Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 5 ಮಾರ್ಚ್ 2019 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಷ್ಟ ಬಂದಾಗ ಮಿತ್ರರ ನೆರವು ಸಿಗಲಿದೆ. ಆರೋಗ್ಯ ಭಾಗ್ಯ ಸುಧಾರಿಸದೇ ಚಿಂತೆಗೆ ಕಾರಣವಾದೀತು. ಆದರೆ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಸಂಗಾತಿಯ ಮಾತಿಗೆ ಕಿವಿಗೊಡಿ. ಆರ್ಥಿಕವಾಗಿ ಚೇತರಿಕೆ.

ವೃಷಭ: ಹಿರಿಯರ ಸಲಹೆಗಳಿಗೆ ಮನ್ನಣೆ ನೀಡಿ. ಕಷ್ಟಕಾಲದಲ್ಲಿ ಇದು ನೆರವಾಗಲಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದ್ದು, ಚಿಂತೆಗೆ ಕಾರಣವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.

ಮಿಥುನ: ಉದ್ಯಮಿಗಳಿಗೆ ವ್ಯವಹಾರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು. ವಾಹನ ಚಾಲನೆ ವೃತ್ತಿಯವರಿಗೆ ಅಪಘಾತದ ಭಯವಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯೆಯಿದೆ. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವರ ಪ್ರಾರ್ಥಿಸಿ.

ಕರ್ಕಟಕ: ನೀವು ಮಾಡಿದ ಕೆಲಸಗಳಿಂದ ಸಾಮಾಜಿಕವಾಗಿ ಮನ್ನಣೆ, ಪ್ರಶಂಸೆ ಗಳಿಸಲಿದ್ದೀರಿ. ಕಷ್ಟ ಬಂದಾಗ ನಿಮ್ಮ ಜಾಣತನದಿಂದಲೇ ನಿಭಾಯಿಸಿ. ನೆರೆಹೊರೆಯವರೊಂದಿಗೆ ವಾಗ್ವಾದಕ್ಕಿಳಿಯಬೇಕಾದ ಸಂದರ್ಭ ಎದುರಾಗಬಹುದು. ತಾಳ್ಮೆಯಿರಲಿ.

ಸಿಂಹ: ಅಂದುಕೊಂಡ ಕಾರ್ಯಗಳಿಗೆ ಕೆಲವು ವಿಘ್ನಗಳು ತಲೆದೋರುವುದು. ಆರ್ಥಿಕ ಪರಿಸ್ಥಿತಿಯಲ್ಲಿ ತುಸು ಚೇತರಿಕೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ವಿದೇಶ ಯಾನ ಭಾಗ್ಯ ಇರುವುದು. ಅನಿರೀಕ್ಷಿತವಾಗಿ ಅತಿಥಿಗಳು ಬರುವರು.

ಕನ್ಯಾ: ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದಾದರೂ ಮನಸ್ಸಿಗೆ ಒಪ್ಪಿಗೆಯಾಗದು. ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ಅನುಭವಿಸಬೇಕಾಗುತ್ತದೆ.

ತುಲಾ: ಹಣಕಾಸಿನ ಅಡಚಣೆ ಎದುರಾದಾಗ ಬಂಧುಗಳು ನೆರವಿಗೆ ಬರುತ್ತಾರೆ. ವಾಹನ ಖರೀದಿ ಯೋಗವಿದೆ. ವಿವಾಹ ಸಂಬಂಧೀ ಓಡಾಟವಿರುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ವೃಶ್ಚಿಕ: ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗುವುದು. ಅವಿವಾಹಿತರು ಏಕಾಂಗಿತನ ಅನುಭವಿಸುವರು. ವ್ಯಾಪಾರ, ವ್ಯವಹಾರಗಳಿಗೆ ಕೈ ಹಾಕಿದರೆ ನಷ್ಟ ಅನುಭವಿಸುವಿರಿ. ಉತ್ತಮ ದಿನಗಳಿಗಾಗಿ ಕೆಲವು ದಿನ ತಾಳ್ಮೆಯಿಂದ ಕಾಯುವುದು ಒಳ್ಳೆಯದು.

ಧನು: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ. ಸಂಗಾತಿಯ ಆರೋಗ್ಯ ಹದಗೆಟ್ಟು, ಆಸ್ಪತ್ರೆಗೆ ಅಲೆದಾಡಬೇಕಾದೀತು. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದರೆ ಸಕಾಲದಲ್ಲಿ ಮಿತ್ರರು ಸಹಾಯ ಮಾಡಲಿದ್ದಾರೆ.

ಮಕರ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆಯಿದೆ. ಉದ್ಯೋಗ ಕ್ಷೇತ್ರಗಳಲ್ಲಿ ಬೆನ್ನ ಹಿಂದೆ ಚೂರಿ ಹಾಕುವಂತಹ ವ್ಯಕ್ತಿಗಳ ಜತೆ ಎಚ್ಚರವಾಗಿರಿ. ದೇವರ ಪ್ರಾರ್ಥನೆ ಮಾಡಿದರೆ ಮತ್ತಷ್ಟು ಶುಭ ಫಲ.

ಕುಂಭ: ನಿಮ್ಮ ಕೆಲಸ ಕಾರ್ಯಗಳಲ್ಲಿ, ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಂಡುಬರುವುದು. ಸಾಲಗಾರರ ಬಾಕಿ ಪಾವತಿ ಮಾಡುವಿರಿ. ಶುಭ ಮಂಗಲ ಕಾರ್ಯಗಳಿಗಾಗಿ ಧನವ್ಯಯ ಮಾಡುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಮೀನ: ಒಂದು ರೀತಿಯ ಮಾನಸಿಕ ವೇದನೆ ನಿಮ್ಮನ್ನು ಕಾಡುತ್ತಿದ್ದು, ಇದು ನಿಮ್ಮ ದೈನಂದಿನ ಕೆಲಸಗಳಿಗೆ ತೊಂದರೆ ಉಂಟುಮಾಡುವುದು. ಹಿರಿಯರ ಸಲಹೆ ಪಡೆದು ಕೆಲಸ ಕಾರ್ಯಗಳಲ್ಲಿ ಮುಂದುವರಿಯಿಸಿ. ದೇವರ ಪ್ರಾರ್ಥನೆ ಮಾಡಿದರೆ ನೆಮ್ಮದಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಹಣಕಾಸಿನ ತೊಂದರೆಯಾದರೆ ಮನೆಯ ಹೊರಗಡೆ ಈ ದೇವರ ಫೋಟೋವನ್ನು ಇಡಿ