ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 24 ಜೂನ್ 2019 (08:58 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

 

ಮೇಷ: ಕಿರು ಸಂಚಾರದ ಯೋಗವಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ನೌಕರ ವರ್ಗದವರಿಗೆ ಕಾರ್ಯದೊತ್ತಡವಿರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಆರೋಗ್ಯದಲ್ಲಿ ಏರುಪೇರಾಗುವುದು.

 

ವೃಷಭ: ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭವಾಗಲಿದೆ. ನೀರಿಗಾಗಿ ಪರದಾಟ ತಪ್ಪುವುದು. ಆದಾಯಕ್ಕೆ ಕೊರತೆಯಾಗದು. ಆದರೆ ಖರ್ಚುಗಳ ಬಗ್ಗೆ ಮಿತಿಯಿರಲಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿವೆ.

 

ಮಿಥುನ: ಹಿರಿಯರ ಸಲಹೆಗಳಿಗೆ ಕಿವಿಗೊಟ್ಟು ಹೊಸ ವ್ಯವಹಾರಗಳಿಗೆ ಕೈ ಹಾಕುವುದು ಒಳಿತು. ಬಂಧು ವರ್ಗದವರಿಂದ ಚಾಡಿ ಮಾತು ಕೇಳಿಬಂದೀತು. ಸಂಗಾತಿಯಿಲ್ಲದೇ ವಿರಹ ವೇದನೆ ಅನುಭವಿಸುವಿರಿ.

 

ಕರ್ಕಟಕ: ಬೇಡದ ವಾದ ವಿವಾದಗಳಲ್ಲಿ ಮೂಗು ತೂರಿಸಲು ಹೋದರೆ ಅಪವಾದ ಮೈಮೇಲೆಳೆದುಕೊಳ್ಳಬೇಕಾಗುತ್ತದೆ. ವೃತ್ತಿ ರಂಗದಲ್ಲಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

 

ಸಿಂಹ: ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಮನೆಯಲ್ಲಿ ಸಹೋದರರೊಂದಿಗೆ ಕಲಹವಾದೀತು. ತಾಳ್ಮೆಯಿಂದ ವರ್ತಿಸಬೇಕು. ವಾಹನ ಖರೀದಿ ಯೋಗವಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ.

 

 

ಕನ್ಯಾ: ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಸಾಕಷ್ಟು ಧನವಿನಿಯೋಗ ಮಾಡಬೇಕಾಗಿ ಬರುತ್ತದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಅಧಿಕಾರಿ ವರ್ಗದವರಿಗೆ ಶುಭವಾಗಲಿದೆ.

 

ತುಲಾ: ಕಷ್ಟದ ಸಮಯದಲ್ಲಿ ಆಪ್ತರ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಮನೋರಂಜನೆಗಾಗಿ ಹೆಚ್ಚಿನ ಧನವ್ಯಯ ಮಾಡುವಿರಿ.

 

ವೃಶ್ಚಿಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯ ಕಂಡುಬಂದೀತು. ನೆರೆಹೊರೆಯವರೊಂದಿಗೆ ವಾಗ್ವಾದವಾಗುವ ಸಾಧ್ಯತೆಯಿದೆ, ಎಚ್ಚರಿಕೆಯಿರಲಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

 

ಧನು: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆದಾಯ ಪತ್ರಗಳನ್ನು ಎಚ್ಚರಿಕೆಯಿಂದ ಎತ್ತಿಡಿ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ.

 

ಮಕರ: ಉನ್ನತ ನೌಕರ ವರ್ಗದವರಿಗೆ ಬಡ್ತಿ ಯೋಗವಿದೆ. ದಾಯಾದಿಗಳೊಂದಿಗಿನ ಆಸ್ತಿ ಕಲಹ ಕೊನೆಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ.

 

ಕುಂಭ: ಕೋಪದ ಕೈಗೆ ಬುದ್ಧಿಕೊಟ್ಟು ದುಡುಕಿನ ನಿರ್ಧಾರ ಕೈಗೊಳ್ಳಲು ಹೋಗಬೇಡಿ. ಆದಾಯ ಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

 

ಮೀನ: ಹಿರಿಯರ ಸಲಹೆಗಳು ಪಥ್ಯವಾಗದೇ ಇದ್ದರೂ ಅದನ್ನು ಪಾಲಿಸಿದರೆ ಒಳಿತಾಗಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರು ಅಷ್ಟಕಂ ಸ್ತೋತ್ರ ಇಲ್ಲಿದೆ, ಓದುವುದರ ಫಲವೇನು ತಿಳಿದುಕೊಳ್ಳಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಸರಸ್ವತಿಯ ಈ ಸ್ತೋತ್ರ ಓದಿ

ಮಂಗಳವಾರ ಆಂಜನೇಯನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹ ಪಡೆಯಲು ಪಶುಪತ್ಯಷ್ಟಕಂ ಸ್ತೋತ್ರವನ್ನು ಓದಿ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments