Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 14 ಮೇ 2020 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ನಡೆಯುವ ಬೆಳವಣಿಗೆಗಳು ನಿಮ್ಮ ಚಿಂತೆ ಹೆಚ್ಚಿಸಲಿದೆ. ಹೊಸ ಉದ್ಯೋಗಾವಕಾಶಗಳು ಬಂದರೂ ಸ್ವಲ್ಪದರಲ್ಲೇ ಕೈ ತಪ್ಪಿ ಹೋಗುವುದರಿಂದ ನಿರಾಸೆಯಾಗಬಹುದು. ದೈವ ಭಕ್ತಿ ಹೆಚ್ಚಲಿದೆ. ಕುಲದೇವರ ಪ್ರಾರ್ಥನೆ ಮಾಡಲಿದ್ದೀರಿ.

ವೃಷಭ: ವ್ಯಾಪಾರಿ ವರ್ಗದವರಿಗೆ ವ್ಯವಹಾರದಲ್ಲಿ ಪೈಪೋಟಿ ಎದುರಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಅಂದುಕೊಂಡಿದ್ದನ್ನು ಪೂರ್ತಿ ಮಾಡಲಿದ್ದೀರಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆಯ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ನಾನಾ ರೀತಿಯ ಖರ್ಚುವೆಚ್ಚಗಳಾಗಲಿವೆ. ನೂತನ ದಂಪತಿಗೆ ಸುಂದರ ಕ್ಷಣ ಕಳೆಯುವ ಯೋಗ. ಮಾನಸಿಕವಾಗಿ ಸ್ಥಿರ ಆಲೋಚನೆಯಿದ್ದರೆ ಯಶಸ್ಸು.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ಹಿತ ಶತ್ರುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ನಿರುತ್ಸಾಹ ಕಾಡಬಹುದು. ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಬಹುದು. ಸಂಗಾತಿಯ ಸಲಹೆಗೆ ಕಿವಿಗೊಡಿ.

ಸಿಂಹ: ವಾಹನ ಸವಾರರು ಚಾಲನೆಯಲ್ಲಿ ಜಾಗರೂಕತೆ ವಹಿಸುವುದು ಮುಖ್ಯ. ನಿರುದ್ಯೋಗಿಗಳಿಗೆ ಸಾಕಷ್ಟು ಅವಕಾಶಗಳು ಒದಗಿಬರಲಿವೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು.

 
ಕನ್ಯಾ: ಅವಿವಾಹಿತ ಕನ್ಯಾಮಣಿಗಳಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಆರ್ಥಿಕ ಅಡಚಣೆಯುಂಟಾಗಬಹುದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ತುಲಾ: ಉದ್ಯೋಗ ರಂಗದಲ್ಲಿ ಸಣ್ಣ ಮೈಮರೆವಿನಿಂದ ದೊಡ್ಡ ಅನಾಹುತ ಮೈಮೇಲೆಳೆದುಕೊಳ್ಳುವಿರಿ. ಸ್ಥಗಿತಗೊಂಡ ಕೆಲಸಗಳಿಗೆ ಮರು ಚಾಲನೆ ನೀಡಲಿದ್ದೀರಿ. ಹಿರಿಯರ ಸಲಹೆಗಳನ್ನು ಪಾಲಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.

ವೃಶ್ಚಿಕ: ಸಂಗಾತಿಯ ಕಷ್ಟದಲ್ಲಿ ಕೈ ಜೋಡಿಸಲಿದ್ದೀರಿ. ನಿಮ್ಮ ಪ್ರೀತಿಯ ಮಾತುಗಳೇ ಅವರಿಗೆ ಸಾಂತ್ವನ ನೀಡಲಿದೆ. ವ್ಯಾಪಾರ, ವ್ಯವಹಾರದಲ್ಲಿ ಹಣಕಾಸಿನ ತೊಂದರೆಗಳು ನಿವಾರಣೆಯಾಗಿ, ಆದಾಯ ವೃದ್ಧಿಯಾಗುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ನಿರೀಕ್ಷಿತ ಕೆಲಸಗಳು ಹಂತ ಹಂತವಾಗಿ ನಡೆಯಲಿದೆ. ತಾಳ್ಮೆ, ಸಂಯಮ ಅಗತ್ಯ. ಹಿತೈಷಿಗಳ ಸಹಕಾರದಿಂದ ಕೆಲಸ ಕಾರ್ಯ ಸುಗಮವಾಗಲಿದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ಮಕರ: ಆದಾಯ ಉತ್ತಮವಾಗಿದ್ದರೂ ಅನರೀಕ್ಷಿತವಾಗಿ ಖರ್ಚು ವೆಚ್ಚಗಳಾಗುವುದರಿಂದ ಕೂಡಿಟ್ಟ ಸಂಪತ್ತು ಕರಗುವ ಭಯ ಕಾಡಲಿದೆ. ನಿಮ್ಮ ಬೆನ್ನ ಹಿಂದೆ ವಿಶ್ವಾಸ ದ್ರೋಹ ಮಾಡುವವರ ಗುಟ್ಟುಗಳು ಬಹಿರಂಗವಾಗಲಿದೆ. ಕುಲದೇವರ ಪ್ರಾರ್ಥನೆಯಿಂದ ಒಳಿತಾಗಲಿದೆ.

ಕುಂಭ: ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ನಿರೀಕ್ಷಿತ ಸಮಯದಲ್ಲೇ ಕೆಲಸ ಮಾಡಿ ಮುಗಿಸಲಿದ್ದೀರಿ. ಮೇಲಧಿಕಾರಿಗಳ ಪ್ರಶಂಸೆ ಸಿಗಲಿದೆ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಬಂದೀತು, ಎಚ್ಚರ.

ಮೀನ: ಉದ್ಯೋಗಾಕಾಂಕ್ಷಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗುವುದು. ಮನೆ, ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಸಂಗಾತಿಯ ಮನೋಭಿಲಾಷೆ ಈಡೇರಿಸಲು ಖರ್ಚು ವೆಚ್ಚವಾಗಲಿದೆ. ಅನವಶ್ಯಕ ಕಲಹದಲ್ಲಿ ಮೂಗು ತೂರಿಸಲು ಹೋಗಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಪ್ರಭಾವ ಕಡಿಮೆಮಾಡಲು ಉಪ್ಪಿಗೆ ಈ ವಸ್ತುವೊಂದನ್ನು ಹಾಕಿಡಿ