Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 31 ಮೇ 2020 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನಗತ್ಯವಾಗಿ ಕಲಹಕ್ಕೆಡೆ ಮಾಡಿಕೊಡುವ ಸನ್ನಿವೇಶ ಸೃಷ್ಟಿಸಿಕೊಂಡು ನೀವೇ ಪಶ್ಚಾತ್ತಾಪಪಟ್ಟುಕೊಳ್ಳುತ್ತೀರಿ. ತಾಳ್ಮೆ, ಸಂಯಮದಿಂದ ನಡೆದುಕೊಳ್ಳುವುದು ಮುಖ್ಯ. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕಳ್ಳತನದ ಭೀತಿಯಿದೆ.

ವೃಷಭ: ಕೌಟುಂಬಿಕ ವ್ಯವಹಾರಗಳು ಸಮಾಧಾನಕರವಾಗಿ ನಡೆಯಲಿವೆ. ಮನೆಗೆ ಬೇಕಾದ ವಸ್ತುಗಳ ಖರೀದಿಗೆ ಧನವ್ಯಯವಾಗಲಿದೆ. ಚಿನ್ನಾಭರಣ ರಿಪೇರಿ ಮಾಡುವ ಕೆಲಸಕ್ಕೆ ಮುಂದಾಗಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ: ವೃತ್ತಿರಂಗದಲ್ಲಿ ಏಳಿಗೆಗಾಗಿ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡಬೇಕಾಗುತ್ತದೆ. ಪ್ರೀತಿ ಪಾತ್ರರ ಅಗಲುವಿಕೆಯ ನೋವು ಕಾಡಬಹುದು. ಮಹಿಳೆಯರಿಗೆ ಭಾವನೆಗಳನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ವೈಯಕ್ತಿಕ ದೇಹಾರೋಗ್ಯದ ಬಗ್ಗೆ ನಿರ್ಲ್ಯಕ್ಷ ಬೇಡ. ಆರ್ಥಿಕವಾಗಿ ಹಣಕಾಸಿನ ಹರಿವಿದ್ದರೂ ಅದೇ ರೀತಿಯಲ್ಲಿ ಖರ್ಚೂ ಇರಲಿದೆ. ವಿದ್ಯಾರ್ಥಿಗಳ ಮನಸ್ಸು ಪರಿವರ್ತನೆಯಾಗಿ ಅಭ್ಯಾಸದ ಕಡೆಗೆ ಗಮನ ಕೊಡುವರು. ಸಾಲಗಾರರಿಂದ ಮುಕ್ತಿ ಸಿಗಲಿದೆ.

ಸಿಂಹ: ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಕಾರ್ಯರಂಗದಲ್ಲಿ ಛಲಬಿಡದೇ ಕೆಲಸ ಮಾಡಿದರೆ ಯಶಸ್ಸು ಸಾಧ‍್ಯ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಸ್ವಲ್ಪದರಲ್ಲೇ ಕೈ ತಪ್ಪಿ ನಿರಾಸೆಯಾಗಬಹುದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕನ್ಯಾ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡುವುದು ಅಗತ್ಯ. ದೇಹಾರೋಗ್ಯದ ಬಗ್ಗೆ ನಿಗಾ ವಹಿಸಿ. ಮಕ್ಕಳಿಂದ ಸಂತಸ ಸಿಗಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳುವುದು ಉತ್ತಮ.

ತುಲಾ: ಕಾರ್ಯಕ್ಷೇತ್ರದಲ್ಲಿ ಹೊಸ ಚಿಂತನೆಗಳಿಂದ ನಿಮ್ಮ ಮುಂದಿರುವ ಸಮಸ್ಯೆಗಳು ನಿವಾರಣೆಯಾಗಲಿವೆ. ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸಿದರೂ ಸಕಾಲದಲ್ಲಿ ಮಿತ್ರರಿಂದ ನೆರವು ದೊರೆಯಲಿದೆ. ಸರಕಾರಿ ಅಧಿಕಾರಿಗಳಿಗೆ ಲೆಕ್ಕ ಪತ್ರದ ಬಗ್ಗೆ ನಿಗಾ ಇರಬೇಕು.

ವೃಶ್ಚಿಕ: ಉದ್ಯೋಗದಲ್ಲಿ ನಿರೀಕ್ಷಿತ ಸಾಧನೆ ಮಾಡಲಿದ್ದೀರಿ. ಮೇಲಧಿಕಾರಿಗಳ ಪ್ರಶಂಸೆ ಸಿಗಲಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ನಿರುದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗ ಲಾಭವಾಗಲಿದೆ.

ಧನು: ಪ್ರೀತಿ ಪಾತ್ರರೊಂದಿಗಿನ ಮಾತುಕತೆಯಿಂದ ಮನಸ್ಸು ಹಗುರವಾಗಲಿದೆ. ಸಾಂಸಾರಿಕವಾಗಿ ಪೋಷಕರ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳಿಗೆ ಹೊಸ ಸವಾಲುಗಳು ಎದುರಾಗಲಿವೆ. ವಿನಾಕಾರಣ ಚಿಂತೆ ಬೇಡ.

ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಶುಭ ಫಲಗಳಿಗಾಗಿ ದೇವರ ಪ್ರಾರ್ಥನೆ ಮಾಡಿ.

ಕುಂಭ: ಮಾನಸಿಕವಾಗಿ ನಿಮ್ಮನ್ನು ಅಸ್ಥಿರಗೊಳಿಸಲು ವಿರೋಧಿಗಳು ಹೊಂಚು ಹಾಕುತ್ತಿರುತ್ತಾರೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಕಾಲವಿದು. ಸಂಗಾತಿಯೊಂದಿಗೆ ಮನಸ್ಸಿನ ದುಃಖ ಹಂಚಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಬದಲಾವಣೆ ಬಯಸುವಿರಿ.

ಮೀನ: ನಿಮ್ಮ ಮನೋಕಾಮನೆಗಳು ಹಂತ ಹಂತವಾಗಿ ನೆರವೇರಲಿದೆ. ಸಾಂಸಾರಿಕವಾಗಿ ಬಂಧು ಬಳಗದವರ ಸಹಕಾರ ಸಿಗಲಿದೆ. ಪ್ರತಿಷ್ಠಿತರ ಸಂಪರ್ಕದಿಂದ ಕಾರ್ಯಸಿದ್ಧಿಯಾಗುವುದು. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಬಿಡುವು ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ