Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಗುರುವಾರ, 2 ಏಪ್ರಿಲ್ 2020 (09:12 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯರಂಗದಲ್ಲಿ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾಗಬಹುದು. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕನಸು ನನಸು ಮಾಡಲು ಸಾಧ‍್ಯವಾಗದೇ ನಿರಾಸೆಯಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಸುಲಭವಾಗಿ ಕಾರ್ಯಗಳು ನಡೆಯದೇ ಇದ್ದಾಗ ಕ್ರಿಯಾತ್ಮಕ ದಾರಿಗಳ ಬಗ್ಗೆ ಯೋಚನೆ ನಡೆಸುವಿರಿ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಯಂತ್ರೋಪಕರಣ ಕೆಲಸ ಮಾಡುವವರಿಗೆ ಹಿನ್ನಡೆಯಾಗಬಹುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ಮಿಥುನ: ಹಳೆಯ ನೆನಪುಗಳು ಕಾಡಿ ಮಾನಸಿಕವಾಗಿ ಒಂದು ರೀತಿಯ ನಿರುತ್ಸಾಹ ಕಾಡಲಿದೆ. ಅನಿವಾರ್ಯವಾಗಿ ಪ್ರವಾಸ, ದೂರ ಸಂಚಾರ ಮುಂದೂಡಬೇಕಾಗುತ್ತದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಕುಲದೇವರ ಪ್ರಾರ್ಥನೆ ನಡೆಸಿದರೆ ಉತ್ತಮ.

ಕರ್ಕಟಕ: ಸಂತಾನಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಎಷ್ಟೋ ದಿನಗಳಿಂದ ಬಾಕಿಯಿದ್ದ ಹರಕೆ ತೀರಿಸಲು ಚಿಂತನೆ ನಡೆಸಲಿದ್ದೀರಿ. ಹಿರಿಯರ ಮಾತಿಗೆ ಬೆಲೆಕೊಡಬೇಕಾಗುತ್ತದೆ. ವಾಹನ ಸವಾರರಿಗೆ ಅಪಘಾತದ ಭಯವಿದೆ. ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.

ಸಿಂಹ: ಹಣಕಾಸಿನ ವಿಚಾರದಲ್ಲಿ ಮಿತ್ರರೊಂದಿಗೆ ವೈಮನಸ್ಯವೇರ್ಪಡುವುದು. ಇಂದು ಯಾರಿಗೂ ಸಾಲ ಕೊಡದೇ ಇರುವುದೇ ಉತ್ತಮ. ಹೊಸ ಕೆಲಸಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟದ ಭೀತಿ ಎದುರಾಗಲಿದೆ.

ಕನ್ಯಾ: ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡರೆ ಮನೆಯಲ್ಲಿ ಮನಸ್ತಾಪ ಗ್ಯಾರಂಟಿ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಮನೆಗೆ ಅತಿಥಿಗಳ ಆಗಮನದ ಸಾಧ‍್ಯತೆ. ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ.

ತುಲಾ: ಎಷ್ಟೋ ದಿನದಿಂದ ಅಂದುಕೊಂಡಿದ್ದ ಗೃಹ ಸಂಬಂಧೀ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಇಷ್ಟಾರ್ಥ ಸಿದ್ಧಿಗೆ ಕುಲದೇವರ ಪ್ರಾರ್ಥನೆ ನಡೆಸಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲು ಕೆಲವು ದಿನ ಕಾಯಬೇಕಾಗುತ್ತದೆ.

ವೃಶ್ಚಿಕ: ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಇದುವರೆಗೆ ನಿಮಗೆ ತೊಂದರೆ ಕೊಡುತ್ತಿದ್ದ ಶತ್ರು ಪೀಡೆ ನಾಶವಾಗಲಿದೆ. ನೂತನ ದಂಪತಿಗಳು ಸುಮಧುರ ಕ್ಷಣ ಕಳೆಯಲಿದ್ದಾರೆ. ದಿನದಂತ್ಯಕ್ಕೆ ಶುಭ ಸುದ್ದಿ.

ಧನು: ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಉತ್ತಮ ಕ್ಷಣ ಕಳೆಯಲಿದ್ದೀರಿ. ಮನೆಯಲ್ಲಿ ಒಂದು ರೀತಿಯ ಸಂತಸದ ವಾತಾವರಣವಿರಲಿದೆ. ಆದರೆ ಬಾಯಿ ತಪ್ಪಿ ಬರುವ ಮಾತಿನಿಂದ ಇತರರಿಗೆ ನೋವುಂಟುಮಾಡಬೇಡಿ. ಸಂಯಮ ಕಾಪಾಡುವುದು ಅಗತ್ಯ.

ಮಕರ: ದೂರವಾಗಿದ್ದ ಸಂಬಂಧಗಳು ಮತ್ತೆ ಬೆಸೆಯಲಿವೆ. ಹಿರಿಯರಿಂದ ಬಂದ ಬಳುವಳಿಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲೆ ಬರಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಮೇಲ್ದರ್ಜೇಗರುವ ಅವಕಾಶವಿದೆ. ಬಳಸಿಕೊಳ್ಳಿ.

ಕುಂಭ: ಉತ್ತಮ ಸಮಯಕ್ಕಾಗಿ ಕಾಯಲೇಬೇಕಾಗುತ್ತದೆ. ಆತುರದಲ್ಲಿ ನಿರ್ಧಾರ ಕೈಗೊಳ್ಳಲು ಹೋಗಬೇಡಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಬಹುದು. ನೌಕರ ವರ್ಗದವರಿಗೆ ನಷ್ಟದ ಭೀತಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದ ಕೊರತೆ ಕಂಡುಬರಬಹುದು. ಹೆಚ್ಚುವರಿ ಜವಾಬ್ಧಾರಿಗಳಿಗೆ ಹೆಗಲುಕೊಡಬೇಕಾಗುತ್ತದೆ. ಆದರೆ ಕೌಟುಂಬಿಕವಾಗಿ ನೆಮ್ಮದಿಯ ದಿನವಾಗಿದ್ದು, ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ