Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 13 ಮೇ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೆಲಸದ ಬಗ್ಗೆ ಚಿಂತೆಯಾಗಲಿದೆ. ನೂತನವಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಚಿಂತೆ. ಕುಲದೇವರ ಪ್ರಾರ್ಥನೆಯಿಂದ ನೆಮ್ಮದಿ ಪಡೆಯುವಿರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ.

ವೃಷಭ: ಸರಕಾರಿ ಅಧಿಕಾರಿಗಳಿಗೆ ಹೊಸ ಸಮಸ್ಯೆಗಳು, ಸವಾಲುಗಳು ಎದುರಾಗಲಿವೆ. ಲೆಕ್ಕ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು. ನಿರುದ್ಯೋಗಿಗಳು ಉದ್ಯೋಗ ಅನ್ವೇಷಣೆಗಾಗಿ ಸಂಚಾರ ಮಾಡಬೇಕಾಗುತ್ತದೆ. ಮಕ್ಕಳ ಬಗ್ಗೆ ನಿಗಾ ವಹಿಸಿ.

ಮಿಥುನ: ನೂತನ ದಂಪತಿಗಳ ಸಂತಾನಾಪೇಕ್ಷೆ ನಿರಾಸೆಯುಂಟುಮಾಡಬಹುದು. ಇಂದು ಬೆಂಕಿಯೊಂದಿಗೆ ಚೆಲ್ಲಾಟ ಬೇಡ. ಸಾಂಸಾರಿಕ ಸಮಸ್ಯೆಗಳಿದ್ದರೂ ನಿಮ್ಮ ಮಾತಿನಿಂದಲೇ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕರ್ಕಟಕ: ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಕಿರಿ ಕಿರಿ ತಪ್ಪದು. ಅಳೆದು ತೂಗಿ ಮುಂದಿನ ಹೆಜ್ಜೆಯಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಬಹುದು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.

ಸಿಂಹ: ಕೆಲಸ ಕಾರ್ಯಗಳ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಆದಾಯಕ್ಕೆ ನಾನಾ ಮೂಲಗಳನ್ನು ಕಂಡುಕೊಳ್ಳಲಿದ್ದೀರಿ. ಸಂಗಾತಿಯ ಮನೋಭಿಲಾಷೆಗಳನ್ನು ಈಡೇರಿಸುವಿರಿ. ಚಿಂತೆ ಬೇಡ.

 
ಕನ್ಯಾ: ವೃತ್ತಿರಂಗದಲ್ಲಿ ಬರುವ ಸದವಕಾಶಗಳನ್ನು ಎರಡೂ ಕೈ ಬಳಸಿ ಬರಮಾಡಿಕೊಳ್ಳಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕಲಾ ಕ್ಷೇತ್ರದಲ್ಲಿರುವವರಿಗೆ ಪ್ರಶಂಸೆ ಸಿಗಲಿದೆ. ಕೈ ಹಿಡಿದ ಕೆಲಸಗಳು ಯಶಸ್ವಿಯಾಗಲಿವೆ.

ತುಲಾ: ಕೂಡಿಟ್ಟ ಸಂಪತ್ತು ವ್ಯಯವಾಗುತ್ತಿದೆ ಎಂಬ ಚಿಂತೆ ಕಾಡಬಹುದು. ಆದಾಯ ಹೆಚ್ಚಳಕ್ಕೆ ನಾನಾ ಉಪಾಯ ಮಾಡಲಿದ್ದೀರಿ. ಯಾವುದೇ ಕೆಲಸಕ್ಕೂ ಮುನ್ನ ಹಿರಿಯರ ಸಲಹೆ ಪಡೆಯಿರಿ. ಅವಿವಾಹಿತರ ವಿವಾಹ ಪ್ರಸ್ತಾಪಗಳು ಸ್ವಲ್ಪದರಲ್ಲೇ ತಪ್ಪಿ ಹೋಗಲಿದೆ.

ವೃಶ್ಚಿಕ: ಮನೆ ರಿಪೇರಿ ಕೆಲಸಗಳಿಗೆ, ಗೃಹ ಬಳಕೆ ವಸ್ತುಗಳ ಖರೀದಿಗೆ ಹೆಚ್ಚಿನ ಧನವ್ಯಯ ಮಾಡಲಿದ್ದೀರಿ. ಇಂದು ನೀವು ಕೈ ಹಿಡಿದ ಕೆಲಸಗಳು ದೈವಾನುಗ್ರಹದಿಂದ ಯಶಸ್ವಿಯಾಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ಚಿಂತೆ ಬೇಡ. ದೇವತಾ ಪ್ರಾರ್ಥನೆ ಮರೆಯದಿರಿ.

ಧನು: ನಿಮ್ಮ ದುಡುಕು ಮಾತುಗಳಿಂದ ಸಂಗಾತಿಯ ಮನಸ್ಸಿಗೆ ನೋವುಂಟು ಮಾಡಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಸಾಲಗಾರರ ಕಾಟದಿಂದ ಮುಕ್ತರಾಗಲಿದ್ದೀರಿ. ಕುಲದೇವರ ಪ್ರಾರ್ಥನೆ ನಡೆಸಿ.

ಮಕರ: ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆಗಳು ಕಾಡಲಿವೆ. ಭವಿಷ್ಯದ ಯೋಜನೆಗೆ ರೂಪುರೇಷೆ ಹಾಕಿಕೊಳ್ಳಲಿದ್ದೀರಿ. ನೂತನ ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ಕುಂಭ: ಮನಸ್ಸಿಗೆ ಹಿಡಿಸಿದ ಕೆಲಸಗಳಲ್ಲಿ ಖುಷಿ ಕಾಣುವಿರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಹಳೆಯ ಮಿತ್ರನ ಭೇಟಿ, ಮಾತುಕತೆಯಿಂದ ಮನಸ್ಸಿಗೆ ಸಂತಸವಾಗಲಿದೆ. ಕೋರ್ಟು ಕಚೇರಿ ಕೆಲಸಗಳು ಮುಂದೂಡಿಕೆಯಾಗಲಿವೆ.

ಮೀನ: ಮಹಿಳೆಯರಿಗೆ ಶೀಘ್ರದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು. ಋಣಾತ್ಮಕ ಚಿಂತೆಗಳಿಗೆ ಅವಕಾಶ ಕೊಡಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಗಿಡ ಮನೆಯ ಸುತ್ತಮುತ್ತಲಿದ್ದರೆ ವಾಸ್ತುದೋಷ ನಿವಾರಣೆಯಾಗುತ್ತದೆ