Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 13 ಏಪ್ರಿಲ್ 2020 (09:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವ್ಯಾವಹಾರಿಕವಾಗಿ ಹಲವು ಕಷ್ಟ ನಷ್ಟಗಳು ಬಂದರೂ ಹೊಸ ದಾರಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗುವಿರಿ. ಆದರೆ ವಿನಾಕಾರಣ ಬೇರೆಯವರ ಮೇಲೆ ಅವಲಂಬನೆ ಬೇಡ. ಆತ್ಮವಿಶ್ವಾಸದಿಂದ ಮುಂದುವರಿಯಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ಸಾಗದೇ ಸಂದಿಗ್ಧತೆ ಎದುರಾಗುವುದು. ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ಎದುರಾಗಲಿದೆ. ಪ್ರೀತಿ ಪಾತ್ರರ ಅಗಲುವಿಕೆ ಮನಸ್ಸಿಗೆ ಬೇಸರವುಂಟು ಮಾಡಬಹುದು.

ಮಿಥುನ: ಇಷ್ಟ ಭೋಜನ ಮಾಡುವ ಯೋಗವಿದೆ. ಆದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು, ಎಚ್ಚರಿಕೆಯಿಂದಿರಿ. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ನೂತನ ದಂಪತಿಗಳಿಗೆ ಹೊಂದಾಣಿಕೆಯ ಕೊರತೆ ಕಂಡುಬರಬಹುದು.

ಕರ್ಕಟಕ: ತಾಳ್ಮೆಯೇ ಇಂದು ನಿಮ್ಮ ಅಸ್ತ್ರವಾಗಬೇಕು. ದುಡುಕು ಮಾತಿನಿಂದ ಬೇರೆಯವರ ಮನಸ್ಸಿಗೆ ನೋವುಂಟುಮಾಡಬೇಡಿ. ಸಂಗಾತಿಯ ಸಮಯೋಚಿತ ಸಲಹೆಗಳು ಉಪಯೋಗಕ್ಕೆ ಬರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಸಿಂಹ: ಸಾಮಾಜಿಕ ಕೆಲಸಗಳಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಕಟ್ಟು ನಿಟ್ಟು ಅಗತ್ಯ. ಅಪರಿಚಿತರೊಂದಿಗೆ ವ್ಯವಹಾರ ಬೇಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕನ್ಯಾ: ಕಾರ್ಯರಂಗದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡವಿರಲಿದೆ. ಮೇಲಧಿಕಾರಿಗಳಿಂದ ಒತ್ತಡ ಬರಲಿದೆ. ತಾಳ್ಮೆ, ಸಂಯಮ ಅಗತ್ಯ. ಸಂಗಾತಿಯೊಂದಿಗೆ ಮನಸ್ತಾಪ ಬೇಡ. ಮಕ್ಕಳಿಂದ ನೆಮ್ಮದಿ ಸಿಗಲಿದೆ. ಗೃಹ ಬಳಕೆ ವಸ್ತುಗಳಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.

ತುಲಾ: ಸಾಂಸಾರಿಕವಾಗಿ ಸುಂದರ ದಿನ ನಿಮ್ಮದಾಗಲಿದೆ. ಪತ್ನಿ, ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಆದರೆ ಆದಾಯ ಕುಂಠಿತವಾಗಿರುವುದು ಚಿಂತೆಗೆ ಕಾರಣವಾಗಲಿದೆ. ಅವಿವಾಹಿತರು ಉತ್ತಮ ವೈವಾಹಿಕ ಸಂಬಂಧಕ್ಕೆ ಕೆಲವು ದಿನ ಕಾಯುವುದು ಒಳಿತು.

ವೃಶ್ಚಿಕ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮನೆಯಲ್ಲಿ ನಡೆಸಲುದ್ದೇಶಿಸಿದ್ದ ಶುಭ ಮಂಗಲ ಕಾರ್ಯಗಳು ಅರ್ಧಕ್ಕೇ ನಿಲ್ಲಲಿವೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಧನು: ಮನಸ್ಸಿಗೆ ಇಷ್ಟವಾಗುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಇದರಿಂದ ಸಂತೋಷ ಕಾಣುವಿರಿ. ಆದರೆ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡರೆ ನಿಮ್ಮ ನೆಮ್ಮದಿಯೇ ಹಾಳಾಗುವುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ.

ಮಕರ: ಬಿಡುವಿನ ವೇಳೆಯ ಸದುಪಯೋಗಪಡಿಸಿಕೊಳ್ಳಲಿದ್ದೀರಿ. ನಿಮ್ಮ ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಕಲಾ ಕ್ಷೇತ್ರದಲ್ಲಿರುವವರು ಸಾಮಾಜಿಕ ಮನ್ನಣೆ ಪಡೆಯಲಿದ್ದೀರಿ. ಮಹಿಳೆಯರಿಗೆ ತವರಿನಿಂದ ಸಂತೋಷದ ಸುದ್ದಿ ಕೇಳಿಬರಲಿದೆ.

ಕುಂಭ: ಎಷ್ಟೇ ಬೇಡವೆಂದರೂ ಹಳೆಯ ನೆನಪುಗಳು ಕಾಡಲಿವೆ. ಪ್ರೇಮಿಗಳಿಗೆ ಅಗಲಿಕೆಯ ದುಃಖ ಕಾಡಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಎಲ್ಲಾ ಇದ್ದು ಅನುಭವಿಸಲಾಗದ ಸಂಕಟ ಎದುರಾಗಲಿದೆ. ಆದರೆ ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಮೀನ: ಕೆಳ ಹಂತದ ನೌಕರರಿಗೆ ಭವಿಷ್ಯದ ಚಿಂತೆ ಕಾಡುವುದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಲಿದ್ದೀರಿ. ಸರಕಾರಿ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ಧಾರಿ ಹೊರಬೇಕಾಗುತ್ತದೆ. ಅವಿವಾಹಿತರ ವಿವಾಹ ಮಾತುಕತೆಗೆ ಮುನ್ನಡೆ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದರೆ ಬುಧವಾರದಂದು ಗಣೇಶನ ಮುಂದೆ ಈ ಚಿಕ್ಕ ಕೆಲಸ ಮಾಡಿ