Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 2 ಸೆಪ್ಟಂಬರ್ 2020 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಸಂಗಾತಿಯ ಜತೆ ದುಃಖ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ತಪ್ಪದು. ಆದರೆ ನಿಮ್ಮ ಕ್ರಿಯಾತ್ಮಕ ಯೋಚನೆಗಳು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸುಲಭವಾಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಭಾಗ್ಯ ಒದಗಿಬರುವುದು.

ಮಿಥುನ: ತಾಂತ್ರಿಕ ವೃತ್ತಿಯವರಿಗೆ ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ತೋರಿಬಂದೀತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕರ್ಕಟಕ: ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಬಹುದು. ಇಷ್ಟ ಮಿತ್ರರನ್ನು ಅನಿರೀಕ್ಷಿತವಾಗಿ ಭೇಟಿ ಮಾಡಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ನೆಂಟರಿಷ್ಟರ ಆಗಮನವಾಗಲಿದೆ.

ಸಿಂಹ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಯಶಸ್ಸನ್ನು ಯಾರೂ ತಡೆಯಲು ಸಾಧ‍್ಯವಾಗದು. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನೂತನ ದಂಪತಿಗಳಿಗೆ ಹೊಂದಾಣಿಕೆ ಅಗತ್ಯ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವಿನಿಂದ ಸಮಸ್ಯೆಗಳಿಂದ ಪಾರಾಗುವಿರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಪ್ರೀತಿ ಪಾತ್ರರ ಮನಸ್ಸಿನ ಇಚ್ಛೆ ಪೂರೈಸಲಿದ್ದೀರಿ.

ತುಲಾ: ಮನೆ, ಕಟ್ಟಡ ಇತ್ಯಾದಿ ನಿರ್ಮಾಣ ಕಾರ್ಯಗಳಿಗೆ ಕೈ ಹಾಕಲು ಸಕಾಲ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ನೂತನ ದಂಪತಿಗಳಿಗೆ ಸುಮಧುರ ದಿನ.

ವೃಶ್ಚಿಕ: ಕೌಟುಂಬಿಕ ಜವಾಬ್ಧಾರಿಗಳು ಹೊರೆ ಎನಿಸಲು ತೊಡಗೀತು. ಸಂಗಾತಿಯ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಲಿದ್ದೀರಿ. ಕೆಳ ಹಂತದ ನೌಕರರಿಗೆ ಬಡ್ತಿ ಯೋಗ.

ಧನು: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆ, ಸಂಯಮದಿಂದ ನಡೆದುಕೊಳ್ಳುವುದು ಅಗತ್ಯ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.

ಮಕರ: ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಸಂತಸದ ವಾತಾವರಣವಿರಲಿದೆ. ಇಷ್ಟ ಭೋಜನ ಯೋಗ ಕೂಡಿಬರಲಿದೆ. ನವ ದಂಪತಿಗಳಿಗೆ ಶೀಘ್ರದಲ್ಲೇ ಸಂತಾನ ಫಲ ಸೂಚನೆ ದೊರೆಯಲಿದೆ. ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ.

ಕುಂಭ: ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಜಾರಿಗೆ ತರಲು ಯತ್ನಿಸುವಿರಿ. ಅಡೆತಡೆಗಳು ಸಾಮಾನ್ಯ. ಅವುಗಳನ್ನು ನಿವಾರಿಸಿಕೊಂಡು ಹೋಗಬೇಕು. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಮೀನ: ಕೂಡಿಟ್ಟ ಹಣ ಹೆಚ್ಚು ದಿನ ಬಾಳಿಕೆ ಬಾರದು ಎಂಬುದನ್ನು ಅರಿಯುವಿರಿ. ಕಠಿಣ ಪರಿಶ್ರಮ ಪಟ್ಟರೆ ತಕ್ಕ ಯಶಸ್ಸು ಸಿಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಿಲ್ಲದಿದ್ದೂ ನಷ್ಟವಾಗದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments