Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 19 ಅಕ್ಟೋಬರ್ 2019 (08:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಹೊಸತನ ರೂಢಿಸಿಕೊಳ್ಳಲು ಪ್ರಯತ್ನಿಸಿ. ಕ್ರಿಯಾಶೀಲತೆಯಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುವುದು. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳು ಎದುರಾಗಲಿವೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ದಿನದಂತ್ಯಕ್ಕೆ ಶುಭಸುದ್ದಿ.

ವೃಷಭ: ಹೊಂದಾಣಿಕೆಯಿಂದ ನಡೆದುಕೊಂಡರೆ ಸಾಂಸಾರಿಕವಾಗಿ ಸುಖ ಪ್ರಾಪ್ತಿಯಾಗುವುದು. ಆರ್ಥಿಕವಾಗಿ ಧನಾಗಮನ ಉತ್ತಮಗೊಳ್ಳಲಿದ್ದು ಆದಾಯ ವೃದ್ಧಿಯಾಗುವುದು. ಆರೋಗ್ಯದಲ್ಲಿ ಇದ್ದ ಸಮಸ್ಯೆಗಳು ನಿವಾರಣೆಯಾಗುವುದು. ವಿದ್ಯಾರ್ಥಿಗಳಿಗೆ ಮುನ್ನಡೆಯಿರುವುದು.

ಮಿಥುನ: ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥಿರತೆಯ ಕೊರತೆ ಕಾಡುವುದು. ಗೊಂದಲದ ವಾತಾವರಣವಿರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಅಡೆತಡೆಗಳು ಬಂದರೂ ಅಂದುಕೊಂಡ ಕಾರ್ಯಸಾಧನೆ ಮಾಡುವಿರಿ. ಅರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ದೈನಂದಿನ ಚಟುವಟಿಕೆಗಳಲ್ಲಿ ಮುನ್ನಡೆ, ಅಭಿವೃದ್ಧಿ ತೋರಿಬರುವುದು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ತಾಳ್ಮೆಯಿಂದ ವ್ಯವಹರಿಸುವುದು ಅಗತ್ಯ. ಕಾರ್ಯ ಸಾಧನೆಗಾಗಿ ದೂರ ಸಂಚಾರ ಮಾಡಿದರೆ ಯಶಸ್ವಿಯಾಗುವಿರಿ.

ಸಿಂಹ: ಖಾಸಗಿ ಜೀವನದಲ್ಲಿ ಏರುಪೇರಾಗಬಹುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗಲಿದೆ. ವ್ಯಾವಹಾರಿಕವಾಗಿ ಹೆಚ್ಚು ಲಾಭ ಗಳಿಸುವಿರಿ. ದೇವತಾ ಪ್ರಾರ್ಥನೆ ಮಾಡಿ.

 
ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯಕ್ಕಾಗಿ ಅಲೆದಾಟ ತಪ್ಪದು. ಕಠಿಣ ಪರಿಶ್ರಮಪಟ್ಟರಷ್ಟೇ ಫಲ ಸಿಗುವುದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಧಾರ್ಮಿಕವಾಗಿ ಧನವಿನಿಯೋಗ ಮಾಡುವಿರಿ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಕಾಳಜಿ ವಹಿಸಬೇಕು.

ತುಲಾ: ನಿಮ್ಮ ಮಾನಸಿಕ ಸಮತೋಲನ ತಪ್ಪದಂತೆ ಎಚ್ಚರಿಕೆವಹಿಸಬೇಕು. ತಾಳ್ಮೆ ಕಳೆದುಕೊಳ್ಳುವಂತಹ ಘಟನೆಗಳು ಬಂದರೂ ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಬಂದ  ಅವಕಾಶ ಬಳಸಿಕೊಳ್ಳಿ.

ವೃಶ್ಚಿಕ: ವೃತ್ತಿರಂಗದಲ್ಲಿ ತುಸು ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಉತ್ತಮ. ಮಾಡದ ತಪ್ಪಿಗೆ ಬೆಲೆ ತೆರಬೇಕಾದ ಸಂದರ್ಭ ಬರಬಹುದು. ಅಡೆತಡೆಗಳಿದ್ದರೂ ಕಾರ್ಯಸಾಧನೆಗೆ ತೊಂದರೆಯಾಗದು. ದೂರ ಸಂಚಾರದಲ್ಲಿ ಎಚ್ಚರಿಕೆಯಿಂದಿರಿ. ವಾಹನ ಖರೀದಿ ಯೋಗವಿದೆ.

ಧನು: ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧ‍್ಯ. ವೃತ್ತಿರಂಗದಲ್ಲಿ ನಿಮ್ಮ ಮನೋಬಲ ಪ್ರದರ್ಶಿಸಬೇಕಾದ ಅಗತ್ಯವಿದೆ. ದೇವತಾ ದರ್ಶನಕ್ಕಾಗಿ ಕಿರು ಸಂಚಾರ ಮಾಡುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ.

ಮಕರ: ಮನಸ್ಸಿಗೆ ಏನೋ ಒಂದು ರೀತಿಯ ಋಣಾತ್ಮಕ ಚಿಂತೆಗಳು ಕಾಡಲಿವೆ. ವೃತ್ತಿರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾಗುತ್ತದೆ. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನ ವ್ಯಯವಾಗುವುದು.

ಕುಂಭ: ನಿಮಗೆ ಇಷ್ಟವಿಲ್ಲದೇ ಹೋದರೂ ಕೆಲವೊಂದು ಕೆಲಸಗಳನ್ನು ಮಾಡಲೇಬಾಕಾದ ಅನಿವಾರ್ಯ ಪರಿಸ್ಥಿತಿ ಬರಲಿದೆ. ಶುಭ ಮಂಗಲ ಕಾರ್ಯಗಳ ಸಿದ್ಧತೆಗೆ ಓಡಾಟ ನಡೆಸಬೇಕಾಗುತ್ತದೆ. ಸರಕಾರಿ ಕೆಲಸಗಳಲ್ಲಿ ಜಯ ಸಿಗುವುದು. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬರಬಹುದು.

ಮೀನ: ನಿಮ್ಮ ವಿವಾಹ ಪ್ರಯತ್ನಗಳಿಗೆ ಮುನ್ನಡೆ ಸಿಗುವುದು. ನೂತನ ದಂಪತಿಗಳಿಗೆ ವಿಲಾಸೀ ಜೀವನದ ಸುಖ ಸಿಗುವುದು. ಮಹಿಳಾ ಉದ್ಯೋಗಿಗಳಿಗೆ ಅಪವಾದದ ಭೀತಿಯಿರಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು. ದಿನದಂತ್ಯಕ್ಕೆ ಶುಭ ಸುದ್ದಿ.

Share this Story:

Follow Webdunia kannada

ಮುಂದಿನ ಸುದ್ದಿ

ಧನಿಯಾ ಬೀಜದಿಂದ ಕಷ್ಟಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ?