Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 7 ಏಪ್ರಿಲ್ 2020 (09:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕವಾಗಿ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಕಾಡಲಿವೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವ್ಯವಹಾರದಲ್ಲಿ ಭಾರೀ ಹಿನ್ನಡೆಯಾಗಿ ಆರ್ಥಿಕವಾಗಿ ಹಣಕಾಸಿನ ನಷ್ಟಗಳಿಗೆ ಸಿದ್ಧರಾಗಬೇಕಾಗುತ್ತದೆ. ಹೊಸ ಯೋಜನೆಗಳನ್ನು ಕೈಗೊಳ್ಳಲು ಕೆಲವು ದಿನ ಕಾಯುವುದು ಒಳಿತು. ಅವಿವಾಹಿತರ ವಿವಾಹ ಮಾತುಕತೆಗೆ ಮುನ್ನಡೆ ಸಿಗಲಿದೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಅಂದುಕೊಂಡ ಮುನ್ನಡೆ ತೋರಿಬರದೇ ಮನಸ್ಸಿಗೆ ಬೇಸರವಾಗಲಿದೆ. ಕೃಷಿಕರಿಗೆ ನಷ್ಟದ ಭೀತಿ ಎದುರಾಗಲಿದೆ. ನೆರೆಹೊರೆಯವರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಕ್ಷುಲ್ಲುಕ ಮಾತುಗಳನ್ನು ಅಲಕ್ಷಿಸುವುದು ಒಳಿತು. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕರ್ಕಟಕ: ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ದೇವರ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ವ್ಯವಹಾರದಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಕಂಡುಬರಲಿದೆ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕಾರ್ಯದೊತ್ತಡದಿಂದ ದೇಹಾಯಾಸವಾದೀತು.

ಸಿಂಹ: ಇಂದಿನ ದಿನ ನಿಮ್ಮ ತಾಳ್ಮೆಯ ಸತ್ವ ಪರೀಕ್ಷೆ ಎದುರಾಗಲಿದೆ. ಕೋಪದ ಕೈಗೆ ಬುದ್ಧಿ ಕೊಟ್ಟು ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ದೂರ ಸಂಚಾರಗಳಿಗೆ ಅಡ್ಡಿ ಆತಂಕಗಳು ಎದುರಾಗಲಿವೆ.

ಕನ್ಯಾ: ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕಲಿದ್ದೀರಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳು ಒದಗಿ ಬರಲಿವೆ. ನೂತನ ದಂಪತಿಗಳು ಸುಂದರ ಕ್ಷಣ ಕಳೆಯಲಿದ್ದಾರೆ. ಗೃಹ ಕೃತ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.

ತುಲಾ: ನೀವು ಕೈಗೊಳ್ಳುವ ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾದೀತು. ಸಾಂಸಾರಿಕವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ನಿಮ್ಮ ಆಸೆ-ಆಕಾಂಕ್ಷೆಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಎದುರಾಗಲಿದೆ. ಆರ್ಥಿಕವಾಗಿ ಇಂದೇ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗಬಹುದು. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ‍್ಳುವ ಭೀತಿ.

ಧನು: ಸ್ವಯಂ ವ್ಯವಹಾರ ಮಾಡುವವರು ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದಾರೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆ.

ಮಕರ: ನಿರುದ್ಯೋಗಿಗಳು ಸ್ವ ಉದ್ಯೋಗಕ್ಕಾಗಿ ನಾನಾ ಯೋಜನೆಗಳನ್ನು ಹಾಕಿಕೊಳ್ಳಲಿದ್ದಾರೆ. ಆದರೆ ಕಾರ್ಯಗತಗೊಳಿಸಲು ಅಡ್ಡಿ ಆತಂಕಗಳಿರಲಿವೆ. ಆದರೆ ನಿರಾಸೆ ಬೇಡ. ಸುದೀರ್ಘ ಸಮಯದಿಂದ ಕಾಯುತ್ತಿದ್ದ ಮಿತ್ರನ ಭೇಟಿ ಮಾಡಲಿದ್ದೀರಿ.

ಕುಂಭ: ಬಹುದಿನಗಳ ಕನಸನ್ನು ನನಸು ಮಾಡಲು ಹೊರಡುತ್ತೀರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ಮೀನ: ನಿಮ್ಮ ವ್ಯವಹಾರದಲ್ಲಿ ಇದುವರೆಗೆ ತೊಂದರೆ ಕೊಡುತ್ತಿದ್ದ ಹಿತ ಶತ್ರುಗಳ ಹುನ್ನಾರ ಬೆಳಕಿಗೆ ಬರುವುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ದುರ್ಜನರ ಸಹವಾಸದಿಂದ ದೂರವಿರಿ. ಮಹಿಳೆಯರಿಗೆ ಕೌಟುಂಬಿಕ ಜವಾಬ್ಧಾರಿ ಹೆಚ್ಚುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಹೆಂಡತಿಯ ನಡುವಿನ ಕಲಹ ದೂರವಾಗಲು ಇಂದು ತಪ್ಪದೆ ಮಾಡಿ ಈ ಕೆಲಸ