಯಿಂದ ಶುಭವಾಗುವುದು.

ಧನು: ಬೇರೆಯವರಿಗೆ ಉಪದೇಶ ಮಾಡುವ ಮೊದಲು ನಿಮ್ಮ ಬುಡ ನೋಡಿಕೊಳ್ಳಿ. ಅನಗತ್ಯ ಮಾತುಗಳಿಂದ ಸಂಬಂಧ ಹಾಳಾದೀತು. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾದೀತು. ಎಚ್ಚರಿಕೆಯಿಂದಿರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮಕರ: ಆರ್ಥಿಕವಾಗಿ ಅನುಕೂಲಕರವಾದ ದಿನಗಳು ಸದ್ಯದಲ್ಲೇ ನಿಮ್ಮದಾಗುವುದು. ಬಹು ದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾರ್ಥವಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಪ್ರಯಾಣದಲ್ಲಿ ಎಚ್ಚರಿಕೆಯಿರಲಿ.

ಕುಂಭ: ಅನಗತ್ಯ ವಿಚಾರಗಳ ಬಗ್ಗೆ ಮನಸ್ಸು ಕೆಡಿಸಿಕೊಳ್ಳುವುದನ್ನು ಬಿಟ್ಟು, ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ಮಕ್ಕಳಿಂದ ಸಂತಸದ ವಾರ್ತೆ ಕೇಳಿಬಂದೀತು.

ಮೀನ: ವ್ಯಾಪಾರೀ ವರ್ಗದವರಿಗೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಗೆ ತೊಂದರೆಯಿರದು. ಇಷ್ಟದೇವತೆಯ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಕೈ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿನ ಪಂಚಾಂಗ ಹೀಗಿದೆ!