Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 28 ಏಪ್ರಿಲ್ 2020 (09:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬದಲಾವಣೆಗೆ ಮನಸ್ಸು ಹಾತೊರೆಯಲಿದೆ. ಕೌಟುಂಬಿಕವಾಗಿ ಸಂಗಾತಿಯ ಅತಿಯಾದ ಕಾಳಜಿಯೇ ಕಿರಿ ಕಿರಿ ಉಂಟು ಮಾಡಲಿದೆ. ಪ್ರೀತಿ ಪಾತ್ರರನ್ನು ಭೇಟಿ ಮಾಡಲಾಗದೇ ಮನಸ್ಸಿಗೆ ಬೇಸರವಾಗಲಿದೆ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ವೃಷಭ: ಉನ್ನತ ಸ್ಥಾನ ಮಾನ ಪಡೆಯಬೇಕೆಂಬ ನಿಮ್ಮ ಬಹುದಿನಗಳ ಕನಸಿಗೆ ಸ್ವಲ್ಪದರಲ್ಲೇ ಅಡ್ಡಿ ಎದುರಾಗಲಿದೆ. ಇದರಿಂದ ನಿರಾಸೆಯಾಗಬಹುದು. ನಿರುದ್ಯೋಗಿಗಳಿಗೆ ಸ್ವ ಉದ್ಯೋಗದಿಂದ ಲಾಭ ಸಿಗಲಿದೆ. ವೈವಾಹಿಕ ಮಾತುಕತೆಗಳಲ್ಲಿ ಮುನ್ನಡೆ ಸಿಗಲಿದೆ.

ಮಿಥುನ: ಸಮಯಕ್ಕೆ ಸರಿಯಾಗಿ ನಿರ್ಧಾರ ಕೈಗೊಳ್ಳಲಾಗದೇ ಸೋತು ಹೋದ ಅನುಭವವಾಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯುವಿರಿ. ಯಾರಿಗೂ ಸಾಲ ಕೊಡಲು ಹೋಗಬೇಡಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕರ್ಕಟಕ: ಮನದೆನ್ನೆಯ ಇಚ್ಛೆ ಪೂರೈಸುವ ಸಲುವಾಗಿ ಹಣಕಾಸಿನ ಖರ್ಚು ವೆಚ್ಚವಾಗಲಿದೆ. ಹೊಸ ಯೋಜನೆಗಳಿಗೆ ಕೈಹಾಕಲು ಕೆಲವು ದಿನ ಕಾಯುವುದು ಒಳಿತು. ಕೂಡಿಟ್ಟ ಹಣ ಕರಗುವ ಚಿಂತೆ ಕಾಡಲಿದೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.

ಸಿಂಹ: ಪ್ರೇಮಿಗಳಿಗೆ ಅಗಲುವಿಕೆಯ ನೋವು ಕಾಡಲಿದೆ. ನೂತನ ದಂಪತಿಗಳಲ್ಲಿ ಸಂತಾನ ಫಲ ಸೂಚನೆ ಸಿಗಲಿದೆ. ಇಷ್ಟ ದೇವತೆಯ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ದುಡುಕಿನ ವರ್ತನೆ ಬೇಡ.

ಕನ್ಯಾ: ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಹೊಸ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ. ಸಂಗಾತಿಯ ಕಷ್ಟಕ್ಕೆ ಹೆಗಲು ಕೊಡಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ತುಲಾ: ಸ್ವ ವ್ಯಾಪಾರಿಗಳಿಗೆ ಭವಿಷ್ಯಕ್ಕೆ ಹೊಸ ದಾರಿ ಗೋಚರವಾಗಲಿದೆ. ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಂಡುಬರಲಿದ್ದು, ಬಾಕಿ ಹಣ ಪಾವತಿಯಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ: ಯಾರಿಗೂ ನೋವುಂಟು ಮಾಡುವ ಉದ್ದೇಶವಿಲ್ಲದಿದ್ದರೂ ನೀವು ಹೇಳುವ ಕೆಲವು ಮಾತುಗಳು, ಕೈಗೊಳ್ಳುವ ನಿರ್ಧಾರಗಳು ಅಸಮಾಧಾನಕ್ಕೆ ಕಾರಣವಾಗಬಹುದು. ಎಚ್ಚರಿಕೆಯಿಂದ ಹೆಜ್ಜೆಯಿಡಿ. ವ್ಯವಹಾರದಲ್ಲಿ ಅಪರಿಚಿತರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ.

ಧನು: ಹಣಕಾಸಿನ ವಿಚಾರವಾಗಿ ಸಹೋದರ ಸಂಬಂಧಿಗಳೊಂದಿಗೆ ಮನಸ್ತಾಪವಾಗಬಹುದು. ತಾಳ್ಮೆಯಿಂದ ವ್ಯವಹರಿಸಿ. ನೆರೆಹೊರೆಯವರು ನಿಮ್ಮ ಗುಟ್ಟು ತಿಳಿಯಲು ಹವಣಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಅಭ್ಯಾಸದ ಕಡೆಗೆ ಆಲಸ್ಯತನ ಕಂಡುಬರಬಹುದು.

ಮಕರ: ಅವಿವಾಹಿತ ಕನ್ಯಾಮಣಿಗಳಿಗೆ ಅನಿರೀಕ್ಷಿತವಾಗಿ ಬಯಸಿದ ಸಂಬಂಧಗಳು ಕೂಡಿಬರಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಬಂಧು ಮಿತ್ರರಿಂದ ಸಂತಸ ಸಿಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಿ.

ಕುಂಭ: ಮಾನಸಿಕವಾಗಿ ಬೇಡದ ಚಿಂತೆಗಳಿಗೆ ಕಡಿವಾಣ ಹಾಕಿ. ನಿಮ್ಮ ದೂರದೃಷ್ಟಿಯಿಂದ ಸಂಭಾವ್ಯ ಅಪಾಯ ತಪ್ಪಿಸಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಲಿದ್ದೀರಿ. ಇಷ್ಟ ಭೋಜನ ಯೋಗವಿದೆ. ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ಸಹೋದ್ಯೋಗಿಗಳ ಸಹಕಾರದಿಂದ ನಿಭಾಯಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಇದುವರೆಗೆ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ