ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಮೇಲ್ವರ್ಗದ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಕೊಡು ಕೊಳ್ಳುವಿಕೆ ವ್ಯವಹಾರದಲ್ಲಿ ಕೊಂಚ ನಷ್ಟವಾದೀತು. ಸ್ನೇಹಿತರಿಗೆ ನಿಮ್ಮಿಂದ ಸಹಾಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ವೃಷಭ: ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ಇಷ್ಟಮಿತ್ರರ ಭೇಟಿ ಯೋಗವಿದೆ. ದಾಂಪತ್ಯ ಸುಖ ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಪ್ರಯತ್ನಿಸುವುದರಿಂದ ಯಶಸ್ಸು ಸಿಗಲಿದೆ.
ಮಿಥುನ: ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ. ಅನಿರೀಕ್ಷಿತವಾಗಿ ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲು ಹೋಗುವಿರಿ. ಸಾಮಾಜಿಕವಾಗಿ ನಿಮ್ಮಿಂದ ನಾಲ್ಕು ಜನರಿಗೆ ಉಪಕಾರವಾಗಲಿದೆ. ಆದರೆ ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
ಕರ್ಕಟಕ: ಸರಕಾರಿ ಕೆಲಸದಲ್ಲಿರುವವರಿಗೆ ಕಿರಿ ಕಿರಿ ತಪ್ಪದು. ಆಸ್ತಿ ವಿಚಾರದಲ್ಲಿ ದಾಯಾದಿಗಳೊಂದಿಗೆ ಮನಸ್ತಾಪವಾದೀತು. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಾಗಲಿದೆ. ಮಾನಸಿಕ ನೆಮ್ಮದಿಗಾಗಿ ಕುಲದೇವರ ಪ್ರಾರ್ಥಿಸಿ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಉನ್ನತಿಯ ಯೋಗವಿದೆ. ಇಲ್ಲ ಸಲ್ಲದ ವಿಚಾರದ ಬಗ್ಗೆ ತಲೆಕೆಡಿಸಿಕೊಂಡು ನಿರುತ್ಸಾಹ ತಂದುಕೊಳ್ಳಬೇಡಿ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗಲಿದೆ.
ಕನ್ಯಾ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪರ ಊರಿಗೆ ತೆರಳಬೇಕಾಗಬಹುದು. ನೂತನ ಕಾರ್ಯದಲ್ಲಿ ತೊಡಗಿಸಿಕೊಂಡರೆ ವಿಘ್ನಗಳು ಕಂಡುಬಂದೀತು. ಕೃಷಿಕರಿಗೆ ಬೆಳೆ ನಷ್ಟವಾಗುವ ಭೀತಿಯಿದೆ. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಹಿರಿಯರಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿಯಾಗುವ ಯೋಗವಿದೆ. ಪ್ರಯಾಣದಲ್ಲಿ ವಂಚನೆಗೊಳಗಾಗುವ ಭೀತಿಯಿದೆ. ಎಚ್ಚರಿಕೆಯಿಂದ ವ್ಯವಹರಿಸಿ. ಅನಿರೀಕ್ಷಿತ ರೀತಿಯಲ್ಲಿ ಕಾರ್ಯಗಳು ನಡೆಯಲಿವೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.
ವೃಶ್ಚಿಕ: ನಿಮ್ಮ ಬೆನ್ನ ಹಿಂದೆ ಮಸಲತ್ತು ನಡೆಸುವವರಿಂದಾಗಿ ಸುವರ್ಣಾವಕಾಶವನ್ನು ಕಳೆದುಕೊಳ್ಳಲಿದ್ದೀರಿ. ಸಂಗಾತಿಯ ಸಾಂತ್ವನ ಮನಸ್ಸಿಗೆ ನೆಮ್ಮದಿ ನೀಡಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಧನು: ರಾಜಕೀಯ ವರ್ಗದವರಿಗೆ ಸ್ಥಾನಪಲ್ಲಟ ಭೀತಿ ಎದುರಾಗಲಿದೆ. ಅನಿರೀಕ್ಷಿತವಾಗಿ ಹಣಕಾಸಿನ ಖರ್ಚು ವೆಚ್ಚಗಳು ಎದುರಾಗಬಹುದು. ಧನ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಮುನ್ನಡೆಯಿರಲಿದೆ.
ಮಕರ: ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕಾದರೆ ನೀವು ಮಾತಿನ ಮೇಲೆ ನಿಗಾ ವಹಿಸಬೇಕು. ಸಂಬಂಧಗಳನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದು. ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶ ಕಳೆದುಕೊಳ್ಳಬೇಡಿ. ವಿಘ್ನ ನಿವಾರಕನ ಪ್ರಾರ್ಥನೆ ಮಾಡಿ.
ಕುಂಭ: ವಾಹನ, ಭೂಮಿ ಖರೀದಿಗೆ ಇದು ಸಕಾಲ. ಕೋರ್ಟು ವ್ಯವಹಾರಗಳು ವಿಳಂಬಗತಿಯಲ್ಲಿ ಸಾಗಲಿವೆ. ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ, ಅವಕಾಶ ಸಿಗಲಿದೆ. ನೀವು ಮಾಡುವ ಸಣ್ಣ ತಪ್ಪೂ ಸಂಗಾತಿಯ ಕೋಪಕ್ಕೆ ಕಾರಣವಾಗಬಹುದು. ಎಚ್ಚರಿಕೆಯಿರಲಿ.
ಮೀನ: ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿವೆ.