Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 13 ಮಾರ್ಚ್ 2020 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಹಲವು ರೀತಿಯ ಅವಕಾಶಗಳು ಒದಗಿ ಬರಲಿವೆ. ಅದನ್ನು ಬಳಸಿಕೊಳ್ಳುವ ಜಾಣತನ ಬೇಕಷ್ಟೇ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುವ ಕೆಲಸಕ್ಕೆ ಮುಂದಾಗಲಿದ್ದೀರಿ.

ವೃಷಭ: ಇಂದು ನಿಮಗೆ ಮಿಶ್ರಫಲ ದೊರೆಯಲಿದೆ. ಭಾವನಾತ್ಮಕವಾಗಿ ಯೋಚನೆ ಮಾಡುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಿದ್ದರೂ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಖರ್ಚು ವೆಚ್ಚಗಳು ಬರಲಿವೆ. ನಿಮ್ಮ ನಿರ್ಧಾರಗಳನ್ನು ಇತರರು ನಿರ್ಧರಿಸುವ ಪರಿಸ್ಥಿತಿ ತಂದುಕೊಳ್ಳಬೇಡಿ. ಹಿರಿಯರ ವಿಚಾರದಲ್ಲಿ ಅಸಡ್ಡೆ ಬೇಡ. ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಶುಭ ಸುದ್ದಿಯಿದೆ. ಚಿಂತೆ ಬೇಡ.

ಕರ್ಕಟಕ: ಹಲವಾರು ಚಿಂತೆಗಳು ಮನಸ್ಸಿನಲ್ಲಿ ಕಾಡುವುದರಿಂದ ದೈನಂದಿನ ಕೆಲಸದಲ್ಲಿ ನಿರುತ್ಸಾಹ ಕಂಡುಬರಲಿದೆ. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ರಾಜಕೀಯದಲ್ಲಿ ಇರುವವರಿಗೆ ಮುನ್ನಡೆಯ ಅವಕಾಶಗಳು ಸಿಗಲಿವೆ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದಾಗಿ ಎಂತಹ ಸವಾಲು ಬಂದರೂ ಸಮರ್ಥವಾಗಿ ಎದುರಿಸಲಿದ್ದೀರಿ. ವಿನಾಕಾರಣ ಇತರರ ಮೇಲೆ ದೂಷಾರೋಪಣೆ ಮಾಡುವುದನ್ನು ಬಿಡಿ. ಆರ್ಥಿಕವಾಗಿ ಮಿಶ್ರಫಲಗಳಿರಲಿವೆ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ.

ಕನ್ಯಾ: ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿಗಳನ್ನು ನಿಭಾಯಿಸಬೇಕಾದ ಒತ್ತಡವಿರಲಿದೆ. ಪ್ರಯತ್ನಬಲವಿದ್ದರೆ ಯಶಸ್ಸು ಸಾಧ‍್ಯವಿದೆ. ಹಣಕಾಸಿನ ವಿಚಾರಲ್ಲಿ ಲೆಕ್ಕಾಚಾರ ಸರಿಯಾಗಿರಲಿ. ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಉತ್ತಮ.

ತುಲಾ: ಒಂದೇ ಪ್ರಯತ್ನದಲ್ಲಿ ವಿಫಲವಾದಿರೆಂದು ಸೋತು ಹೋದ ಮನೋಭಾವ ಕಾಡಲಿದೆ. ಆದರೆ ನಿರಾಸೆಯಾಗಬೇಡಿ. ಸಾಂಸಾರಿಕವಾಗಿ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿ. ನಿಮ್ಮ ಉತ್ತಮ ನಡೆಯಿಂದಲೇ ಇತರರ ಮನ ಗೆಲ್ಲಲಿದ್ದೀರಿ. ಹೊಂದಾಣಿಕೆ ಅಗತ್ಯ.

ವೃಶ್ಚಿಕ: ದೃಢವಾದ ಹೆಜ್ಜೆಯಿಟ್ಟರೆ ಪ್ರಗತಿ ಸಾಧಿಸುವುದು ಸುಲಭವಾಗಲಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರಂಗದಲ್ಲಿ ಮುನ್ನಡೆ ಸಿಗಲಿದೆ. ವೈಯಕ್ತಿಕವಾಗಿ ದೇಹಾರೋಗ್ಯದ ಬಗ್ಗೆ ಗಮನ ಹರಿಸಿ. ಆರ್ಥಿಕವಾಗಿ ನಷ್ಟವಾಗುವ ಭೀತಿ ಎದುರಾಗಲಿದೆ.  

ಧನು: ಮಾತಿನ ಮೇಲೆ ಸಂಯಮವಿರಲಿ. ನಿಮ್ಮ ಕೆಲವೊಂದು ನಿಷ್ಠುರ ನಡೆ ಇತರರ ಮನಸ್ಸಿಗೆ ಕಿರಿ ಕಿರಿಯಾಗಬಹುದು. ವೈವಾಹಿಕ ಸಂಬಂಧದಲ್ಲಿ ಸಮಸ್ಯೆ ಎದುರಾಗಬಹುದು. ಸಾಲ ಮರುಪಾವತಿಯಾಗಲಿದೆ. ಉದ್ಯೋಗದಲ್ಲಿ ಬದಲಾವಣೆಗೆ ಮನಸ್ಸು ಬಯಸುವುದು.

ಮಕರ: ನಿಮ್ಮ ಸಮಸ್ಯೆಗಳನ್ನು ಇತರರಿಗೆ ಅರ್ಥ ಮಾಡಿಸುವಲ್ಲಿ ಸೋಲುವಿರಿ. ಬಯಸಿದ ಕೆಲಸಗಳು ನಡೆಯದೇ ಮನಸ್ಸಿಗೆ ಬೇಸರವಾಗಬಹುದು. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಕಾರ್ಯನಿಮಿತ್ತ ಸಂಚಾರ ಮಾಡುವಾಗ ಎಚ್ಚರಿಕೆಯಿಂದಿರಿ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಸಂಘಟಿತ ಪ್ರಯತ್ನದಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವಿರಿ. ಆರ್ಥಿಕವಾಗಿ ಸಾಲ ಪಾವತಿಯ ಚಿಂತೆ ಕಾಡಲಿದೆ. ಅವಿವಾಹಿತರಿಗೆ ಹೊಸ ನೆಂಟಸ್ತಿಕೆಗಳು ಕೂಡಿಬರಲಿವೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಮೀನ: ನಿಮ್ಮ ಸಮಸ್ಯೆಯನ್ನು ಮುಕ್ತ ಮನಸ್ಸಿನಿಂದ ಸಂಗಾತಿಯೊಂದಿಗೆ ಹಂಚಿಕೊಳ್ಳುವುದರಿಂದ ಪರಿಹಾರ ಸಿಗಲಿದೆ. ಉದ್ಯೋಗದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಿ. ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ಕಂಡುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಸ್ಯೆಗಳು ನಿವಾರಣೆಯಾಗಬೇಕೆಂದರೆ ಆಂಜನೇಯ ಸ್ವಾಮಿಗೆ ಈ ಹರಕೆ ಹೇಳಿಕೊಳ್ಳಿ