Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 25 ಜನವರಿ 2019 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಅಲರ್ಜಿ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರಲಿದೆ. ಹೆಚ್ಚಿನ ಕಾರ್ಯದ ಹೊರೆಯಿಂದ ಹೈರಾಣಾಗುವಿರಿ. ನೆಮ್ಮದಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ: ವೈಭವದ ಜೀವನಕ್ಕೆ ತಕ್ಕುದಾದ ವಸ್ತುಗಳ ಖರೀದಿ ಮಾಡುವಿರಿ. ಸಂಗಾತಿಯಿಂದ ಖುಷಿ, ನೆಮ್ಮದಿ ಸಿಗಲಿದೆ. ಆದರೆ ನಯವಂಚಕರ ಬಗ್ಗೆ ಎಚ್ಚರ ಅಗತ್ಯ. ದಿನದಂತ್ಯಕ್ಕೆ ಮತ್ತಷ್ಟು ಶುಭ ಫಲ ಸಿಗಲಿದೆ.

ಮಿಥುನ: ಅವಿವಾಹಿತರಿಗೆ ವಿವಾಹಕ್ಕಾಗಿ ಹೊಸ ಸಂಬಂಧಗಳು ಒದಗಿ ಬರಲಿವೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆರೋಗ್ಯ ಕೈ ಕೊಡುವುದು. ತಾಳ್ಮೆಯಿರಲಿ.

ಕರ್ಕಟಕ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಈ ವೇಳೆ ಹಲವು ಅಡೆತಡೆಗಳು ಎದುರಾದೀತು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಉದ್ಯೋಗಿಗಳಿಗೆ ಬಡ್ತಿ ಯೋಗವಿದೆ. ಹಣಕಾಸಿನ ಹರಿವು ಚೆನ್ನಾಗಿರುತ್ತದೆ.

ಸಿಂಹ: ಯಾವುದೋ ಬೇಡದ ವಿಚಾರವೊಂದು ಮನಸ್ಸಿಗೆ ಬೇಸರವುಂಟು ಮಾಡುತ್ತಿರಬಹುದು. ಹಳೆಯ ಸಂಬಂಧವೊಂದು ಹುಡುಕಿಕೊಂಡು ಬರಲಿದೆ. ಉದ್ಯೋಗಿಗಳಿಗೆ ಮುನ್ನಡೆ, ಆರ್ಥಿಕ ಲಾಭ. ಆದರೆ ಅಷ್ಟೇ ಖರ್ಚೂ ಮಾಡುವಿರಿ.

ಕನ್ಯಾ: ಸರಿಯಾದ ನಿರ್ಧಾರ ಕೈಗೊಳ್ಳದೇ ಕಾರ್ಯ ಕೆಟ್ಟೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಅವಿವಾಹಿತರಿಗೆ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಒಪ್ಪಿಗೆಯಾಗದು. ಅನಿರೀಕ್ಷಿತ ಅತಿಥಿಯೊಬ್ಬರ ಆಗಮನವಾಗಲಿದೆ.

ತುಲಾ: ಉದ್ಯೋಗದಲ್ಲಿ ಮುನ್ನಡೆ ತೋರಿ ಸಂತಸಗೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ, ಗೌರವ ಸಿಗುವುದು. ವಿದ್ಯಾರ್ಥಿಗಳಿಗೂ ಇದುವರೆಗೆ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಹಿರಿಯರ ಆರೋಗ್ಯ ಕೈಕೊಡುವ ಸಾಧ್ಯತೆಯಿದೆ. ಎಚ್ಚರವಿರಲಿ.

ವೃಶ್ಚಿಕ: ಕುಟುಂಬದಲ್ಲಿ ಯಾರಾದರೊಬ್ಬರಿಗೆ ಆರೋಗ್ಯ ಕೈಕೊಡಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಗೌರವ ಹೆಚ್ಚಲಿದೆ. ಆದರೆ ಕೆಲಸದಲ್ಲಿ ಕೊಂಚ ಉದಾಸೀನತೆ ತೋರುವಿರಿ. ವಾಹನ ಚಾಲಕರು ಎಚ್ಚರವಾಗಿರಿ.

ಧನು: ಸಾಂಸಾರಿಕವಾಗಿ ಕಿರಿ ಕಿರಿ ಇದ್ದರೂ ನೀವು ಅಂದುಕೊಂಡ ಕಾರ್ಯ ಸಾಧನೆ ಮಾಡದೇ ಬಿಡಲಾರಿರಿ. ಪರಿಶ್ರಮಕ್ಕೆ ತಕ್ಕ ಫಲ ಕಾಣುವಿರಿ. ದೂರ ಸಂಚಾರ ಕೈಗೊಳ್ಳಲು ತಯಾರಿ ನಡೆಸುವಿರಿ. ಮಕ್ಕಳಿಂದ ನೆಮ್ಮದಿ.

ಮಕರ: ವೃತ್ತಿ ರಂಗದಲ್ಲಿ ಸಹೋದ್ಯೋಗಿಗಳ ನೆರವಿನಿಂದ ಎಂತಹಾ ಕಠಿಣ ಸವಾಲೇ ಆದರೂ ಗೆಲ್ಲುತ್ತೀರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳೆಲ್ಲಾ ನಿವಾರಣೆಯಾಗಿ ನಿವ್ವಳ ಲಾಭ ಗಳಿಸುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಚಿಂತನೆ ನಡೆಸುವಿರಿ.

ಕುಂಭ: ದಾಯಾದಿಗಳೊಂದಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಾದ ವಿವಾದ ನಡೆಸಬೇಕಾಗುತ್ತದೆ. ಹಿರಿಯರ ಸಲಹೆ ಅಗತ್ಯ. ಆದರೆ ದೈವ ಬಲ ನಿಮ್ಮ ಕಡೆಗಿರುತ್ತದೆ. ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಾವುದೇ ಕಾರ್ಯದಲ್ಲೂ ಜಯಗಳಿಸುವಿರಿ.

ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಸಿಗಲಿದೆ. ಆದರೆ ಏನೇ ಕೆಲಸ ಮಾಡಬೇಕಾದರೂ ಪೂರ್ಣ ಪ್ರಮಾಣದ ಪ್ರಯತ್ನ ಅಗತ್ಯ. ಸುಲಭವಾಗಿ ಯಾವುದೂ ಕೈಗೆಟುಕದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments