ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 23 ಅಕ್ಟೋಬರ್ 2019 (08:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಘನತೆಗೆ ಕುಂದು ತರುವ ಘಟನೆಗಳು ನಡೆಯಬಹುದು. ಎಚ್ಚರಿಕೆಯಿಂದಿರಿ. ಮಹಿಳೆಯರಿಂದ ಮಾನ ಹಾನಿ ಸಂಭವವಿದೆ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಕೆಲಸ ಕೆಟ್ಟೀತು. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಮಕ್ಕಳಿಂದ ಶುಭ ಫಲ ನಿರೀಕ್ಷಿಸಬಹುದು. ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಕೈ ಹಿಡಿದ ಕೆಲಸಗಳು ಫಲಗೂಡುವುದು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರುವುದು.

ಮಿಥುನ: ಶುಭ ಮಂಗಲ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಮಾನಸಿಕವಾಗಿ ಗೊಂದಲಗಳು, ಖಿನ್ನತೆ ಕಾಡಲಿದೆ. ತಾಳ್ಮೆ, ಸಮಾಧಾನ ಅಗತ್ಯ. ಸಂಗಾತಿಯ ಸಲಹೆಗೆ ಕಿವಿಗೊಡಿ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚುವುದು. ಆರ್ಥಿಕ ಪರಿಸ್ಥಿತಿ ಬಗ್ಗೆ ಎಚ್ಚರ.

ಕರ್ಕಟಕ: ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಸಂತಾನ ಸೂಚಕ ಫಲ ಸಿಗಲಿದೆ. ಮನೆಯಲ್ಲಿ ಸಂತಸದ ವಾತಾವರಣವಿರುವುದು. ವೃತ್ತಿರಂಗದಲ್ಲಿ ಅಧಿಕ ಕಾರ್ಯದೊತ್ತಡವಿರಲಿದ್ದು, ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ಬೇಸರವಾಗಬಹುದು.

ಸಿಂಹ: ಅನಿರೀಕ್ಷಿತವಾಗಿ ಹಣದ ಹರಿವು ಬರಲಿದ್ದು, ಅಂದುಕೊಂಡ ಕೆಲಸಗಳನ್ನು ನೆರವೇರಿಸುವಿರಿ. ಸಂಗಾತಿಯೊಂದಿಗೆ ಮನಸ್ತಾಪಗಳಾಗದಂತೆ ಎಚ್ಚರಿಕೆ ವಹಿಸಿ. ದಾಯಾದಿ ಕಲಹಗಳಿಗೆ ಅಂತ್ಯ ಸಿಗುವುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

 
ಕನ್ಯಾ: ವಿದ್ಯಾರ್ಥಿಗಳಿಗೆ ಓದಿದ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎಂಬ ಹತಾಶೆ ಕಾಡಲಿದೆ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆಯ ಭಾಗ್ಯವಿದೆ. ಖರ್ಚು ವೆಚ್ಚದ ಬಗ್ಗೆ ಎಚ್ಚರವಿರಲಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು.

ತುಲಾ: ಶಾರೀರಕವಾಗಿ ಆರೋಗ್ಯದಿಂದಿದ್ದರೂ ಮಾನಸಿಕವಾಗಿ ಯಾವುದೋ ಚಿಂತೆ ಕಾಡುವುದು. ಅನಗತ್ಯ ವಿವಾದಗಳಿಂದ ದೂರವಿರುವುದೇ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಿರುತ್ಸಾಹ ಕಾಡಬಹುದು. ಕೌಟುಂಬಿಕವಾಗಿ ಮಕ್ಕಳಿಂದ ಸಂತಸ ನಿರೀಕ್ಷಿಸಬಹುದು.

ವೃಶ್ಚಿಕ: ಉತ್ಸಾಹದಿಂದ ಹೊಸ ಕೆಲಸಕ್ಕೆ ಕೈ ಹಾಕಿದರೂ ಅಡೆತಡೆಗಳಿಂದ ಉತ್ಸಾಹ ಕಳೆದುಕೊಳ್ಳುವಿರಿ. ಮಾನಸಿಕವಾಗಿ ದೃಢಸಂಕಲ್ಪ ಅಗತ್ಯ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಹಿರಿಯರೊಡನೆ ವ್ಯವಹರಿಸುವಾಗ ದುಡುಕಿ ಮಾತನಾಡಬೇಡಿ.

ಧನು: ಬಂಧು ಮಿತ್ರರ ಸಹಾಯದಿಂದ ಬರುವಂತಹ ಕಷ್ಟಗಳನ್ನು ಎದುರಿಸಿ ನಿಲ್ಲುವಿರಿ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯ ಭಾಗ್ಯವಿದೆ. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ.

ಮಕರ: ಕಾರ್ಯನಿಮಿತ್ತ ದೂರ ಸಂಚಾರ ಮಾಡುವುದರಿಂದ ಕಾರ್ಯಸಿದ್ಧಿಯಾಗುವುದು. ಆದರೆ ಪ್ರಯಾಣದಲ್ಲಿ ಎಚ್ಚರ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ವ್ಯಾಪಾರ, ವ್ಯವಹಾರಗಳು ಲಾಭ ತಂದುಕೊಡಲಿವೆ. ದೇವತಾ ಪ್ರಾರ್ಥನೆ ಮರೆಯದಿರಿ.

ಕುಂಭ: ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ವೃತ್ತಿಮಾತ್ಸರ್ಯ ಅನುಭವಕ್ಕೆ ಬರುವುದು. ಮಾನಸಿಕವಾಗಿ ಅಸ್ಥಿರತೆ ಕಾಡಲಿದೆ. ತಾಳ್ಮೆ ಕಳೆದುಕೊಳ್ಳಬೇಡಿ.
ಮೀನ: ಬಂಧು ಬಳಗದವರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ದೇವಾಲಯ ಸಂದರ್ಶಿಸುವಿರಿ. ಗೃಹೋಪಯೋಗಿ ವಸ್ತುಗಳಿಗೆ ಅಧಿಕ ಧನವ್ಯಯಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿ ಹಬ್ಬದಂದು ಈ ವಸ್ತುಗಳನ್ನು ಮನೆಗೆ ತಂದರೆ ಧನ ಪ್ರಾಪ್ತಿಯಾಗುತ್ತೆ