Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 18 ನವೆಂಬರ್ 2019 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನಗತ್ಯ ವಿಚಾರಗಳಿಗೆ ಮನೆಯಲ್ಲಿ ವಾದ ವಿವಾದಗಳಾಗಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ದುಡುಕಿನ ವರ್ತನೆಗೆ ಕಡಿವಾಣ ಹಾಕಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಬಾಕಿ ಹಣ ವಸೂಲಿಯ ಚಿಂತೆ ಕಾಡುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಅಂದುಕೊಂಡ ಕಾರ್ಯ ನೆರವೇರಿಸಲು ಹಲವು ವಿಘ್ನಗಳು ಎದುರಾದೀತು. ಎಲ್ಲವನ್ನೂ ಎದುರಿಸಿಕೊಂಡು ಹೋಗುವ ಆತ್ಮಸ್ಥೈರ್ಯ ಇರಬೇಕು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಕೊರತೆ ಕಾಣಬಹುದು. ತಾಳ್ಮೆಯಿಂದಿರಿ.

ಮಿಥುನ: ತಾಳಿದವನು ಬಾಳಿಯಾನು ಎಂದು ಕೇಳಿಲ್ಲವೇ? ಹಾಗೆಯೇ ಇಂದು ನಿಮ್ಮ ಜೀವನದಲ್ಲಿ ನಿಧಾನವಾಗಿಯಾದರೂ ನೀವು ಅಂದುಕೊಂಡ ಉದ್ದೇಶ ಈಡೇರಿಸಿಕೊಳ್ಳುವಿರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ಹಿರಿಯರಿಂದ ಬಂದ ಬಳುವಳಿ ಕಾಪಾಡಿಕೊಳ್ಳುವ ಹೊಣೆ ನಿಮ್ಮದು.

ಕರ್ಕಟಕ: ಕಲಾ ಕ್ಷೇತ್ರದಲ್ಲಿರುವವರಿಗೆ ಉನ್ನತಿಯ ಯೋಗವಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರಲಿದೆ. ನೂತನ ದಂಪತಿಗಳಲ್ಲಿ ವಿರಸ ಮೂಡಬಹುದು, ಎಚ್ಚರ. ಧನಾದಾಯಕ್ಕೆ ಕೊರತೆಯಾಗದು.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಹಿನ್ನಡೆಯ ಭೀತಿ ಎದುರಾಗಲಿದೆ. ತಾಳ್ಮೆಯಿಂದ ಎಲ್ಲವನ್ನೂ ಎದುರಿಸಬೇಕು. ಇಷ್ಟ ಮಿತ್ರರ ಭೇಟಿ, ಭೋಜನ ಸಾಧ‍್ಯತೆಯಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

 
ಕನ್ಯಾ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡುವಿರಿ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ಎಚ್ಚರಿಕೆಯಿಂದಿರಬೇಕು. ಸಂಗಾತಿಯ ಸಲಹೆಗಳು ಫಲ ನೀಡಲಿವೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ತುಲಾ: ಧಾರ್ಮಿಕ ಕ್ಷೇತ್ರಗಳ ಸಂದರ್ಶನ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಮಾನಸಿಕ ಗೊಂದಲಗಳಿಗೆ ಹಿರಿಯರಿಂದ ಪರಿಹಾರ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ಬಾಕಿ ಹಣ ಸಂದಾಯವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಯಾನ ಮಾಡುವ ಯೋಗ ಎದುರಾಗಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಪೋಷಕರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ. ದೇವತಾ ಪ್ರಾರ್ಥನೆ ಮಾಡಿ.

ಧನು: ಕುಲದೇವರ ಪ್ರಾರ್ಥನೆ ನಡೆಸಿ ಹೊಸ ಕಾರ್ಯಗಳಿಗೆ ಕೈ ಹಾಕಿದರೆ ಇಂದು ಫಲ ಕೊಡುವುದು ಗ್ಯಾರಂಟಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ಅಂತಿಮ ಜಯ ನಿಮ್ಮದಾಗುವುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಮಕರ: ನೀವು ಕೈಗೊಳ್ಳುವ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರಿಗೆ ಇಷ್ಟವಾಗದೇ ಇರಬಹುದು. ಸರಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಉದರ ಸಂಬಂಧೀ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಅನಗತ್ಯ ಚಿಂತೆಗಳು ನಿಮ್ಮ ದೈನಂದಿನ ಕೆಲಸದ ಮೇಲೆ ಪರಿಣಾಮ ಬೀರಲಿದೆ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಗೃಹೋಪಯೋಗಿ ವಸ್ತುಗಳಿಗೆ ಸಾಕಷ್ಟು ಧನ ವ್ಯಯ ಮಾಡಬೇಕಾಗುತ್ತದೆ. ಹೊಸ ಮಿತ್ರರ ಭೇಟಿ ಸಾಧ‍್ಯತೆ.

ಮೀನ: ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಂಗಾತಿಯ ಮನದಾಸೆ ಪೂರೈಸುವಿರಿ. ಅವಿವಾಹಿತರ ವಿವಾಹ ಪ್ರಯತ್ನಗಳಿಗೆ ಕೊಂಚ ಹಿನ್ನಡೆಯಾಗಿ ನಿರಾಸೆಯಾಗಬಹುದು. ತಾಳ್ಮೆ ಕಳೆದುಕೊಳ್ಳಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿ ಭಂಗು ಬಂದರೆ ಏನು ದೋಷ ಗೊತ್ತಾ?