Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 4 ಫೆಬ್ರವರಿ 2019 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮಾನಸಿಕವಾಗಿ ಕಾಡುತ್ತಿರುವ ಯಾವುದೋ ಚಿಂತೆಗೆ ನೀವೇ ಸಾಂತ್ವನ ಹೇಳಿಕೊಳ್ಳಬೇಕು. ಆರೋಗ್ಯದಲ್ಲಿ ಕೊಂಚ ಏರುಪೇರಾದೀತು. ಕಾರ್ಯಕ್ಷೇತ್ರದಲ್ಲಿ ಒತ್ತಡವಿರುತ್ತದೆ. ಮನೆಗೆ ಹೊಸ ವಸ್ತುಗಳ ಖರೀದಿ ಮಾಡುವಿರಿ.

ವೃಷಭ: ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗುವ ಪ್ರಸಂಗ ಎದುರಾಗಬಹುದು. ಪ್ರವಾಸ ಕೈಗೊಳ್ಳುವಿರಿ. ಧನಾಗಮನವಾಗಿ ಆರ್ಥಕ ಮುಗ್ಗಟ್ಟುಗಳು ದೂರವಾಗುವುದು.

ಮಿಥುನ: ಹಿರಿಯರ ತೀರ್ಥ ಯಾತ್ರೆಗೆ ಬೇಕಾದ ವ್ಯವಸ್ಥೆ ಮಾಡುವಿರಿ. ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ. ಅವಿವಾಹಿತರಿಗೆ ಕಂಕಣ ಬಲ ಒದಗಿಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು. ಹೆಚ್ಚಿನ ಶುಭಫಲಗಳಿಗೆ ಕುಲದೇವರ ಆರಾಧನೆ ಮಾಡಿ.

ಕರ್ಕಟಕ: ಮನೆಯಲ್ಲಿ ಅವಿವಾಹಿತ ಮಕ್ಕಳಿದ್ದರೆ ಅವರ ವಿವಾಹ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಆಸ್ತಿ ವಿವಾದಗಳು ನಿಮಗೆ ಅನುಕೂಲಕರವಾದ ರೀತಿಯಲ್ಲಿ ಬಗೆಹರಿಯಲಿದೆ.

ಸಿಂಹ: ಅಗತ್ಯದ ಸಂದರ್ಭದಲ್ಲಿ ಹಣಕಾಸು ಸಿಗದೇ ಕಾರ್ಯಸಾಧನೆಗೆ ಒದ್ದಾಡಬೇಕಾದೀತು. ಆದರೆ ಮಿತ್ರರ ನೆರವು ದೊರಕಲಿದೆ. ವೃತ್ತಿಯಲ್ಲಿ ವರ್ಗಾವಣೆ, ಕಾರ್ಯದೊತ್ತಡವಾಗಲಿದೆ. ಆರೋಗ್ಯ ಸಮಸ್ಯೆಯೂ ಕಂಡುಬಂದೀತು.

ಕನ್ಯಾ: ಕುಟುಂಬದಲ್ಲಿ ಶುಭ ಕಾರ್ಯ ನೆರವೇರಿಸುವಿರಿ. ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ವ್ಯವಹಾರದಲ್ಲಿ ಚೇತರಿಕೆ ಕಂಡುಬಂದು ನೆಮ್ಮದಿ ಮೂಡುವುದು.

ತುಲಾ: ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು. ಹಿರಿಯರ ಆಶೀರ್ವಾದದಿಂದ ಎಂತಹದ್ದೇ ಕಷ್ಟವಾದರೂ ನಿಭಾಯಿಸುವಿರಿ.

ವೃಶ್ಚಿಕ: ವೃತ್ತಿಯಲ್ಲಿ ವರ್ಗಾವಣೆಯಾಗಲಿದೆ. ಕುಟುಂಬದಲ್ಲಿ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳಿದ್ದರೂ ಹೊಂದಾಣಿಕೆಯಿಂದ ನಡೆಯಿರಿ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಓಡಾಟ ನಡೆಸುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಧನು: ಕುಲದೇವರಿಗೆ ಸಂಬಂಧಿಸಿದ ದೈವ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸಮಾಧಾನಕರ ದಿನ. ತಾಳ್ಮೆಯಿಂದ ವ್ಯವಹರಿಸಬೇಕು. ಆರ್ಥಿಕವಾಗಿ ಆದಾಯವಿದ್ದಷ್ಟೂ ಖರ್ಚೂ ಅಧಿಕವಾಗಲಿದೆ.

ಮಕರ: ಉದ್ಯೋಗದಲ್ಲಿ ವೇತನ ಹೆಚ್ಚಳ, ಬಡ್ತಿ ಯೋಗವಿದೆ. ದಂಪತಿಗಳ ನಡುವೆ ವಿರಸ ಮೂಡಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಅವಿವಾಹಿತರು ಕೆಲವು ದಿನ ಕಾಯಬೇಕಾದೀತು. ದೂರ ಸಂಚಾರ ಮಾಡುವಿರಿ.

ಕುಂಭ: ಕುಟುಂಬದಲ್ಲಿ ಇದುವರೆಗೆ ಇದ್ದ ಭಿನ್ನಾಭಿಪ್ರಾಯವು ದೂರವಾಗಿ ನೆಮ್ಮದಿ ನೆಲೆಸುವುದು. ನೂತನ ದಂಪತಿಗಳು ಮಧುಚಂದ್ರ ಭಾಗ್ಯ ಅನುಭವಿಸುವರು. ಉದ್ಯೋಗದಲ್ಲಿ ಅಡೆತಡೆಗಳಿದ್ದರೂ ನಿಮ್ಮ ಮುನ್ನಡೆಗೆ ತೊಂದರೆಯಾಗದು.

ಮೀನ: ವಿದೇಶ ಪ್ರಯಾಣ ಮುಂದೂಡುವುದು ಒಳ್ಳೆಯದು. ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಮಕ್ಕಳ ವಿಚಾರದಲ್ಲಿ ಚಿಂತೆ ಮಾಡುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ದೇವಸ್ಥಾನಕ್ಕೆ ಹೋಗಲು ಆಗದವರು ಈ ಒಂದು ದಿನ ಹೋದರೆ ಒಂದು ತಿಂಗಳಿನ ಪೂರ್ತಿ ಫಲ ದೊರಕುವುದು