Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 1 ಏಪ್ರಿಲ್ 2020 (09:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಅಧಿಕ ಕಾರ್ಯದೊತ್ತಡವಿರಲಿದ್ದು, ಸಹೋದ್ಯೋಗಿಗಳ ಸಹಕಾರ ಸಿಗದೇ ಬೇಸರವಾಗಲಿದೆ. ಮನೆಯಲ್ಲಿ ಸಂಗಾತಿಯೊಂದಿಗೆ ಅನಗತ್ಯ ಕಿರಿ ಕಿರಿಗಳು ಬರಲಿವೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಕಾಡದಂತೆ ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ನೀವು ಅಂದುಕೊಂಡ ಕೆಲಸ ಮಾಡಲು ಅಡೆತಡೆಗಳು ತೋರಿಬಂದೀತು. ಆಂಜನೇಯನ ಪ್ರಾರ್ಥನೆ ಮಾಡುವುದರಿಂದ ಮನಸ್ಸಿಗೆ ಶಕ್ತಿ ಬರಲಿದೆ. ಸಂಗಾತಿಯ ಸಹಕಾರ ಸಿಗಲಿದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ.

ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಹೆಚ್ಚಿನ ಕಾರ್ಯ ಸಾಧನೆಗೆ ಪಾಲಿಗೆ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾಗುತ್ತದೆ. ವ್ಯವಹಾರಗಳು ಕೈಗೂಡಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಶುಭವಾಗಲಿದೆ. ಸಂಗಾತಿಯ ಕೆಲಸಗಳಿಗೆ ಸಹಾಯ ಮಾಡಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಕಾರ್ಯ ನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.

ಸಿಂಹ: ಸಾಮಾಜಿಕವಾಗಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಲಭ್ಯವಾಗಲಿದೆ. ಹೆಚ್ಚಿನ ಕಾರ್ಯ ಸಾಧನೆಗೆ ಮಿತ್ರರ ಸಹಾಯ ಪಡೆಯುವಿರಿ. ಕಲಾ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನ ಮಾನ ಯೋಗವಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಕಡೆಗೆ ಗಮನ ಹರಿಸಲಿದ್ದಾರೆ.

ಕನ್ಯಾ: ವ್ಯವಹಾರದಲ್ಲಿ ಸಾಕಷ್ಟು ಬಿಡುವು ಸಿಗಲಿದ್ದು, ಕ್ರಿಯಾತ್ಮಕ ಕೆಲಸಗಳ ಕಡೆಗೆ ಗಮನ ಹರಿಸುವಿರಿ. ನಿಮ್ಮ ಇಷ್ಟದ ಚಟುವಟಿಕೆ ಮಾಡಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಚಿಂತೆಯಾಗಲಿದೆ. ಅವಿವಾಹಿತರು ಉತ್ತಮ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಒಳಿತು.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ವಾಗ್ವಾದಗಳಾಗದಂತೆ ಎಚ್ಚರಿಕೆ ವಹಿಸಿ. ಸರಕಾರಿ ಕೆಲಸಗಳಿಗೆ ತೊಂದರೆಯಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ.

ವೃಶ್ಚಿಕ: ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ನೂತನ ದಂಪತಿಗಳಿಗೆ ಸಾಮರಸ್ಯದ ಕೊರತೆ ಕಾಡಲಿದೆ. ಕುಟುಂಬದವರ ಕ್ಷೇಮಕ್ಕಾಗಿ ಕೆಲವೊಂದು ಹೊಸ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ.

ಧನು: ಸಹೋದರರ ಪ್ರೀತಿ, ಆದರಗಳಿಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬರಲಿದೆ. ಕೃಷಿಕರಿಗೆ ಕೈಗೆ ಬಂದ ಬೆಳೆಗೆ ತಕ್ಕ ಬೆಲೆ ಸಿಗದೇ ನಿರಾಸೆಯಾಗಬಹುದು. ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ಇಷ್ಟು ದಿನ ಬೇಡವೆಂದು ದೂರವಿಟ್ಟಿದ್ದ ವಸ್ತುಗಳೂ ಈಗ ಉಪಯೋಗಕ್ಕೆ ಬರುವುದು. ವ್ಯಾಪಾರಿಗಳಿಗೆ ಆದಾಯದ ಮೂಲಕ್ಕೆ ತೊಂದರೆಯಾಗಲಿದೆ. ಇಷ್ಟಾರ್ಥ ಸಿದ್ಧಿಗೆ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಸಂಗಾತಿಗೆ ಪ್ರೀತಿಯ ಉಡುಗೊರೆ ನೀಡಲಿದ್ದೀರಿ.

ಕುಂಭ: ಉನ್ನತ ಸ್ಥಾನ ಮಾನಕ್ಕಾಗಿ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಮಹಿಳೆಯರಿಗೆ ಗೃಹ ಕೃತ್ಯಗಳಿಗಾಗಿ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಶತ್ರು ಬಾಧೆ ನಾಶವಾಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮೀನ: ನೂತನ ಗೃಹ ನಿರ್ಮಾಣ ಕಾರ್ಯಗಳಿಗೆ ಅಡ್ಡಿ ಆತಂಕಗಳು ಎದುರಾಗಲಿವೆ. ದಾಯಾದಿಗಳೊಂದಿಗಿನ ಕಲಹ ನಿವಾರಣೆಯಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲದ ಸುಳಿಯಿಂದ ಹೊರಬರಲು ಬಿಳಿ ಎಕ್ಕದ ಎಲೆಯಿಂದ ಈ ಸಣ್ಣ ತಂತ್ರ ಮಾಡಿ