Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 26 ಏಪ್ರಿಲ್ 2020 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಮೇಲೆ ಕೆಂಡಕಾರುವವರ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಉತ್ತಮ ಅವಕಾಶ ಸಿಗಲಿದೆ. ಆದರೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ವೃಷಭ: ಹಿರಿಯರ ದೇಹಾರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ವ್ಯವಹಾರದಲ್ಲಿ ಕಾರ್ಯಹಾನಿಯಾಗುವುದು. ಅಪರಿಚಿತರೊಡನೆ ವ್ಯವಹರಿಸುವಾಗ ಎಚ್ಚರ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದಾಯಕ್ಕೆ ಹೊಸ ದಾರಿಗಳನ್ನು ಹುಡುಕಲಿದ್ದೀರಿ.

ಮಿಥುನ: ನಿಷ್ಕಲ್ಮಷ ಪ್ರೀತಿಗೆ ತಕ್ಕ ಬೆಲೆ ಸಿಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಮನಸ್ಸಿಗೆ ಖುಷಿಕೊಡುವ ಕೆಲಸ ಮಾಡಲಿದ್ದೀರಿ. ನಿರುದ್ಯೋಗಿಗಳು ಸಮಯಕ್ಕೆ ತಕ್ಕಂತೆ ಭವಿಷ್ಯದ ಯೋಜನೆ ರೂಪಿಸಬೇಕಾಗುತ್ತದೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡಲಿದೆ. ಶುಭಮಂಗಲಾದಿ ಕಾರ್ಯಗಳು ಮುಂದೂಡಿಕೆಯಾಗಲಿವೆ. ವ್ಯವಹಾರ ರಂಗದಲ್ಲಿ ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಾಗಲಿದ್ದು, ಸಾಧು ಸಂತರ ಭೇಟಿ ಸಾ‍ಧ್ಯತೆ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿರುವ ಬರುವಂತಹ ಕಷ್ಟಗಳಿಗೆ ನಿಮ್ಮ ಕ್ರಿಯಾತ್ಮಕತೆಯಿಂದಲೇ ಪರಿಹಾರ ಕಂಡುಕೊಳ್ಳುವಿರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಮಕ್ಕಳಿಂದ ಪೋಷಕರಿಗೆ ಬೇಸರವಾಗುವಂತ ಘಟನೆಗಳು ನಡೆಯಬಹುದು.

ಕನ್ಯಾ: ಇಂದಿನ ದಿನ ತಾಳ್ಮೆ ಅತೀ ಅಗತ್ಯ. ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಬೇಡ. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ತೋರಿಬಂದು ಚಿಂತೆಗೆ ಕಾರಣವಾದೀತು.

ತುಲಾ: ಮನಸ್ಸಿಗೆ ಹತ್ತಿರವಾದವರ ಬಳಿ ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ನೂತನ ದಂಪತಿಗಳಲ್ಲಿ ಸಂತಾನ ಫಲ ಸೂಚನೆ ಸಿಗಲಿದೆ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಕಾರ್ಯನಿಮಿತ್ತ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸಲಿದ್ದೀರಿ. ಹೊಸ ಯೋಜನೆಗಳಿಗೆ ಕೈಹಾಕಲು ಕೆಲವು ದಿನ ಕಾಯುವುದು ಉತ್ತಮ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಧನು: ನಿಮ್ಮ ಕೆಲವೊಂದು ನಿರ್ಧಾರಗಳು ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟು ಮಾಡಬಹುದು. ಮಕ್ಕಳಿಗೆ ಪೋಷಕರ ನಡುವಿನ ವೈಮನಸ್ಯ ಬೇಸರವುಂಟು ಮಾಡಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿವೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ವ್ಯವಹಾರ ರಂಗದಲ್ಲಿ ಚೇತರಿಕೆ ಕಂಡುಬರಲಿದೆ. ಆರ್ಥಿಕವಾಗಿ ಹಣಕಾಸಿನ ತೊಂದರೆಗಳು ನಿವಾರಣೆಯಾಗಲಿವೆ. ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ಎದುರಾಗಲಿದೆ. ಅವಿವಾಹಿತರು ಉತ್ತಮ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಉತ್ತಮ.

ಕುಂಭ: ಹೊಸ ಪರೀಕ್ಷೆಗಳಿಗೆ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ದೊರೆಯಲಿದೆ. ಮಾನಸಿಕವಾಗಿ ಹೊಸ ಉತ್ಸಾಹ ಮೂಡಲಿದೆ.

ಮೀನ: ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಬೇಡ. ನಿಮ್ಮ ಬಹುದಿನಗಳ ಆಸೆ ನೆರವೇರಿಸಲು ಅವಕಾಶವೊಂದು ಸಿಗಲಿದೆ. ಹಳೆಯ ಮಿತ್ರರ ಭೇಟಿ, ಮಾತುಕತೆಯಿಂದ ಮನಸ್ಸಿಗೆ ಸಂತಸವಾಗಲಿದೆ. ಮಹಿಳೆಯರಿಗೆ ಬಿಡುವಿಲ್ಲದ ಗೃಹಕೃತ್ಯದಿಂದ ದೇಹಾಯಾಸವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ