ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಪರಿಹಾರವಾಗಿದೆ ಎಂದುಕೊಂಡಿದ್ದ ಸಮಸ್ಯೆಗಳು ಮತ್ತೆ ಎದುರಾಗಲಿದೆ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗಲಿದ್ದು, ಆಸ್ಪತ್ರೆಗೆ ಅಲೆದಾಡಬೇಕಾದೀತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಕಂಡುಬರಲಿದೆ.
ವೃಷಭ: ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ನಿಮ್ಮ ಕೆಲಸಗಳಿಗೆ ಪ್ರಶಂಸೆ ಸಿಗಲಿದೆ. ಕೆಳಹಂತದ ನೌಕರರಿಗೆ ಉದ್ಯೋಗ ಉಳಿಸಿಕೊಳ್ಳುವ ಒತ್ತಡ ಎದುರಾಗಲಿದೆ. ಯೋಗ್ಯ ವಯಸ್ಕರು ಸೂಕ್ತ ಸಂಬಂಧಕ್ಕಾಗಿ ಕೆಲವು ಸಮಯ ಕಾಯಬೇಕಾಗುತ್ತದೆ.
ಮಿಥುನ: ನೂತನ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ವಿದ್ಯಾರ್ಥಿಗಳ ಉನ್ನತಿಗೆ ಅವಕಾಶಗಳು ತೋರಿಬರಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ಕರ್ಕಟಕ: ವಿದೇಏಶ ಯಾನಕ್ಕೆ ಅವಕಾಶಗಳು ಎದುರಾಗಲಿವೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಚೇತರಿಕೆ ಕಂಡುಬರುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಸಿಂಹ: ವೈಯಕ್ತಿಕವಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಯಾವುದನ್ನೂ ಹಗುರವಾಗಿ ಪರಿಗಣಿಸದಿರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಅಂದುಕೊಂಡ ಕೆಲಸಗಳು ಪೂರ್ತಿಯಾಗಲಿದೆ. ತಾಳ್ಮೆಯಿರಲಿ.
ಕನ್ಯಾ: ಅನಿರೀಕ್ಷಿತವಾಗಿ ದೂರದೂರಿಗೆ ಪ್ರಯಾಣ ಮಾಡಬೇಕಾಗಿಬರುತ್ತದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ವೃತ್ತಿರಂಗದಲ್ಲಿ ತಟಸ್ಥ ಧೋರಣೆ ವಹಿಸಿದರೆ ಉತ್ತಮ. ಭೂಮಿ, ವಾಹನ ಖರೀದಿಗೆ ಸದ್ಯದಲ್ಲೇ ಕೂಡಿಬರಲಿದೆ.
ತುಲಾ: ವೃತ್ತಿರಂಗದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಭವಿಷ್ಯದ ದೃಷ್ಟಿಯಿಂದ ಉತ್ತಮ. ಸಾಂಸಾರಿಕವಾಗಿ ಕುಟುಂಬ ಸದಸ್ಯರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಲಿದ್ದೀರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ: ಸುಃಖ ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಕಳೆದು ಹೋದ ವಸ್ತುಗಳನ್ನು ಮರಳಿ ಪಡೆಯಲಿದ್ದೀರಿ. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ. ಕಿರು ಸಂಚಾರ ಮಾಡಲಿದ್ದೀರಿ.
ಧನು: ಕಾರ್ಯರಂಗದಲ್ಲಿ ನಿಮ್ಮ ಏಳಿಗೆಯನ್ನು ಸಹಿಸದೇ ಅಸೂಯೆಪಡುವವರು ಇದ್ದೇ ಇರುತ್ತಾರೆ. ಅದನ್ನೆಲ್ಲಾ ಎದುರಿಸುವ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು. ಮನಸ್ಸಿನ ಮಾತಿನಂತೆ ನಡೆದುಕೊಳ‍್ಳಿ. ಕಷ್ಟದ ಸಮಯದಲ್ಲಿ ಸಂಗಾತಿಯ ಸಾಂತ್ವನ ಸಿಗಲಿದೆ.
ಮಕರ: ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಸುಖ ದುಃಖಗಳನ್ನು ಸಮಾನವಾಗಿ ಎದುರಿಸುವ ಮನಸ್ಥಿತಿ ರೂಢಿಸಿಕೊಳ್ಳಿ.
ಕುಂಭ: ವೃತ್ತಿರಂಗದಲ್ಲಿ ಹೊಸ ಯೋಜನೆಗಳ ಬಗ್ಗೆ ಗಮನಹರಿಸಲಿದ್ದೀರಿ. ಆದರೆ ನಿಮ್ಮ ಕೆಲಸಕ್ಕೆ ಅಡ್ಡಗಾಲು ಹಾಕುವವರಿರುತ್ತಾರೆ. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಮಹಿಳೆಯರಿಗೆ ಬಹು ದಿನಗಳ ಕನಸು ನನಸಾಗಲಿದೆ.
ಮೀನ: ನಿಮ್ಮ ಬಹುದಿನಗಳ ಕನಸೊಂದು ಈಡೇರಿದ ಸಂತಸ ನಿಮ್ಮದಾಗಲಿದೆ. ಮಹಿಳೆಯರು ಗೃಹ ಅಲಂಕಾರ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗುವುದು. ಚಿಂತೆ ಬೇಡ.