Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆ, ಸಂಯಮ ಅಗತ್ಯ. ದೇಹಾರೋಗ್ಯದ ಬಗ್ಗೆ ಗಮನವಿರಲಿ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಒಳಿತಿಗಾಗಿ ಕ್ರಿಯಾತ್ಮಕವಾಗಿ ಯೋಚಿಸಬೇಕಾದ ಅಗತ್ಯವಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ತೋರಿಬಂದೀತಾದರೂ ಕಾರ್ಯಸಾಧನೆಗೆ ತೊಂದರೆಯಾಗದು. ಕಿರು ಓಡಾಟ ನಡೆಸಬೇಕಾಗುತ್ತದೆ.

ಮಿಥುನ: ಆಕಸ್ಮಿಕವಾಗಿ ಪ್ರಯಾಣ ಮಾಡಬೇಕಾಗಿ ಬರುತ್ತದೆ. ಕಳ್ಳತನದ ಭೀತಿಯಿದ್ದು, ಎಚ್ಚರಿಕೆಯಿಂದಿರಿ. ಬಹಳ ದಿನಗಳಿಂಧ ಎದಿರು ನೋಡುತ್ತಿದ್ದ ಮಿತ್ರನ ಭೇಟಿಯಾಗಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ.

ಕರ್ಕಟಕ: ಗೃಹ ನಿರ್ಮಾಣ, ವಾಹನ ಖರೀದಿಗೆ ಪ್ರಕ್ರಿಯೆಗಳಿಗೆ ಚಾಲನೆ ನೀಡಲಿದ್ದೀರಿ. ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದ್ದು, ಆರ್ಥಿಕವಾಗಿ ಸುಧಾರಣೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಎದುರಾಗಲಿವೆ.

ಸಿಂಹ: ನಿಮ್ಮ ಸಮಯದ ಅಭಾವದಿಂದ ಪ್ರೀತಿ ಪಾತ್ರರೊಂದಿಗೆ ಕೆಲವು ಕ್ಷಣ ಕಳೆಯಲಾಗದೇ ಪರದಾಡುವಿರಿ. ಮಾನಸಿಕವಾಗಿ ಒತ್ತಡ ಕಂಡುಬರಲಿದೆ. ವೃತ್ತಿರಂಗದಲ್ಲಿ ಕೆಲವೊಂದು ಹೊಂದಾಣಿಕೆ ಸಿದ್ಧರಾಗಬೇಕಾಗುತ್ತದೆ. ಚಿಂತೆ ಬೇಡ.

ಕನ್ಯಾ: ನಿಮ್ಮ ಮಾತಿನ ಚತುರತೆಯಿಂದಲೇ ಕಾರ್ಯ ಸಾಧಿಸಿಕೊಳ್ಳಬೇಕು. ದಾಯಾದಿ ಕಲಹಗಳಿಗೆ ಹಿರಿಯರ ಸಲಹೆ ಪಡೆಯಿರಿ. ಸಂಗಾತಿಯೊಂದಿಗೆ ಮುನಿಸು, ಕೋಪ ತಾಪಕ್ಕೆ ಅವಕಾಶ ಮಾಡಿಕೊಡದಿರಿ. ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ.

ತುಲಾ: ನೀವು ನೋಡುವ ದೃಷ್ಟಿಕೋನ ಬದಲಾದರೆ ಎಲ್ಲವೂ ಸುಲಭವೆನಿಸಬಹುದು. ವೃತ್ತಿರಂಗದಲ್ಲಿ ನಿಮ್ಮ ಸಮಸ್ಯೆಗಳಿಗೆ ಸಹೋದ್ಯೋಗಿಗಳ ಸಹಾಯ ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ವ್ಯಾಪಾರ, ವ್ಯವಹಾರ ವತ್ತಿಯವರಿಗೆ ಸದವಾಕಾಶಗಳು ಕೂಡಿಬರಲಿವೆ. ಆರ್ಥಿಕವಾಗಿ ನಷ್ಟವಾಗದು, ಚಿಂತೆ ಬೇಡ. ನಿರುದ್ಯೋಗಿಳಿಗೆ ಸ್ವಯಂ ಉದ್ಯೋಗದಿಂದ ಲಾಭ ಸಿಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು.

ಧನು: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಎದುರಾಗಬಹುದು. ಹಳೆಯ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಹಿರಿಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು.

ಮಕರ: ಶೈಕ್ಷಣಿಕವಾಗಿ ಆರೋಗ್ಯಕರ ಪೈಪೋಟಿಯಿದ್ದೀತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಕಳೆದು ಹೋಗಿದ್ದ ವಸ್ತು ಮರಳಿ ಬರಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕುಂಭ: ವೃತ್ತಿರಂಗದಲ್ಲಿ ಸುಧಾರಣೆಗೆ ಅವಕಾಶಗಳು ಎದುರಾಗಲಿವೆ. ಮಹಿಳೆಯರಿಗೆ ತವರಿನ ಕಡೆಯಿಂದ ಉಡುಗೊರೆ ನಿರೀಕ್ಷಿಸಬಹುದು. ಸರಕಾರಿ ನೌಕರರಿಗೆ ಕೆಲಸದೊತ್ತಡ ಕೊಂಚ ಕಡಿಮೆಯಾಗಲಿದೆ. ಮನೆಗೆ ಅತಿಥಿಗಳ ಆಗಮನವಾಗಲಿದೆ.

ಮೀನ: ಹೊಸದಾಗಿ ವೃತ್ತಿಜೀವನ ಆರಂಭಿಸಿದವರಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗಬಹುದು. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಕೆಲಸದಲ್ಲಿ ಹೊಸ ಉತ್ಸಾಕ ಕಂಡುಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?