ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 4 ಏಪ್ರಿಲ್ 2020 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮೇಲಧಿಕಾರಿಗಳ ನಿಜ ಬಣ್ಣ ಬಯಲಾಗಲಿದೆ. ಸಾಂಸಾರಿಕವಾಗಿ ಅನಗತ್ಯ ಕಿರಿ ಕಿರಿಗಳನ್ನು ಮೈಮೇಲೆಳೆದುಕೊಳ್ಳಬೇಡಿ. ಮೌನಕ್ಕೆ ಶರಣಾದರೆ ಲೇಸು. ಮಕ್ಕಳ ವಿಚಾರದಲ್ಲಿ ಚಿಂತೆಯಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಇಷ್ಟು ದಿನ ನಿಮ್ಮ ಬೆನ್ನ ಹಿಂದೆ ಸಂಚು ರೂಪಿಸುತ್ತಿದ್ದವರ ನಿಜ ಬಣ್ಣ ಬಯಲಾಗಲಿದೆ. ಆರ್ಥಿಕವಾಗಿ ಆದಾಯಕ್ಕಿಂತ ಖರ್ಚಾಗುತ್ತಿದೆ ಎಂಬ ಚಿಂತೆ ಕಾಡಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮಹಿಳೆಯರಿಗೆ ತವರಿನ ಉಡುಗೊರೆ ನಷ್ಟವಾಗುವ ಭೀತಿ.

ಮಿಥುನ: ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ನಿಮ್ಮ ತೊಂದರೆಗಳ ಪರಿಹಾರಕ್ಕೆ ಸಂಗಾತಿ ನೀಡುವ ಸಲಹೆಗಳು ಉಪಯೋಗಕ್ಕೆ ಬರಲಿವೆ. ದಾಯಾದಿ ಕಲಹಗಳು ಸದ್ಯಕ್ಕೆ ನಿವಾರಣೆಯಾಗಲಿವೆ. ಗೃಹಕೃತ್ಯಗಳಲ್ಲಿ ತೊಡಗಿಸಿಕೊಳ್ಳಿ.

ಕರ್ಕಟಕ: ಸ್ವಯಂ ವೃತ್ತಿಯವರಿಗೆ ಅಂದುಕೊಂಡ ರೀತಿಯಲ್ಲಿ ಕೆಲಸ ಸಾಗದೇ ಚಿಂತೆಯಾಗಬಹುದು. ಧನಾರ್ಜನೆಯ ದಾರಿಗೆ ಅಡ್ಡಿ ಎದುರಾಗಲಿದೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ. ಮಾತಿನ ಮೇಲೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ನೀರಿಗಾಗಿ ಕಲಹವಾಗುವ ಸಾಧ‍್ಯತೆ, ಎಚ್ಚರಿಕೆಯಿರಲಿ.

ಸಿಂಹ: ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಮನೆಯಲ್ಲಿ ಶಾಂತಿಗೆ ಭಂಗವಾಗುವ ಘಟನೆಗಳು ನಡೆಯಬಹುದು. ಸಂಯಮದಿಂದ ವರ್ತಿಸುವುದು ಒಳಿತು. ಹೊಸ ವಸ್ತುಗಳ ಖರೀದೀಗೆ ಕೆಲವು ದಿನ ಕಾಯುವುದು ಒಳಿತು.

ಕನ್ಯಾ: ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗದೇ ನಿರಾಶೆಯಾಗಬಹುದು. ಹೊಸ ವಸ್ತುಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ಇರಲಿದೆ. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ತುಲಾ: ಮನಸ್ಸು ಬಯಸಿದ ಕೆಲಸ ಮಾಡಲಾಗದೇ ನಿರಾಸೆಯಾಗಬಹುದು. ಮಹಿಳೆಯರಿಗೆ ಚಿನ್ನಾಭರಣಗಳನ್ನು ಜೋಪಾನ ಮಾಡುವ ಭೀತಿ. ಕೃಷಿಕರಿಗೆ ಬೆಳೆಗೆ ತಕ್ಕ ಬೆಲೆ ಸಿಗದು. ಸಂಚಾರ ಮುಂದೂಡಿಕೆಯಾಗಲಿದೆ. ಉತ್ತಮ ಸಮಯಕ್ಕಾಗಿ ಕೆಲವು ದಿನ ಕಾಯಲೇಬೇಕು.

ವೃಶ್ಚಿಕ: ಧಾರ್ಮಿಕವಾಗಿ ನಿಮ್ಮ ದೈವ ಭಕ್ತಿ ಪರೀಕ್ಷೆಯಾಗುವ ಕಾಲ ಎದುರಾಗಲಿದೆ. ಸಾಧು ಸಂತರ ಭೇಟಿ ಸಂಭವ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಧನು: ವೃತ್ತಿ ರಂಗದಲ್ಲಿ ಮೇಲ್ವರ್ಗದ ಅಧಿಕಾರಿಗಳಿಗೆ ಸಮಾಧಾನಕರ ದಿನ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟವಾಗುವ ಭೀತಿ. ಅವಿವಾಹಿತರ ವಿವಾಹ ಮಾತುಕತೆ ಮುರಿದು ಬೀಳಲಿದೆ. ನಿರುದ್ಯೋಗಿಗಳಿಗೆ ಸ್ವ ಉದ್ಯೋಗವೇ ಲೇಸು.

ಮಕರ: ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳನ್ನು ಹೊರಲು ಸಿದ್ಧರಾಗಬೇಕಾಗುತ್ತದೆ. ನೂತನ ದಂಪತಿಗಳು ಸುಂದರ ಕ್ಷಣ ಕಳೆಯಲಿದ್ದಾರೆ. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಬಹುದು. ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಕುಂಭ: ಮಾನಸಿಕವಾಗಿ ಬೇಡದ ಚಿಂತೆಗಳು ಕಾಡಿ ಕೆಲಸ ಕಾರ್ಯದಲ್ಲಿ ಒಂದು ರೀತಿಯ ನಿರುತ್ಸಾಹ ಕಾಡಬಹುದು. ಹಳೆಯ ಮಿತ್ರರ ಸಮಾಗಮವಾಗಲಿದೆ. ಸಂಗಾತಿಯೊಂದಿಗೆ ದುಡುಕಿ ಮಾತನಾಡಿದರೆ ಮನಸ್ತಾಪ ಗ್ಯಾರಂಟಿ. ತಾಳ್ಮೆ ಅಗತ್ಯ. ಖರ್ಚುಗಳಿಗೆ ಕಡಿವಾಣ ಹಾಕಿ.

ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆ ಬಾರದೇ ನಿರಾಸೆಯಾಗಬಹುದು. ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಕುಲದೇವರ ಪ್ರಾರ್ಥಿಸಿದರೆ ನೆಮ್ಮದಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಅಮಾವಾಸ್ಯೆ: ಮಹತ್ವ, ಆಚರಣೆ ಮತ್ತು ಶನಿದೇವನ ಕೃಪೆಗೆ ಸರಳ ಪರಿಹಾರಗಳು

ವಿವಾಹಾದಿ, ಸಂತಾನ ಸಮಸ್ಯೆಗಳ ನಿವಾರಣೆಗೆ ಓದಬೇಕಾದ ಸುಬ್ರಹ್ಮಣ್ಯ ಸ್ತೋತ್ರ

ಕಲ್ಯಾಣವೃಷ್ಟಿಸ್ತವ ಸ್ತೋತ್ರ ಕನ್ನಡದಲ್ಲಿ

ಗುರು ದೋಷ ನಿವಾರಣೆಗಾಗಿ ಈ ಮಂತ್ರವನ್ನು ಪಠಿಸಿ

ಬುಧವಾರ ಗಣೇಶನ ಈ ನಾಮಾವಳಿಯನ್ನು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments