Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 22 ಸೆಪ್ಟಂಬರ್ 2019 (09:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೆಲಸ ಕಾರ್ಯನಿಮಿತ್ತ ಸಾಕಷ್ಟು ಓಡಾಟ ನಡೆಸಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಆದರೆ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆರೋಗ್ಯದ ಚಿಂತೆ ಕಾಡುವುದು. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನಕೊಡಬೇಕಾಗುವುದು.

ವೃಷಭ: ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಹೊಸ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ಹಿರಿಯರೊಡನೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮಾತಿನ ಮೇಲೆ ನಿಗಾ ಇರಲಿ. ಬಂಧು ಮಿತ್ರರ ಆಗಮನವಾಗಲಿದೆ.

ಮಿಥುನ: ಸಂಚಾರದಿಂದ ದೇಹಾರೋಗ್ಯದಲ್ಲಿ ವ್ಯತ್ಯಯವಾಗಬಹುದು. ನೆರೆಯವರ ಚಾಡಿ ಮಾತಿಗೆ ಕಿವಿಗೊಡಬೇಡಿ. ಆತ್ಮಸ್ಥೈರ್ಯ ತಂದಿಕೊಳ್ಳಬೇಕು. ಮನೆಯಲ್ಲಿ ನೆರೆವೇರಿಸಬೇಕೆಂದಿದ್ದ ಶುಭ ಕಾರ್ಯಗಳಿಗೆ ವಿಘ‍್ನಗಳು ಎದುರಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಹೊಸ ವಾಹನ ಖರೀದಿ ಯೋಗವಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ ಕಂಡು ಸಂತೋಷವಾಗುವುದು. ಆದಾಯವಿದ್ದಷ್ಟೇ ಖರ್ಚೂ ಇರುವುದು. ಆಸ್ತಿ ವಿಚಾರದಲ್ಲಿ ದಾಯಾದಿಗಳೊಂದಿಗನ ಮನಸ್ತಾಪಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ಸಿಂಹ: ಹಳೆಯ ಆರೋಗ್ಯ ಸಮಸ್ಯೆ ಕಾಡುವುದು. ಮನಸ್ಸಿಗೆ ಬೇಡದ ಯೋಚನೆಗಳು ಬಂದು ಒಂದು ರೀತಿಯ ಬೇಸರ ಮೂಡುವುದು. ಕಾರ್ಮಿಕ ವರ್ಗದವರಿಗೆ ಮುನ್ನಡೆಯಿರುತ್ತದೆ. ಸಂಗಾತಿಯ ಸಹಕಾರ ಸಿಗುವುದು. ಆಪ್ತೇಷ್ಟರೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ.

 
ಕನ್ಯಾ: ವ್ಯಾಪಾರ ವಹಿವಾಟಿನಲ್ಲಿ ಕೆಲವು ಮುನ್ನಡೆಗೆ ಸಹಕಾರಿಯಾಗುವ  ದಾರಿಗಳು ಸಿಗುವುದು. ಆಸ್ತಿ ವಿಚಾರದಲ್ಲಿ ನಿಮಗೆ ಅನುಕೂಲಕರವಾದ ತೀರ್ಪು ಬರುವುದು. ರಾಜಕೀಯ ರಂಗದಲ್ಲಿ ಮುನ್ನಡೆ ತೋರಿಬರಲಿದೆ. ಆಪ್ತೇಷ್ಟರ ಭೇಟಿಯಿಂದ ಮನಸ್ಸಿಗೆ ನೆಮ್ಮದಿಯಾಗುವುದು.

ತುಲಾ: ವ್ಯಾಪಾರ ವಹಿವಾಟಿನಲ್ಲಿ ನಂಬಿದವರಿಂದಲೇ ವಂಚನೆಗೊಳಗಾಗುವ ಭೀತಿಯಿದೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಆದಾಯ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇಡಿ. ಅನವಶ್ಯಕವಾಗಿ ದುಡುಕಿ ಮಾತನಾಡಿ ಕೆಲಸದಲ್ಲಿ ಗೊಂದಲ ಸೃಷ್ಟಿಸಿಕೊಳ್ಳಬೇಡಿ. ಸಮಾಧಾನದಿಂದ ಇರಿ.

ವೃಶ್ಚಿಕ: ಸಂಗಾತಿಯ  ಕೆಲಸಗಳಲ್ಲಿ ಮುನ್ನಡೆ ತೋರಿಬರಲಿದ್ದು, ಅವರ ಪ್ರಗತಿ ನಿಮ್ಮ ಮನಸ್ಸಿಗೆ ಸಂತಸ ತರುವುದು. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೂತನ ದಂಪತಿಗಳಿಗೆ ಪ್ರವಾಸ ಯೋಗವಿದೆ.

ಧನು: ವ್ಯವಹಾರ ಉತ್ತಮವಾಗಿದ್ದರೂ ಸಾಕಷ್ಟು ಆದಾಯ ಕೈಗೆ ಬರುತ್ತಿಲ್ಲ ಎಂಬ ಚಿಂತೆ ಕಾಡುವುದು. ವ್ಯವಹಾರ ಮತ್ತು ಸಂಬಂಧದ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾಗುವುದು. ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ. ಕಿರು ಸಂಚಾರ ಯೋಗವಿದೆ.

ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿಯಾಗುವುದು. ನಿಮ್ಮ ಕೆಲಸದಲ್ಲಿ ಉನ್ನತಿ ತೋರಿಬರುವುದು. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡುವಿರಿ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.

ಕುಂಭ: ಬಿಡುವಿಲ್ಲದ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ನಾಲಿಗೆ ಚಪಲದಿಂದಾಗಿ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅವಸರ ಮಾಡಬೇಡಿ. ಶಾಂತಿ ಸಮಾಧಾನ ಅತೀ ಅಗತ್ಯ.

ಮೀನ: ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸಂಚಾರದಿಂದ ಕಾರ್ಯ ಸಿದ್ಧಿಯಾಗುವುದು. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Sade Sati Shani 2025: 2025 ರಲ್ಲಿ ಸಾಡೇ ಸಾತಿ ಶನಿ ಇರುವವರು ಈ ಪರಿಹಾರ ಮಾಡಿ

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

ಮುಂದಿನ ಸುದ್ದಿ
Show comments