Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 24 ಮಾರ್ಚ್ 2019 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಗೃಹೋಪಯೋಗಿ ವಸ್ತುಗಳ ಖರೀದಿ ವಿಚಾರದಲ್ಲಿ ಮನೆಯವರೊಡನೆ ಭಿನ್ನಾಭಿಪ್ರಾಯಗಳು ಮೂಡುವುದು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳಿದ್ದರೂ, ಕಚೇರಿ ಕೆಲಸದ ಒತ್ತಡಗಳಿಂದ ಬಿಡುವು ಸಿಗಲಿದ್ದು, ಆರಾಮವೆನಿಸಲಿದೆ.

ವೃಷಭ: ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರುವುದು. ನಿರುದ್ಯೋಗಿಗಳು ಉದ್ಯೋಗ ಲಾಭ ಪಡೆಯುವರು. ವಿದ್ಯಾರ್ಥಿಗಳು ಪ್ರಯತ್ನ ಹೆಚ್ಚಿಸಬೇಕು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವುದಕ್ಕೆ ಚಿಂತನೆ ಮಾಡುವಿರಿ.

ಮಿಥುನ: ನಿಮ್ಮ ಅತಿಯಾದ ಆತ್ಮವಿಶ್ವಾಸವೇ ನಿಮಗೆ ಮುಳುವಾಗಲಿದೆ. ಅಪರಿಚಿತರನ್ನು ನಂಬಿ ಹಣ ಹೂಡಿಕೆ ಮಾಡಲು ಹೋಗಬೇಡಿ. ವಂಚನೆ ಭೀತಿಯಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗಬಹುದು. ಎಚ್ಚರ ಅಗತ್ಯ.

ಕರ್ಕಟಕ: ಬಹುದಿನಗಳ ನಂತರ ಆಪ್ತ ಮಿತ್ರನ ಭೇಟಿ ಮನಸ್ಸಿಗೆ ಮುದವುಂಟುಮಾಡಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ಆದರೆ ಹಿರಿಯರ ಆರೋಗ್ಯ ಹದಗೆಡುವುದು. ಎಚ್ಚರಿಕೆ ಅಗತ್ಯ.

ಸಿಂಹ: ವ್ಯಾಪಾರಿಗಳು ಉತ್ತಮ ಲಾಭ ಕಾಣುವರು. ಆರ್ಥಿಕವಾಗಿ ಆದಾಯಕ್ಕೇನೂ ಕೊರತೆಯಾಗದು. ಆದರೆ ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಅಪಘಾತದ ಭೀತಿಯಿದೆ. ಕಷ್ಟ ನಷ್ಟಗಳನ್ನು ಎದುರಿಸಲು ಸಿದ್ಧರಾಗಿ.

ಕನ್ಯಾ: ಸಾಕಷ್ಟು ಖರ್ಚು ವೆಚ್ಚಗಳಗಾಗುವುದು. ಮನಸ್ಸಿಗೆ ಯಾವುದೋ ಚಿಂತೆ ಆವರಿಸಿ, ದೈನಂದಿನ ಕೆಲಸಗಳಲ್ಲಿ ಉದಾಸೀನ ಪ್ರವೃತ್ತಿ ತೋರುವಿರಿ. ಅಂದುಕೊಂಡ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿದೆ. ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.

ತುಲಾ: ಸನ್ಮಿತ್ರರೊಂದಿಗೆ ಭೋಜನ ಯೋಗವಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಜತೆಗೆ ಪ್ರವಾಸ ತೆರಳುವಿರಿ. ವಿದ್ಯಾರ್ಥಿಗಳಿಗೆ ಅಭ‍್ಯಾಸದಲ್ಲಿ ಕೊಂಚ ಉದಾಸೀನ ಪ್ರವೃತ್ತಿ ಕಂಡುಬರುವುದು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.

ವೃಶ್ಚಿಕ: ದೈಹಿಕ ಮಾನಸಿಕ ಆರೋಗ್ಯ ಹದಗೆಟ್ಟೀತು. ತಾಳ್ಮೆಯಿಂದಿರುವುದು ಮುಖ್ಯ. ದಾಂಪತ್ಯದಲ್ಲಿ ಸಂಗಾತಿಯ ಸಹಕಾರವಿರುವುದು. ಆದರೆ ಮನೆ, ಆಸ್ತಿ ವಿವಾದಗಳು ನಿಮ್ಮನ್ನು ಹೈರಾಣಾಗಿಸಲಿದೆ. ಹಿರಿಯರ ಸಲಹೆ ಪಡೆಯಿರಿ.

ಧನು: ವಿದ್ಯಾರ್ಥಿಗಳು ಪ್ರಯತ್ನಬಲ ಮುಂದುವರಿಸಬೇಕಾಗುತ್ತದೆ. ಉದ್ಯೋಗ ಬದಲಾವಣೆ ಯೋಗವಿದೆ. ಮನೆ, ಆಸ್ತಿ ಖರೀದಿ ಬಗ್ಗೆ ಚಿಂತನೆ ನಡೆಸುವಿರಿ. ಸಾಮಾಜಿಕವಾಗಿ ನಿಮ್ಮ ಗೌರವ, ಸ್ಥಾನ ಮಾನ ಹೆಚ್ಚುವುದು.

ಮಕರ: ಸಾಮಾಜಿಕವಾಗಿ ಶತ್ರುನಾಶವಾಗಿ ನೆಮ್ಮದಿ ಕಾಣುವಿರಿ. ಹಿತಚಿಂತಕರ ಮಾತಿಗೆ ಬೆಲೆಕೊಡಿ. ನೂತನ ದಂಪತಿಗಳಿಗೆ ಶುಭ ಸುದ್ದಿಯೊಂದು ಕಾದಿದೆ. ಸ್ತ್ರೀಯರಿಗೆ ಆರ್ಥಿಕ ಸ್ಥಿತಿ ಗತಿ ಹೆಚ್ಚಿ ಸಂತಸವಾಗುವುದು. ದಿನದಂತ್ಯಕ್ಕೆ ಮತ್ತಷ್ಟು ಶುಭ ಸುದ್ದಿ ಕಾದಿದೆ.

ಕುಂಭ: ಸ್ವ ಉದ್ಯೋಗ ಮಾಡುವವರು ಕೊಂಚ ನಷ್ಟ ಅನುಭವಿಸಬೇಕಾಗುತ್ತದೆ. ಆರ್ಥಿಕ ಮುಗ್ಗಟ್ಟು ಎದುರಾಗುವದು. ಆದರೆ ಕಷ್ಟ ಕಾಲದಲ್ಲಿ ಮಿತ್ರರ ಸಹಾಯ ದೊರಕುವುದು. ವ್ಯಾಜ್ಯಗಳಿದ್ದರೆ ಮಾತುಕತೆಯಲ್ಲೇ ಪರಿಹಾರ ಕಂಡುಕೊಳ್ಳಿ.

ಮೀನ: ಆರ್ಥಿಕ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಕೊಂಚ ಕಷ್ಟ ನಷ್ಟಗಳನ್ನು ಎದುರಿಸಬೇಕಾಗಬಹುದು. ಆದರೆ ಧೃತಿಗೆಡಬೇಕಿಲ್ಲ. ಸಂಗಾತಿಯ ಮೂಲಕ ನಿಮ್ಮ ಕಷ್ಟಕ್ಕೆ ಪರಿಹಾರವೊಂದು ಸಿಗಲಿದೆ. ಕುಲದೇವರ ಪ್ರಾರ್ಥಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನದಂದು ಬಾವಿ ನಿರ್ಮಿಸಿದರೆ ನೀರಿನ ಕೊರತೆ ಉಂಟಾಗುವುದಿಲ್ಲವಂತೆ