ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 15 ಏಪ್ರಿಲ್ 2020 (09:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರುವುದು. ಆದರೆ ಹಣಕಾಸಿನ ಬಗ್ಗೆ ಚಿಂತೆಯಾಗಲಿದೆ. ಆದಾಯಕ್ಕೆ ಕತ್ತರಿ ಬೀಳುವುದು. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವ್ಯವಹಾರದಲ್ಲಿ ಉನ್ನತ ಸ್ಥಾನ ಮಾನದ ಯೋಗವಿದೆ. ಆದರೆ ಅಂದುಕೊಂಡ ಕೆಲಸಗಳು ಪೂರ್ತಿ ಮಾಡಲು ಸಾಕಷ್ಟು ಅಡೆತಡೆಗಳು ಬರಲಿವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಮಿಥುನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪವಾಗುವ ಸಾಧ‍್ಯತೆಯಿದೆ. ತಾಳ್ಮೆಯಿರಲಿ. ದೂರ ಸಂಚಾರಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಏಳಿಗೆ ಸಹಿಸದ ಹಿತಶತ್ರುಗಳಿಂದ ತೊಂದರೆಯಾಗಬಹುದು. ವಂಚನೆಗೊಳಗಾಗದಂತೆ ಎಚ್ಚರವಹಿಸಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಕಡೆಗೆ ಗಮನಹರಿಸಲಿದ್ದೀರಿ. ಗೃಹ ಬಳಕೆ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ.

ಸಿಂಹ: ಮಿತ್ರರ ಸಹಕಾರದಿಂದ ಸಂಭಾವ್ಯ ಅಪಾಯ ತಪ್ಪಿ ಹೋಗುವುದು. ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದಿರಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ದಾಯಾದಿ ಕಲಹಗಳು ನಿವಾರಣೆಯಾಗಲಿವೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗದ ಅಧಿಕಾರಿಗಳಿಗೆ ಕೆಲಸ ನಿರ್ವಹಣೆಯ ಚಿಂತೆ ಕಾಡಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟ ಭೀತಿ ಎದುರಾಗಲಿದೆ. ಮನೆಯಲ್ಲಿ ನಡೆಯಬೇಕಿದ್ದ ಶುಭ ಮಂಗಲ ಕಾರ್ಯಗಳು ಮುಂದೂಡಿಕೆಯಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಾಧು ಸಂತರ ಭೇಟಿ ಸಾಧ‍್ಯತೆಯಿದೆ. ಹೊಸ ಚಿಂತನೆಗಳು ಮೂಡಲಿವೆ. ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ವೃಶ್ಚಿಕ: ಪ್ರೀತಿಸಿದ ವ್ಯಕ್ತಿಗಳನ್ನು ಭೇಟಿಯಾಗಲು ಸಾಧ‍್ಯವಾಗದೇ ಬೇಸರ ಕಾಡಲಿದೆ. ಪ್ರಮುಖ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಸೂಕ್ತ ಸಮಯವಲ್ಲ. ಮಕ್ಕಳಿಂದ ಸಂತಸದ ಸುದ್ದಿ ಬರಲಿದೆ. ಧಾರ್ಮಿಕವಾಗಿ ದೈವ ಭಕ್ತಿ ಹೆಚ್ಚುವುದು. ಚಿಂತೆ ಬೇಡ.

ಧನು: ನೆರೆಹೊರೆಯವರು ನಿಮ್ಮ ಗುಟ್ಟುಗಳನ್ನು ತಿಳಿಯಲು ಯತ್ನಿಸುತ್ತಾರೆ. ಮಾತಿನ ಮೇಲೆ ನಿಗಾ ಇರಲಿ. ವ್ಯವಹಾರದಲ್ಲಿ ಮುನ್ನಡೆ ಕಂಡುಕೊಳ್ಳಲಿದ್ದೀರಿ. ಕೌಟುಂಬಿಕವಾಗಿ ಅಭಿವೃದ್ಧಿ ತೋರಿಬರಲಿದೆ. ಕೃಷಿಕರಿಗೆ ಬೆಳೆಗೆ ತಕ್ಕ ಬೆಲೆ ಸಿಗದು. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮಕರ: ಹಿರಿಯರ ದೇಹಾರೋಗ್ಯದ ಬಗ್ಗೆ ಚಿಂತೆಯಾಗಲಿದೆ. ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹೊಸ ಯೋಜನೆಗಳಿಗೆ ರೂಪುರೇಷೆ ಸಿದ್ದಪಡಿಸಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗವಿದೆ.

ಕುಂಭ: ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಹಿರಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಾಹನ ಸಂಚಾರ ಮಾಡುವುದು ಉತ್ತಮವಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ಸಿಗಲಿದೆ. ತಾಳ್ಮೆಯಿರಲಿ.

ಮೀನ: ಮಹಿಳೆಯರು ಸಂಯಮ ಕಳೆದುಕೊಂಡರೆ ಮನೆಯಲ್ಲಿ ರದ್ಧಾಂತ ಗ್ಯಾರಂಟಿ. ತಾಳ್ಮೆ ಅಗತ್ಯ. ಹಿರಿಯರಿಂದ ಬಂದ ಬಳವಳಿ ರಕ್ಷಿಸುವ ಹೊಣೆಗಾರಿಕೆ ಹೆಗಲಿಗೇರಲಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಮಯವಿದು. ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಸರಸ್ವತಿಯ ಈ ಸ್ತೋತ್ರ ಓದಿ

ಮಂಗಳವಾರ ಆಂಜನೇಯನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹ ಪಡೆಯಲು ಪಶುಪತ್ಯಷ್ಟಕಂ ಸ್ತೋತ್ರವನ್ನು ಓದಿ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments