Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 5 ಜೂನ್ 2019 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬಹುದಿನಗಳಿಂದ ಕಾಡುತ್ತಿದ್ದ ಕೆಲವೊಂದು ಸಮಸ್ಯೆಗೆ ಪರಿಹಾರ ಮಾರ್ಗಗಳು ಕಂಡಬಂದೀತು. ಆರ್ಥಿಕವಾಗಿ ಬಾಕಿ ಹಣ ವಸೂಲಿ ಮಾಡುವ ಚಿಂತೆಯಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತಸವಾಗುವುದು.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನಗಳು ದೊರಕುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆದರೆ ದುಡುಕಿ ವರ್ತನೆ ಮಾಡಿ ಕೆಳ ಹಂತದ ನೌಕರರ ವಿಶ್ವಾಸ ಕಳೆದುಕೊಳ್ಳಬೇಡಿ. ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲರ ಹಿತ ಗಮನಿಸಿ.

ಮಿಥುನ: ಯಾವುದೇ ಕೆಲಸವಾದರು ಯೋಚಿಸಿ ಹೆಜ್ಜೆಯಿಡುವುದು ಸೂಕ್ತ. ಅವಿವಾಹಿತರು ಬಂದಿರುವ ವಿವಾಹ ಪ್ರಸ್ತಾಪಗಳನ್ನು ಒಪ್ಪುವುದೋ ಬೇಡವೋ ಎಂಬ ಗೊಂದಲದಲ್ಲಿರುತ್ತಾರೆ. ಮನಸ್ಸಿನ ನೆಮ್ಮದಿಗಾಗಿ ಶ್ರೀದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಅನಗತ್ಯ ಕಿರಿ ಕಿರಿ ಎದುರಾಗಬಹುದು. ತಾಳ್ಮೆ ಕಳೆದುಕೊಳ್ಳಬಾರದು. ನೆರೆಹೊರೆಯವರೊಂದಿಗೆ ಗಡಿ ತಂಟೆ ತಕರಾರು ಎದುರಾಗಬಹುದು. ಎಚ್ಚರಿಕೆಯಿಂದಿರಿ.

ಸಿಂಹ: ಕೋರ್ಟು ವ್ಯಾಜ್ಯಗಳಲ್ಲಿ ನ್ಯಾಯಾಲದಲ್ಲಿ ನಿಮ್ಮ ಪರವಾಗಿ ತೀರ್ಪು ಬರುವುದು. ಇಷ್ಟಮಿತ್ರರೊಂದಿಗೆ ಭೋಜನ, ಪ್ರವಾಸ ಸಾಧ್ಯತೆಯಿದೆ. ಕೌಟುಂಬಿಕವಾಗಿ ಕೆಲವೊಂದು ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ.

 
ಕನ್ಯಾ: ಕೌಟುಂಬಿಕವಾಗಿ ನೆಮ್ಮದಿಯ ದಿನಗಳಾಗಿರುತ್ತವೆ. ಹೆಂಡತಿ, ಮಕ್ಕಳೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಆದಾಯಕ್ಕೇನೂ ಕೊರತೆಯಿರದು. ಆದರೆ ಖರ್ಚಿನ ಬಗ್ಗೆ ಎಚ್ಚರಿಕೆಯಿರಲಿ. ಆರೋಗ್ಯದಲ್ಲಿ ಸುಧಾರಣೆಯಿರಲಿದೆ.

ತುಲಾ: ನಿಮಗೆ ಸರಿ ಎನಿಸಿದ್ದನ್ನು ಮಾಡುತ್ತಾ ಹೋಗುವಿರಿ. ಮನಸ್ಸಿನ ಮಾತಿಗೆ ಬೆಲೆ ಕೊಡುವುದು ಮುಖ್ಯ. ಮೇಲಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ವೃಶ್ಚಿಕ: ನಿಮ್ಮ ‍ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರಾಸಕ್ತಿ ಕಾಣಬಹುದು. ದೇಹಾರೋಗ್ಯ ಕೆಡದಂತೆ ಎಚ್ಚರಿಕೆ ವಹಿಸಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗಬಹುದು.

ಧನು: ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿಯ ದಿನಗಳು. ಬಡ್ತಿ, ಮುನ್ನಡೆ ಯೋಗವೂ ಇದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಕರ: ಅಪರಿಚಿತರನ್ನು ನಂಬಿ ಹೊಸ ವ್ಯವಹಾರ ಮಾಡಲು ಹೋದರೆ ವಂಚನೆಗೊಳಗಾಗಬೇಕಾದೀತು. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ದೇವತಾ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ಕುಂಭ: ನಿಮ್ಮ ಸ್ನೇಹಪರ ನಡವಳಿಕೆಯಿಂದ ಕಠಿಣ ಸನ್ನಿವೇಶದಲ್ಲೂ ಜಯ  ಗಳಿಸುವಿರಿ. ಆದರೆ ಸಾಂಸಾರಿಕವಾಗಿ ಹೊಂದಾಣಿಕೆ ಕೊರತೆ ಎದುರಾಗಬಹುದು. ಇದರಿಂದ ಮನಸ್ಸಿಗೆ ಕೊಂಚ ಬೇಸರವಾಗಬಹುದು. ಆದರೆ ತಾಳ್ಮೆಯಿಂದಿರಿ.

ಮೀನ: ದೈವಾನುಕೂಲದಿಂದ ಮಾನಸಿಕ ಸಂತೋಷಕ್ಕೆ ಕೊರತೆಯಿರದು. ಆದರೆ ದೇಹಾರೋಗ್ಯ ಹದತಪ್ಪಬಹುದು. ಎಚ್ಚರಿಕೆ ಅಗತ್ಯ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಚೇರಿಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೆ ಲಕ್ಷ್ಮೀ ದೇವಿ ಒಳಗೆ ಪ್ರವೇಶಿಸುತ್ತಾಳಂತೆ