Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 8 ಏಪ್ರಿಲ್ 2020 (09:22 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬಯಸದೇ ಬರುವ ಭಾಗ್ಯವನ್ನು ಅಲಕ್ಷಿಸಬೇಡಿ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಮಕ್ಕಳ ವಿದ್ಯಾಭ‍್ಯಾಸದ ಬಗ್ಗೆ ಗಮನಕೊಡಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ವೃಷಭ: ಬಯಸಿದ್ದೊಂದು ಆಗುವುದು ಮತ್ತೊಂದು ಎನ್ನುವ ಸ್ಥಿತಿ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತದೆ.ಅಪರಿಚಿತರ ಮೇಲೆ ಅತಿಯಾದ ವಿಶ್ವಾಸ ಬೇಡ. ಹಣಕಾಸಿನ ಲೆಕ್ಕಾಚಾರದ ಬಗ್ಗೆ ನಿಗಾ ಇರಲಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ವ್ಯವಹಾರ ಕ್ಷೇತ್ರದಲ್ಲಿ ಸುಧಾರಣೆಯ ಲಕ್ಷಣಗಳು ಗೋಚರಿಸಲಿವೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಜಾಣ್ಮೆಯಿಂದ ಬಳಸಿಕೊಳ್ಳಬೇಕು. ನಿರುದ್ಯೋಗಿಗಳು ಸ್ವ ಉದ್ಯೋಗದಿಂದ ಲಾಭ ಪಡೆಯಲಿದ್ದಾರೆ.

ಕರ್ಕಟಕ: ಬಹುದಿನಗಳಿಂದ ಅಂದುಕೊಂಡಿದ್ದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹೊರಡುತ್ತೀರಿ. ನಿಮ್ಮ ಕ್ರಿಯಾತ್ಮಕತೆಯಿಂದ ಕಷ್ಟಗಳನ್ನು ಗೆಲ್ಲಲಿದ್ದೀರಿ. ಸಂಗಾತಿಯ ಸಹಕಾರ ಸಿಗಲಿದೆ. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ.

ಸಿಂಹ: ವ್ಯವಹಾರದಲ್ಲಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಯೋಜನೆ ಮಾಡುತ್ತೀರಿ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಸಲಹೆ ಸೂಚನೆ ಸಿಗಲಿದೆ. ಕನ್ಯಾಮಣಿಗಳಿಗೆ ಶೀಘ್ರದಲ್ಲೇ ಕಂಕಣ ಭಾಗ್ಯವಿದೆ. ಕಿರು ಓಡಾಟ ನಡೆಸಬೇಕಾಗುತ್ತದೆ.

ಕನ್ಯಾ: ಪತ್ನಿಯ ಬಹುದಿನಗಳ ಆಸೆ ನೆರವೇರಿಸಲಿದ್ದೀರಿ. ಕೌಟುಂಬಿಕವಾಗಿ ಸಂತಸ ಅನುಭವಿಸಲಿದ್ದೀರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ತುಲಾ: ಅಧಿಕ ಧನಾರ್ಜನೆಗೆ ನಾನಾ ಮಾರ್ಗಗಳು ಗೋಚರವಾಗಲಿವೆ. ಆದರೆ ಕಾರ್ಯರೂಪಕ್ಕೆ ತರುವಾಗ ಎಡವಲಿದ್ದೀರಿ. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ದಾಯಾದಿ ಕಲಹಗಳು ನಿವಾರಣೆಯಾಗಲಿವೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ.

ವೃಶ್ಚಿಕ: ಹಿರಿಯರ ಅತಿಯಾದ ಕಾಳಜಿಯೂ ಉಸಿರುಗಟ್ಟಿಸಿದ ಅನುಭವ ನೀಡಲಿದೆ. ಆದರೆ ಯಾರ ಮನಸ್ಸಿಗೂ ನೋವುಂಟು ಮಾಡಲು ಹೊಗಬೇಡಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಶುಭ ಮಂಗಲ ಕಾರ್ಯಗಳು ಮುಂದೂಡಿಕೆಯಾಗಲಿವೆ.

ಧನು: ನಿಮ್ಮ ನಾಲಿಗೆಯೇ ಇಂದು ನಿಮಗೆ ಶತ್ರುವಾಗಲಿದೆ. ಅಧಿಕ ಮಾತನಾಡಿ ಕಾರ್ಯ ಹಾಳುಮಾಡಿಕೊಳ್ಳಬೇಡಿ. ಸಂಗಾತಿಯ ಎಚ್ಚರಿಕೆಯ ಮಾತು ಕಡೆಗಣಿಸಿದರೆ ದಂಡ ತೆರಬೇಕಾದೀತು. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಎಚ್ಚರ.

ಮಕರ: ನೂತನ ದಂಪತಿಗಳಿಗೆ ಶೀಘ್ರದಲ್ಲೇ ಸಂತಾನ ಯೋಗವಿದೆ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ಕುಲದೇವರಿಗೆ ಹರಕೆ ತೀರಿಸಲು ಮುಂದಾಗಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ದೈವಾನುಗ್ರಹದಿಂದ ಶುಭ ದಿನವಾಗಿರಲಿದೆ.

ಕುಂಭ: ನಾನಾ ರೀತಿಯ ಜವಾಬ್ಧಾರಿಗಳನ್ನು ಮೈಮೇಲೆಳದುಕೊಳ್ಳಬೇಡಿ. ಒಂದೊಂದಾಗಿ ಸಮಸ್ಯೆ ಪರಿಹರಿಸಲು ಮುಂದಾಗಿ ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ಹಿರಿಯರು ಕೊಟ್ಟ ವಸ್ತು ಉಪಯೋಗಕ್ಕೆ ಬರುವುದು. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಮೀನ: ನೆರೆಹೊರೆಯವರೊಂದಿಗೆ ನೀರಿಗಾಗಿ ವಾಗ್ವಾದವಾದೀತು ಎಚ್ಚರಿಕೆ ಅಗತ್ಯ. ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಆಸಕ್ತಿಯ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ನೀವು ಬಯಸಿದ ಉದ್ಯೋಗಕ್ಕೆ ಸದ್ಯದಲ್ಲೇ ಸಂದರ್ಶನ ಕರೆ ಬರಲಿದೆ. ಆಶಾವಾದಿಗಳಾಗಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ತಂತ್ರ ಮಾಡಿದರೆ ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ