ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಉದ್ಯೋಗ ಕ್ಷೇತ್ರದಲ್ಲಿ ತೊಡಕುಗಳು ಬಂದೀತು. ಮೇಲಧಿಕಾರಿಗಳ ತಾರತಮ್ಯ ಬೇಸರವುಂಟು ಮಾಡಲಿದೆ. ಕೃಷಿಕರಿಗೆ ಉನ್ನತಿಯ ಯೋಗವಿದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಸಾಧನೆಗೆ ಅನುಕೂಲಕರವಾದ ವಾತಾವರಣವಿರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ.
ಮಿಥುನ: ಅಳುಕು, ಅಂಜಿಯನ್ನು ಬಿಟ್ಟು ನಿಮ್ಮ ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ನಿಮ್ಮ ಉತ್ಸಾಹಕ್ಕೆ ಸಂಗಾತಿಯ ಸಹಕಾರ ಸಿಗಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ಕರ್ಕಟಕ: ಅತಿಯಾದ ಆತ್ಮವಿಶ್ವಾಸವೇ ನಿಮಗೆ ಮುಳುವಾಗಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ಧೀರಿ. ಗೃಹ ನಿರ್ಮಾಣ ಕೆಲಸ ಕಾರ್ಯಗಳಿಗೆ ಮುಂದಾಗಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ವಹಿಸಿ.
ಸಿಂಹ: ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರಲಿದೆ. ಹೊಸ ಬಂಡವಾಳ ಹೂಡಿಕೆಗೆ ಸಕಾಲ. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಗೃಹಿಣಿಯರಿಗೆ ಅನಿರೀಕ್ಷಿತವಾಗಿ ತವರಿನಿಂದ ಉಡುಗೊರೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಅಸಹಾಕರ ನಿಮ್ಮ ಮುನ್ನಡೆಗೆ ತೊಡಕಾಗಲಿದೆ. ಆರ್ಥಿಕವಾಗಿ ಸರಿಯಾದ ಯೋಜನೆ ಹಾಕಿಕೊಳ್ಳದೇ ಇದ್ದಲ್ಲಿ ಮುಂದೆ ತೊಂದರೆಯಾಗಬಹುದು. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ಆಸಕ್ತಿ ಮೂಡುವುದು. ತಾಳ್ಮೆ, ಸಂಯಮ ಅಗತ್ಯ.
ವೃಶ್ಚಿಕ: ಇಷ್ಟ ಮಿತ್ರರನ್ನು ಭೇಟಿಯಾಗಲು ಕಾಲಾವಕಾಶ ಕೂಡಿಬರಲಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಹಲವು ದಿನಗಳಿಂದ ಮಾಡಬೇಕಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಚಿಂತೆ ಬೇಡ.
ಧನು: ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಮಾತಿನ ಮೇಲೆ ನಿಗಾ ಇರಲಿ. ಹೆಣ್ಣು ಮಕ್ಕಳಿಗೆ ತವರಿನ ಕಡೆಯಿಂದ ಶುಭ ಸಮಾಚಾರ ಕೇಳಿಬರಲಿದೆ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ.
ಮಕರ: ಕ್ರಯ ವಿಕ್ರಯ ವ್ಯವಹಾರಗಳಲ್ಲಿ ಲಾಭ ಕಂಡುಬರಲಿದೆ. ದೂರ ಸಂಚಾರದಲ್ಲಿ ವಿಘ್ನಗಳು ತೋರಿಬರಲಿದೆ. ಕಾರ್ಯರಂಗದಲ್ಲಿ ತುಸು ಚೇತರಿಕೆ ಕಂಡುಬರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
ಕುಂಭ: ಬೇಡದ ವಿಚಾರಗಳಿಗೆ ತಲೆಕಡಿಸಿಕೊಂಡು ಮನಸ್ಸು ಹಾಳು ಮಾಡಿಕೊಳ್ಳುವುದಕ್ಕಿಂತ ಆತ್ಮೀಯರ ಜತೆ ದುಃಖ ಹಂಚಿಕೊಳ್ಳುವುದು ಉತ್ತಮ. ಶೈಕ್ಷಣಿಕರ ರಂಗದಲ್ಲಿ ವೃತ್ತಿಯಲ್ಲಿರುವವರಿಗೆ ಪ್ರಗತಿ ಕಂಡುಬರಲಿದೆ. ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ.
ಮೀನ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹೆಚ್ಚಿನ ಕಾಲಾವಕಾಶ ಪಡೆದುಕೊಂಡರೆ ಯಾವುದೇ ಕಾರ್ಯವೂ ಸಫಲವಾಗದು. ಸಂಗಾತಿಯ ಜತೆ ಪರಾಮರ್ಶಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ. ಹಿರಿಯರಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.