Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಶನಿವಾರ, 28 ಮಾರ್ಚ್ 2020 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದಿನವೂ ಸಾಯುವವರಿಗೆ ಅಳುವವರು ಯಾರು ಎಂಬ ಸ್ಥಿತಿ ನಿಮ್ಮದಾಗಲಿದೆ. ಅನಗತ್ಯ ಚಿಂತೆಗಳನ್ನು ಮರೆತು ಮುಂದೆ ಹೆಜ್ಜೆ ಹಾಕಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಗೃಹಕೃತ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕಲಿದ್ದೀರಿ. ವ್ಯವಹಾರದಲ್ಲಿ ಹಿತಶತ್ರುಗಳ ಕಾಟವಿರಲಿದೆ. ಧಾರ್ಮಿಕವಾಗಿ ಭಕ್ತಿ ಭಾವ ಮೂಡಲಿದೆ.

ಮಿಥುನ: ಸಾಲಗಾರರ ಕಾಟದಿಂದ ಮುಕ್ತಿ ಪಡೆಯಲಿದ್ದೀರಿ. ಆರ್ಥಿಕವಾಗಿ ಸ್ಥಿತಿ ಗತಿ ಸುಧಾರಣೆಯಾಗಲಿದೆ. ಅಧಿಕ ಮಿತ್ರರ ಸಂಗದಿಂದ ಲಾಭವೇನೂ ಆಗದು. ಸಮಯ ವ್ಯರ್ಥವಾಗುವುದಷ್ಟೇ. ಅವಿವಾಹಿತರ ವಿವಾಹ ಪ್ರಯತ್ನಗಳನ್ನು ಕೆಲವು ದಿನ ಮುಂದೂಡುವುದು ಉತ್ತಮ.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ಶತ್ರು ಬಾಧೆ ಅಧಿಕವಾಗಲಿದ್ದು, ಕೈಗೊಂಡ ಕೆಲಸಗಳು ಅರ್ಧಕ್ಕೇ ನಿಲ್ಲಲಿವೆ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ನಿರುದ್ಯೋಗಿಗಳು ಸ್ವಯಂ ವೃತ್ತಿಯ ಕಡೆಗೆ ಗಮನ ಹರಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಮುನ್ನಡೆ.

ಸಿಂಹ: ಕಷ್ಟದ ಸಂದರ್ಭದಲ್ಲಿ ಸಮಸ್ಯೆ ಪರಿಹಾರಕ್ಕೆ ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ. ಹೊಸ ಜನರ ಭೇಟಿಯಿಂದ ಲಾಭವಾಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ಥಾನ ಪಲ್ಲಟ ಭೀತಿಯಿದೆ. ಕಲಾ ಕ್ಷೇತ್ರದಲ್ಲಿರುವವರಿಗೆ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಸಿಗಲಿದೆ.

ಕನ್ಯಾ: ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ನಿಮ್ಮ ಮನಸ್ಸಿನ ಲಹರಿ ಹಾಳು ಮಾಡಿಕೊಳ್ಳಬೇಡಿ. ಮೇಲಧಿಕಾರಿಗಳೊಂದಿಗೆ ವ್ಯವಹರಿಸುವಾಗ ಸಂಯಮವಿರಲಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತಲೆದೋರಲಿವೆ. ತಾಳ್ಮೆಯಿರಲಿ.

ತುಲಾ: ಇಷ್ಟ ಮಿತ್ರರ ಭೇಟಿ, ಭೋಜನ ಯೋಗವಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ವೃಶ್ಚಿಕ: ಸಹೋದರಿಯರ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದೂರ ಸಂಚಾರ ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ. ಮನೆ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ.

ಧನು: ಭೂಮಿ, ಮನೆ ಖರೀದಿ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ಆರ್ಥಿಕವಾಗಿ ಆದಾಯ ಕುಂಠಿತವಾಗಲಿದ್ದು, ಚಿಂತೆಗೆ ಕಾರಣವಾಗಲಿದೆ. ನೂತನ ದಂಪತಿಗಳು ಹೊಂದಾಣಿಕೆ ಕೊರತೆ ಅನುಭವಿಸಲಿದ್ದೀರಿ. ಸಮಾಧಾನ ಚಿತ್ತದಿಂದ ಆಲೋಚನೆ ಮಾಡುವುದು ಮುಖ್ಯ.

ಮಕರ: ಅನಗತ್ಯವಾಗಿ ಮಕ್ಕಳ ವಿಚಾರದಲ್ಲಿ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಿರಿ. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು, ಎಚ್ಚರ. ಪ್ರಿಯತಮೆಯನ್ನು ಸಂತುಷ್ಠಗೊಳಿಸಲು ಉಡುಗೊರೆ ನೀಡಲಿದ್ದೀರಿ.

ಕುಂಭ: ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸಂಗಾತಿಯ ಸಹಕಾರ ದೊರೆಯಲಿದೆ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ಮಾಡಿದರೆ ಮತ್ತಷ್ಟು ಶುಭ.

ಮೀನ: ವೃತ್ತಿರಂಗದಲ್ಲಿ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡೆತಡೆಗಳು ಬರಲಿವೆ. ಕೊಡು ಕೊಳ್ಳುವಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಕಾರ್ಯನಿಮಿತ್ತ ಓಡಾಟದಿಂದ ದೇಹಾಯಾಸವಾಗಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಗೆ ಭಂಗವಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರು ಹಾಗೂ ಮಹಿಳೆಯರು ಈ ಕೆಲಸವನ್ನು ತುಂಬಾ ಹೊತ್ತು ಮಾಡಬೇಡಿ