Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 17 ನವೆಂಬರ್ 2019 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬರಬೇಕಾಗಿರುವ ಬಾಕಿ ಹಣ ಬರಲಿದೆ. ಆದರೆ ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಗಮನ ಕೊಡಲೇಬೇಕು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಕೌಟುಂಬಿಕವಾಗಿ ನೀವು ಹೆಚ್ಚಿನ ಜವಾಬ್ಧಾರಿ ಹೊರಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವಾಹನ ರಿಪೇರಿಗಾಗಿ ಹೆಚ್ಚಿನ ಖರ್ಚು ವೆಚ್ಚಗಳಾಗಬಹುದು. ಮನಸ್ಸಿನ ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡುವಿರಿ. ಇಂದು ಪ್ರಯಾಣವನ್ನು ಆದಷ್ಟು ರದ್ದು ಮಾಡುವುದೇ ಉತ್ತಮ. ವಾಹನ ಸವಾರರಿಗೆ ಅಪಘಾತದ ಭಯವಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.

ಮಿಥುನ: ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಲಿವೆ. ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಾಗ ಅಡೆತಡೆಗಳು ಎದುರಾದೀತು. ಕಾರ್ಯದೊತ್ತಡ ಅಧಿಕವಾಗಲಿದೆ. ಆದರೆ ಹಣಕಾಸಿನ ಅಡಚಣೆಗಳು ಎದುರಾದೀತು.

ಕರ್ಕಟಕ: ನ್ಯಾಯಾಲಯ ಕಲಾಪದಲ್ಲಿ ಜಯ ನಿಮ್ಮದಾಗುವುದು. ದಾಯಾದಿಗಳೊಂದಿಗಿನ ಮನಸ್ತಾಪಗಳು ದೂರವಾಗಲಿದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನ ವ್ಯಯ ಮಾಡುವಿರಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಸಿಂಹ: ಪಾಲು ಬಂಡವಾಳ ವ್ಯವಹಾರದಿಂದ ಹೆಚ್ಚಿನ ಲಾಭ ಗಳಿಸಬಹುದು. ಹೊಸ ಕೆಲಸ ಕಾರ್ಯಗಳಿಗೆ ಕೈ ಹಾಕುವಿರಿ. ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಕಾಳಜಿ ವಹಿಸಿ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

 
ಕನ್ಯಾ: ನಾಲಿಗೆ ಚಪಲದಿಂದ ಉದರ ಸಂಬಂಧೀ ಆರೋಗ್ಯ ಸಮಸ್ಯೆ ತಂದುಕೊಳ್ಳುವಿರಿ. ದುರ್ಜನ ಮಿತ್ರರ ಸಹವಾಸಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಆದಾಯದ ಮೂಲಕ್ಕೆ ಪೆಟ್ಟು ಬೀಳಲಿದ್ದು, ಚಿಂತೆಗೆ ಕಾರಣವಾಗುವುದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ತುಲಾ: ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಸಾಮಾಜಿಕವಾಗಿ ಉನ್ನತ ಸ್ಥಾನ ಮಾನ ಲಭ್ಯವಾಗಲಿದೆ. ಸಣ್ಣ ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ.

ವೃಶ್ಚಿಕ: ಮೈ ಚಳಿ ಬಿಟ್ಟು ಕೆಲಸ ಮಾಡಿದರೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಗಳಿಸಲಿದ್ದೀರಿ. ಆದಾಯ ವೃದ್ಧಿಯಾಗಿ ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಮಹಿಳೆಯರಿಂದ ಶುಭ ಫಲ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಚಿಂತೆ ಬೇಕಾಗಿಲ್ಲ.

ಧನು: ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಪ್ರವಾಸ, ಯಾತ್ರೆಗಳಿಂದ ಕೌಟುಂಬಿಕವಾಗಿ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರವಿರಲಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಡಿ.

ಮಕರ: ಕಷ್ಟದ ಸಮಯದಲ್ಲಿ ಬಂಧು ಮಿತ್ರರ ಸಹಕಾರ ಸಿಗಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆದರೆ ಖರ್ಚು ವೆಚ್ಚಗಳಿಗೂ ಕಡಿವಾಣ ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕುಂಭ: ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಮಹಿಳೆಯರಿಂದ ಅಪವಾದದ ಭೀತಿಯಿದೆ, ಎಚ್ಚರವಾಗಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರುವುದು. ಕೌಟುಂಬಿಕ ಸಂಬಂಧ ಕಾಪಾಡಿಕೊಳ್ಳುವ ಜವಾಬ್ಧಾರಿ ನಿಮ್ಮ ಮೇಲಿರಲಿದೆ.

ಮೀನ: ಕೂಡಿಟ್ಟ ಹಣ ಕಳ್ಳತನವಾಗುವ ಭೀತಿ ಕಾಡಲಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ