Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 13 ಆಗಸ್ಟ್ 2020 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಹೋದ್ಯೋಗಿಗಳ ಸಹಕಾರದಿಂದ ಹೊಸ ಅವಕಾಶಗಳು ಒದಗಿಬರಲಿವೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಳ ಸಂಭವ.ಎಲ್ಲರನ್ನೂ ಜತೆಯಾಗಿ ನಡೆಸಿಕೊಂಡು ಹೋಗುವ ನಿಮ್ಮ ಮನೋಭಾವ ಮೆಚ್ಚುಗೆಗೆ ಪಾತ್ರವಾಗಲಿದೆ. ಆರೋಗ್ಯದಲ್ಲಿ ಕಾಳಜಿಯಿರಲಿ.

ವೃಷಭ: ಮನೆಯಲ್ಲಿ ದೇವತಾ ಕಾರ್ಯಗಳು ನೆರವೇರಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಸಾಹಿತ್ಯ, ಕಲೆ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ ಲಭ‍್ಯವಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ಮಿಥುನ: ಕಾರ್ಯರಂಗದಲ್ಲಿ ನಿಮ್ಮ ಪ್ರಗತಿಗೆ ಅವಕಾಶಗಳು ಒದಗಿಬಂದಾಗ ಸದುಪಯೋಗಪಡಿಸಿಕೊಳ್ಳಿ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಅಂದುಕೊಂಡ ಕೆಲಸ ನೆರವೇರಿಸಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಕಿರು ಓಡಾಟ ನಡೆಸಲಿದ್ದೀರಿ.

ಕರ್ಕಟಕ: ಕಾರ್ಯನಿಮಿತ್ತ ಪರ ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಹಿರಿಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಸ್ವಯಂ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ.

ಸಿಂಹ: ಸಣ್ಣ ವಿಚಾರವನ್ನು ದೊಡ್ಡದು ಮಾಡಿ ಕುಟುಂಬದಲ್ಲಿ ನೆಮ್ಮದಿ ಕಳೆಯುವುದು ಬೇಡ. ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಿ. ವ್ಯಾಪಾರಿಗಳಿಗೆ ಆರ್ಥಿಕ ಲಾಭವಾಗಲಿದೆ. ಹಿತ ಶತ್ರುಗಳ ಸಂಚು ಬಯಲಾಗಲಿದೆ.

ಕನ್ಯಾ: ಕೃಷಿ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಉನ್ನತಿಯ ಯೋಗವಿದೆ. ಭಾವನಾತ್ಮಕವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಡಿ. ಪ್ರವಾಸ, ಓಡಾಟದಿಂದ ದೇಹಾಯಾಸವಾಗಬಹುದು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ.

ತುಲಾ: ಧನಾದಾಯಕ್ಕೆ ಕೊರತೆಯಾಗದೇ ಇದ್ದರೂ ಖರ್ಚಿನ ಬಗ್ಗೆ ಮಿತಿಯಿಲ್ಲದೇ ಹೋದರೆ ಮುಂದೆ ತೊಂದರೆ ಅನುಭವಿಸಬೇಕಾದೀತು. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ನೌಕರ ವರ್ಗದವರಿಗೆ ಮುಂಬಡ್ತಿಯ ಯೋಗವಿದೆ.

ವೃಶ್ಚಿಕ: ನೂತನ ದಂಪತಿಗಳಿಗೆ ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳಾಗಬಹುದು.

ಧನು: ಸರಕಾರಿ ಅಧಿಕಾರಿಗಳಿಗೆ ಕಾರ್ಯದೊತ್ತಡ ಅಧಿಕವಾಗಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ತುಸು ಸಮಸ್ಯೆಯಾದೀತು. ಆದರೆ ಚಿಂತೆ ಬೇಕಾಗಿಲ್ಲ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಮಕರ: ನೀವು ಅಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಥತೆ ನಡೆಸಲಿದ್ದೀರಿ.

ಕುಂಭ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಹೊಂದಾಣಿಕೆ ಮಾಡಲಿದ್ದೀರಿ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಕಾರ್ಯರಂಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ಸಿಗಲಿದೆ.

ಮೀನ: ನಿಮ್ಮ ಮನೋಕಾಮನೆಗಳು ಪೂರ್ತಿಯಾಗಬೇಕಾದರೆ ದೈವ ಬಲವೂ ಅಗತ್ಯ ಎನ್ನುವುದನ್ನು ಮನಗಾಣಲಿದ್ದೀರಿ. ನಿಮ್ಮ ಕ್ರಿಯಾಶೀಲ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ