Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚು ವೆಚ್ಚಗಳೂ ಕಂಡುಬರಲಿದೆ. ಸಂಗಾತಿಯ ಕಿರಿ ಕಿರಿ ಇದ್ದೇ ಇರುತ್ತದೆ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗುವುದನ್ನು ಕಲಿಯಬೇಕು. ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ವೃಷಭ: ನಿಶ್ಚಿತ ಕಾರ್ಯಗಳನ್ನು ಪೂರ್ತಿ ಮಾಡುವಿರಿ. ಆಕಸ್ಮಿಕವಾಗಿ ಭೇಟಿಯಾಗುವ ವ್ಯಕ್ತಿಯಿಂದ ನಿಮಗೆ ಒಳ್ಳೆಯದಾಗಲಿದೆ. ಸಂಗಾತಿಯ ಮನೋಭಿಲಾಷೆಗಳನ್ನು ಪೂರ್ತಿ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡುವಿರಿ.

ಮಿಥುನ: ಎಷ್ಟೇ ಅಡೆತಡೆಗಳು ಬಂದರೂ ಕೈ ಹಿಡಿದ ಕೆಲಸಗಳಿಂದ ಹಿಂದೆ ಸರಿಯಬೇಡಿ. ಆತ್ಮವಿಶ್ವಾಸವೇ ನಿಮ್ಮ ಜಯಕ್ಕೆ ಮಾರ್ಗವಾಗಲಿದೆ. ಹಿರಿಯರ ಮಧ್ಯಸ್ಥಿಕೆಯಿಂದ ದಾಯಾದಿ ಕಲಹಗಳು ಪರಿಹಾರವಾಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ ಕೇಳಿಬರಲಿದೆ.

ಕರ್ಕಟಕ: ಯಾವುದೇ ಕೆಲಸಕ್ಕೆ ಕೈ ಹಾಕುವಾಗ ಆರಂಭದಲ್ಲಿ ಕಷ್ಟಕರವೆನಿಸಬಹುದು. ಆದರೆ ಸಮಯ ಸರಿದಂತೆ ಎಲ್ಲವೂ ನಿಮ್ಮ ದಾರಿಗೆ ಬರಲಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಿಂದ ಲಾಭ, ನೆಮ್ಮದಿ ಸಿಗಲಿದೆ. ವ್ಯಾಪಾರಿಗಳಿಗೆ ಮುನ್ನಡೆಯಿರಲಿದೆ.

ಸಿಂಹ: ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದೊತ್ತಡ ಅಧಿಕವಾಗಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಪಡಬೇಕಾಗುತ್ತದೆ.

ಕನ್ಯಾ: ಅನಗತ್ಯ ವಿಚಾರಗಳಿಗೆ ತಲೆ ಹಾಕಲು ಹೋದರೆ ತೊಂದರೆ ತಪ್ಪಿದ್ದಲ್ಲ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಪ್ರಯಾಸಕರ ಜಯ ನಿಮ್ಮದಾಗುವುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ತುಲಾ: ನೆರೆಹೊರೆಯವರ ಚಾಡಿ ಮಾತುಗಳಿಂದ ಮನಸ್ಸಿಗೆ ನೋವಾದೀತು. ಸಂಗಾತಿಯೊಡನೆ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಲಿದ್ದೀರಿ. ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಂಡುಬಂದೀತು. ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಿಗುವುದು.

ವೃಶ್ಚಿಕ: ಅತಿಯಾಗಿ ನಯವಂತಿಕೆ ಪ್ರದರ್ಶಿಸುವವರ ಜತೆ ಎಚ್ಚರಿಕೆಯಿಂದ ವ್ಯವಹರಿಸಿ. ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸವಿರಲಿದೆ. ಕುಟುಂಬದ ಶ್ರೇಯಾಭಿವೃದ್ಧಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ.

ಧನು: ಯಾವುದೇ ಕೆಲಸದಲ್ಲೂ ಅತಿಯಾಗಿ ಇನ್ನೊಬ್ಬರನ್ನು ಅವಲಂಬಿಸುವುದು ಬೇಡ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಮಕರ: ಯೋಗ್ಯ ವಯಸ್ಕರಿಗೆ ವೈವಾಹಿಕ ಪ್ರಸ್ತಾಪಗಳು ಬರಲಿವೆ. ಜೀವನದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯಿರಿ. ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ಪೋಷಕರಿಗೆ ಸಂತಸ ನೀಡಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಕುಂಭ: ವೃತ್ತಿರಂಗದಲ್ಲಿ ಸಮಸ್ಯೆಗಳು ಬಂದಾಗ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಮುನ್ನಡೆಯ ಯೋಗವಿದೆ. ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಯೋಚನೆ ಮಾಡಲಿದ್ದೀರಿ.

ಮೀನ: ಕೆಲಸ ಕಾರ್ಯಗಳಲ್ಲಿ ಒಂದು ರೀತಿಯ ನಿರುತ್ಸಾಹ ಕಾಡಲಿದೆ. ಹಳೆಯ ನೆನಪುಗಳಿಂದ ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬರಬಹುದು. ಹೊಸ ಯೋಜನೆಗಳಿಗೆ ಕೈ ಹಾಕಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸ್ತ್ರದ ಪ್ರಕಾರ ಇಂತಹ ಸ್ತ್ರೀಯನ್ನು ಮದುವೆಯಾದರೆ ಜೀವನವು ಸುಖಕರವಾಗಿರುತ್ತದೆಯಂತೆ