Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 5 ಫೆಬ್ರವರಿ 2019 (07:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುವಿರಿ. ಮಾನಸಿಕವಾಗಿ ಒಂದು ರೀತಿಯ ಕೊರಗು ನಿಮ್ಮನ್ನು ಕಾಡಬಹುದು. ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ.

ವೃಷಭ: ಹಿರಿಯರ ಸೂಕ್ತ ಸಲಹೆಯನ್ನು ಸರಿಯಾದ ಸಮಯದಲ್ಲಿ ಪಡೆದು ಸಂಕಷ್ಟದಿಂದ ಪಾರಾಗುವಿರಿ. ಕಾರ್ಯ ನಿಮಿತ್ತ ದೂರ ಸಂಚಾರ ಮಾಡಬೇಕಾಗಿಬರಬಹುದು. ಆದರೆ ಕಳ್ಳತನವಾಗುವ ಅಪಾಯವಿದೆ, ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಲಾಭ ಸಿಗುವುದು.

ಮಿಥುನ: ಉದ್ಯೋಗದಲ್ಲಿ ಹಲವು ಅಡೆತಡೆಗಳು ತೋರಿಬಂದೀತು. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ಕರ್ಕಟಕ: ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ಆದರೆ ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಜಯ ಸಿಗುವುದು. ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ.

ಸಿಂಹ: ಸಂಕಷ್ಟದ ಸಮಯದಲ್ಲಿ ನಿಮ್ಮ ನೆರವಿಗೆ ಯಾರಾದರೂ ಬಂದೇ ಬರುತ್ತಾರೆ. ಉದ್ಯೋಗದಲ್ಲಿ ಇದುವರೆಗೆ ಇದ್ದ ಅಡೆತಡೆಗಳು ದೂರವಾಗುವುದು. ಆದರೆ ಹಿತ ಶತ್ರುಗಳು ವಂಚಿಸಬಹುದು. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ನಿಮ್ಮ ಬಡ್ತಿಗೆ ತೊಡಕುಂಟಾಗುವುದು. ಕುಟುಂಬದಲ್ಲಿ ಸಹಕಾರ ಸಿಗುವುದರಿಂದ ನೆಮ್ಮದಿಗೆ ಕೊರತೆಯಿಲ್ಲ. ಹೊಸ ವ್ಯವಹಾರಕ್ಕೆ ಕೈ ಹಾಕಿದಲ್ಲಿ ಜಯ ಸಿಗುವುದು.

ತುಲಾ: ವೈಯಕ್ತಿಕ ಅಗತ್ಯ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ನೀವು ನಂಬಿದವರಿಂದಲೇ ವಂಚನೆಗೊಳಗಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಅಗತ್ಯ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಜವಾಬ್ಧಾರಿಯೊಂದು ನಿಮ್ಮ ಹೆಗಲೇರಲಿದೆ. ಆದರೆ ಹಣಕಾಸಿನ ವಿಚಾರವಾಗಿ ಸಂಕಷ್ಟ ಎದುರಿಸಬೇಕಾದೀತು. ಆದರೆ ನಿಮ್ಮ ಛಲ, ತಾಳ್ಮೆಯಿಂದ ಎಲ್ಲಾ ಸಂಕಷ್ಟಗಳನ್ನೂ ಮೀರಿ ನಿಲ್ಲುವಿರಿ.

ಧನು: ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ನಿರಾಶೆಯಾದೀತು. ಮನೆಯಲ್ಲಿ ಸಂಗಾತಿಯೊಡನೆ ಮನಸ್ತಾಪ ಮಾಡಿಕೊಳ್ಳುವಿರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಖರ್ಚುವೆಚ್ಚಗಳು ಮಿತಿಯಲ್ಲಿರಲಿ.

ಮಕರ: ನೀವು ಮಾಡುವ ಕೆಲಸಗಳಿಂದ ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಗೌರವ ಹೆಚ್ಚುವುದು. ಆರೋಗ್ಯ ಸುಧಾರಿಸುವುದು. ಆದರೆ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ಅಗತ್ಯ. ಹಾಗೆಯೇ ಬೇಜವಾಬ್ಧಾರಿಯಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಯಿದೆ.

ಕುಂಭ: ಮಹಿಳೆಯರಿಗೆ ಇಂದು ಶುಭ ದಿನ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ನಿರೀಕ್ಷಿತ ಕೆಲಸಗಳಲ್ಲಿ ಜಯ ಸಿಗುವುದು. ಆದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಂಡುಬಂದು ಆಸ್ಪತ್ರೆಗೆ ಅಲೆದಾಡಬೇಕಾದೀತು. ಕಾಳಜಿ ಅಗತ್ಯ.

ಮೀನ: ಅನಿರೀಕ್ಷಿತವಾಗಿ ಬರುವ ಅತಿಥಿಯಿಂದ ಖರ್ಚು ವೆಚ್ಚಗಳು ಅಧಿಕವಾಗುವುದು. ಹೊಸ ವಸ್ತು, ಆಸ್ತಿ ಖರೀದಿ ಬಗ್ಗೆ ಚಿಂತನೆ ಮಾಡುವಿರಿ. ಆದರೆ ಹಿರಿಯರೊಂದಿಗೆ ಮಾತನಾಡುವಾಗ ನಿಗಾ ಇರಲಿ. ವಿನಾಕಾರಣ ವಾಗ್ವಾದಕ್ಕೆ ಎಡೆ ಮಾಡಿಕೊಡದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಂದರ್ಭಗಳಲ್ಲಿ ಗುರು ಹಿರಿಯರಿಗೆ ನಮಸ್ಕರಿಸಬಾರದು?