Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
Bangalore , ಭಾನುವಾರ, 11 ಆಗಸ್ಟ್ 2019 (08:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಗೃಹ ಸಂಬಂಧೀ ಕಾರ್ಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ತಾಳ್ಮೆ ಅತೀ ಮುಖ್ಯ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದೂರ ಸಂಚಾರದಿಂದ ಕಾರ್ಯಸಾಧನೆಯಾಗುವುದು.

ವೃಷಭ: ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡುವಿರಿ. ವಿಶ್ವಾಸ ದ್ರೋಹವಾಗುವಂತಹ ಘಟನೆಗಳು ನಡೆದಾವು. ಮನಸ್ಸಿಗೆ ಒಂದು ರೀತಿಯ ಬೇಸರ ಕಾಡಲಿದೆ. ಹೊಸ ಮಿತ್ರರ ಭೇಟಿಯಾಗುವಿರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ:  ಮನಸ್ಸಿನ ಚಂಚಲತೆಯಿಂದ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು.ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ ತೋರಿಬರಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಕರ್ಕಟಕ: ದೂರ ಸಂಚಾರ ಕೈಗೊಳ್ಳುವ ಸಾಧ್ಯತೆಯಿದ್ದು, ಆಹಾರದಲ್ಲಿ ಎಚ್ಚರವಿರಲಿ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯ ಕೊರತೆ ಕಾಡುವುದು. ದಿನದಂತ್ಯದಲ್ಲಿ ಅಚ್ಚರಿಯ ವಾರ್ತೆ ಸಿಗಲಿದೆ.

ಸಿಂಹ: ಕಾರ್ಯದೊತ್ತಡ ಅಧಿಕವಾಗಲಿದ್ದು,ದೇಹಾಯಾಸವಾಗಲಿದೆ. ಕಾರ್ಯರಂಗದಲ್ಲಿ ಸೂಕ್ತ ಗೌರವ ಲಭಿಸಲಿದೆ. ಅನವಶ್ಯಕ ಚಿಂತೆಗಳನ್ನು ಬಿಡಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಬಿಗುವಿನ ವಾತಾವರಣದಿಂದ ಒಂದು ರೀತಿಯ ಕಿರಿ ಕಿರಿ ಅನುಭವಿಸುವಿರಿ. ಕಷ್ಟಗಳು ಬಂದಾಗ ಮಿತ್ರರ ಸಹಾಯ ದೊರಕುವುದು. ವಿದ್ಯಾರ್ಥಿಗಳಿಗೆ ಅಭ‍್ಯಾಸದಲ್ಲಿ ಆಲಸ್ಯತನ ಕಂಡುಬರುವುದು.

ತುಲಾ: ಇಷ್ಟಮಿತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ರಾಜಕೀಯವಾಗಿ ನಿಮಗೆ ಮಾನಹಾನಿಯಾಗುವಂತಹ ಘಟನೆಗಳು ನಡೆದಾವು. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಹಿರಿಯರ ಮಾತಿಗೆ ಕಿವಿಗೊಡಿ.

ವೃಶ್ಚಿಕ: ತಾಳ್ಮೆ ತಪ್ಪು ಘಟನೆಗಳು ನಡೆದಾವು. ಹಾಗಿದ್ದರೂ ಮೌನಕ್ಕೆ ಶರಣಾಗುವುದು ಲೇಸು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಧನು: ಆರ್ಥಿಕವಾಗಿ ಮುನ್ನಡೆ ತೋರಿಬರಲಿದೆ. ಕಷ್ಟಗಳು ಬಂದಾಗ ಬುದ್ಧಿವಂತಿಕೆಯಿಂದ ನಾಜೂಕಾಗಿ ಎದುರಿಸುವುದು ಜಾಣತನ. ಸಾಂಸಾರಿಕವಾಗಿ ಸಂಗಾತಿಯ ಸಹಕಾರ ದೊರಕಲಿದೆ.

ಮಕರ: ಹಿರಿಯರ ತೀರ್ಥ ಯಾತ್ರೆಗೆ ತಯಾರಿ ನಡೆಸುವಿರಿ. ದೇವರ ಅನುಗ್ರಹದಿಂದ ನೀವು ಅಂದುಕೊಂಡ ಕಾರ್ಯಗಳು ನೆರವೇರುವುದು. ಆರ್ಥಿಕವಾಗಿ ಅಭಿವೃದ್ಧಿಯಾಗುವುದು. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ.

ಕುಂಭ: ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಹೊಸ ಜನರ ಸ್ನೇಹ ಸಂಪಾದನೆ ಮಾಡುವಿರಿ. ಋಣಾತ್ಮಕ ಚಿಂತನೆಗಳಿಂದ ಹೊರಬನ್ನಿ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು.

ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಶುಭ ದಿನ. ಕೌಟುಂಬಿಕ ಜವಾಬ್ಧಾರಿಗಳನ್ನು ಮರೆತರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿನ ಕಾಲ್ಬೆರಳಿನಲ್ಲಿ ಅಡಗಿದೆ ಗಂಡನ ಅದೃಷ್ಟ