Publish Date: Mon, 31 Aug 2020 (08:57 IST)
Updated Date: Mon, 31 Aug 2020 (08:59 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ಕುಂಭ
ತುಂಬಾ ಭಾವುಕ ಜೀವಿಗಳು. ಆದರೆ ನಿಮ್ಮ ಇರಿಸುಮುರಿಸುಗಳನ್ನೂ ಸಹಿಸಿಕೊಳ್ಳಲಾರರು. ತಮ್ಮ ಪ್ರೀತಿ ಪಾತ್ರರಿಗೆ ಉತ್ತಮ ಉಡುಗೊರೆಗಳನ್ನು ನೀಡುತ್ತಾ ಸಂತೋಷಪಡಿಸುತ್ತಾರೆ. ಕಠಿಣ ಪರಿಶ್ರಮಿಗಳು. ಒಂದು ಕೆಲಸಕ್ಕೆ ಹೊರಟರೆ ಅದನ್ನು ಪೂರ್ತಿ ಮಾಡದೇ ಬಿಡರು. ನಿಮ್ಮ ಒಳಿತನ್ನೇ ಬಯಸುತ್ತಾರೆ.