ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 15 ಜನವರಿ 2019 (08:43 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಬ್ಬದ ದಿನವೆಂದು ಹೊಸ ವಸ್ತು ಖರೀದಿಗೆ ಮುಂದಾಗುವಿರಿ. ಧನಾಗಮನವಾಗಲಿದ್ದು, ಶುಭ ಸಂಕೇತ ನೀಡಲಿದೆ. ಆದರೆ ಮನೆಯಲ್ಲಿ ಕೊಂಚ ಕಿರಿ ಕಿರಿ ವಾತಾವರಣವಿರುವುದು. ಎಚ್ಚರಿಕೆ ಅಗತ್ಯ.

ವೃಷಭ: ಹಿರಿಯರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ನಾಲಿಗೆಯೇ ಶತ್ರುವಾಗಬಹುದು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ. ದೂರ ಸಂಚಾರ ಕೈಗೊಳ್ಳುವ ಸಾಧ್ಯತೆಯಿದೆ.

ಮಿಥುನ: ಹೊಸ ಕೆಲಸಗಳಿಗೆ ಕೈ ಹಾಕಲು ಹೊರಟರೂ ಆರ್ಥಕ ಮುಗ್ಗಟ್ಟು ಎದುರಾದೀತು. ಮನೆಯವರಿಂದ ಸಹಕಾರ ಸಿಗಲಿದೆ. ಹೆಚ್ಚಿನ ನೆಮ್ಮದಿಗಾಗಿ ಕುಲದೇವತಾ ಆರಾಧನೆ ಮಾಡಿ.

ಕರ್ಕಟಕ: ಬಹಿದಿನಗಳಿಂದ ಬಾಕಿಯಿದ್ದ ಆಸೆ ಇಂದು ಪೂರೈಸುವಿರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ. ಆದಾಯವಿದ್ದಷ್ಟೇ ಖರ್ಚೂ ತಲೆದೋರುವುದು. ಬಂಧಮಿತ್ರರ ಆಗಮನದಿಂದ ಸಂತಸ.

ಸಿಂಹ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಯಾರಿಗೂ ತಿಳಿಯದಂತೆ ಮಾಡಿದ್ದ ವ್ಯವಹಾರವೊಂದು ಬಯಲಿಗೆ ಬರಲಿದೆ. ಸಂಗಾತಿಯೊಡನೆ ಮನಸ್ತಾಪ ಮಾಡಿಕೊಳ್ಳುತ್ತೀರಿ. ದಿನದಂತ್ಯಕ್ಕೆ ಎಲ್ಲವೂ ಶುಭ.

ಕನ್ಯಾ: ಹಿತ ಶತ್ರುಗಳ ಬಗ್ಗೆ ಎಚ್ಚರವಿರಲಿ.  ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಹಿರಿಯರಿಂದ ಅಡೆತಡೆ ಎದುರಾಗಬಹುದು. ಹೊಸ ವ್ಯವಹಾರಕ್ಕೆ ಕೈ ಹಾಕುವಿರಿ. ಖರ್ಚುಗಳ ಬಗ್ಗೆ ಮಿತಿಯಿರಲಿ.

ತುಲಾ: ದಾಯಾದಿಗಳ ಜತೆ ಕಲಹಗಳಿದ್ದರೆ ಅದನ್ನು ಇಂದು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ. ಹೊಸ ವಸ್ತು ಖರೀದಿ ಮಾಡುವುದಿದ್ದರೆ ಎಚ್ಚರ, ವಂಚನೆಗೊಳಗಾಗುವ ಸಾಧ್ಯತೆಯಿದೆ. ಆದರೆ ವ್ಯವಹಾರಗಳಲ್ಲಿ ಜಯ ಸಿಗುವುದು.

ವೃಶ್ಚಿಕ: ಸಂಗಾತಿ ಜತೆ ಸರಸಮಯ ಕ್ಷಣ ಕಳೆಯುವಿರಿ. ನೂತನ ದಂಪತಿಗಳು ಮಧುಚಂದ್ರ ಭಾಗ್ಯ ಅನುಭವಿಸುವರು. ಬಂಧು ಮಿತ್ರರಿಂದ ಬೇಸರದ ಸಂಗತಿ ಕೇಳಬೇಕಾಗುವುದು. ನಯವಂಚಕರಿಂದ ದೂರವಿರುವುದೇ ಒಳ್ಳೆಯದು.

ಧನು: ವಿದ್ಯಾರ್ಥಿಗಳಿಗೆ ತೀವ್ರ ಅಭ್ಯಾಸ ಅಗತ್ಯ. ಹಿರಿಯರಿಂದ ಬೇಸರದ ಮಾತು ಕೇಳಬೇಕಾಗಬಹುದು. ಸಹೋದರರೊಂದಿಗೆ ಕಿರಿ ಕಿರಿ ಮಾಡಿಕೊಳ್ಳಲಿದ್ದೀರಿ. ತಾಳ್ಮೆಯಿಂದಿದ್ದರೆ ಎಲ್ಲವೂ ಒಳಿತಾಗುತ್ತದೆ.

ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಅವಿವಾಹಿತರಿಗೆ ವಿವಾಹಕ್ಕಾಗಿ ಹೊಸ ಸಂಬಂಧಗಳ ಪ್ರಸ್ತಾಪ ಬರುವುದು. ಅನಿರೀಕ್ಷಿತವಾಗಿ ದೂರದ ನೆಂಟರೊಬ್ಬರ ಆಗಮನವಾಗಲಿದೆ. ಖರ್ಚು ವೆಚ್ಚಗಳು ಹೆಚ್ಚುವುದು.

ಕುಂಭ: ಅಧಿಕಾರಿ ವರ್ಗದವರಿಂದ ಕಿರಿ ಕಿರಿ. ಕಾರ್ಯದೊತ್ತಡ ಹೆಚ್ಚಿ ದೇಹಾಯಾಸ ಮಾಡಿಕೊಳ್ಳುವಿರಿ. ಆದರೆ ಮನೆಯಲ್ಲಿ ನಿರೀಕ್ಷಿತ ಸಹಕಾರ ಸಿಕ್ಕಿ ನೆಮ್ಮದಿ ಹೊಂದುವಿರಿ. ನಿಮ್ಮ ಕೈ ಮೀರಿದ ವಿಷಯಗಳ ಬಗ್ಗೆ ನೆನೆದು ಕೊರಗುವುದು ಬೇಡ.

ಮೀನ: ಪಾಲುದಾರಿಕೆ ಉದ್ಯಮ ನಡೆಸಲು ಉದ್ದೇಶಿಸಿದರೆ ಸ್ವಲ್ಪ ದಿನದ ಮಟ್ಟಿಗೆ ಮುಂದೂಡುವುದು ಒಳ್ಳೆಯದು. ಬಹುದಿನಗಳ ಆರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಿ ನೆಮ್ಮದಿ ಸಿಗಲಿದೆ. ದೇವತಾ ಆರಾಧನೆಯಲ್ಲಿ ಪಾಲ್ಗೊಳ್ಳುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಐದು ರಾಶಿಯವರಿಗೆ 2026 ರಲ್ಲಿ ಮದುವೆ ಯೋಗವಿದೆ

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಮುಂದಿನ ಸುದ್ದಿ
Show comments