ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 2 ಜನವರಿ 2019 (09:04 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಸ್ಥಾನಮಾನ ದೊರಕಲಿದೆ. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ವೃಷಭ: ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗುವಿರಿ. ಹೊಸ ವ್ಯವಹರಾದಲ್ಲಿ ಇಂದು ತೊಡಗಿಸಿಕೊಳ್ಳದೇ ಇದ್ದರೆ ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ.

ಮಿಥುನ: ಕುಟುಂಬದ ಕಾರ್ಯ ಕೆಲಸಗಳಿಗೆ ಓಡಾಟ, ಖರ್ಚು ವೆಚ್ಚ ಮಾಡಬೇಕಾಗುತ್ತದೆ. ವೃತ್ತಿಯಲ್ಲಿ ನೀವು ಮಾಡಿದ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು.

ಕರ್ಕಟಕ: ಕೈ ಹಿಡಿದ ಕಾರ್ಯಗಳು ಅಂದುಕೊಂಡಂತೇ ನಡೆಯದೇ ಮನಸ್ಸಿಗೆ ಬೇಸರ ಉಂಟಾಗುವುದು. ಅವಿವಾಹಿತರಿಗೆ ಹೊಸ ಸಂಬಂಧಗಳ ಪ್ರಸ್ತಾಪಗಳು ಬರುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಸಿಂಹ: ದೇವತಾ ಕಾರ್ಯಗಳನ್ನು ನೆರವೇರಿಸುವಿರಿ. ಶುಭ ಕಾರ್ಯಗಳಿಗಾಗಿ ಬಂಧುಗಳ ಮನೆಗೆ ಹೋಗುವಿರಿ. ದೂರ ಸಂಚಾರದ ಯೋಗವಿದ್ದು, ಆರೋಗ್ಯದಲ್ಲಿ ಕಾಳಜಿ ಅಗತ್ಯ.

ಕನ್ಯಾ: ವೃತ್ತಿರಂಗದಲ್ಲಿ ಅಪವಾದದ ಭೀತಿ ಎದುರಿಸಬೇಕಾದೀತು. ವೃತ್ತಿಯಲ್ಲಿ ಕಿರಿ ಕಿರಿ ಇದ್ದರೂ ಮನೆಯಲ್ಲಿ ಮಡದಿ, ಮಕ್ಕಳಿಂದ ಸಮಾಧಾನ ಸಿಗಲಿದೆ. ಹಿರಿಯರ ಬಗ್ಗೆ ಕಾಳಜಿ ವಹಿಸಬೇಕಾದ ಸಂದರ್ಭ ಎದುರಾದೀತು.

ತುಲಾ: ಆರ್ಥಿಕ ಲಾಭವಾಗಿ ಸಂತಸ ನೆಲೆ ನಿಲ್ಲಲಿದೆ. ಬಂಧು ಮಿತ್ರರ ಸಹಕಾರದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ನೆರವೇರುವುದು. ತೀರ್ಥ ಯಾತ್ರೆ ಕೈಗೊಳ್ಳುವಿರಿ.

ವೃಶ್ಚಿಕ: ಹಿತಶತ್ರುಗಳ ಕಾಟ ಮನಸ್ಸಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿ ಆಸ್ಪತ್ರೆಗೆ ಭೇಟಿ ನೀಡಬೇಕಾಗುವುದು. ಧರ್ಮ ಕಾರ್ಯಗಳನ್ನು ನೆರವೇರಿಸುವಿರಿ.

ಧನು: ವ್ಯಾಪಾರ, ವ್ಯವಹಾರಗಳಲ್ಲಿ ಒಳ್ಳೆಯ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ತಾವು ಮಾಡಿದ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸಂತಸ ಮೂಡುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.

ಮಕರ: ನಿಮ್ಮನ್ನು ಮಟ್ಟ ಹಾಕಲು ಬರುವ ಶತ್ರುಗಳಿಗೆ ಹಿನ್ನಡೆಯಾದೀತು. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಧನಾಗಮನವಾಗಿ ಲಾಭ ಪಡೆಯುವಿರಿ. ದೂರ ಸಂಚಾರ ಯೋಗವೂ ಇದೆ.

ಕುಂಭ: ಪ್ರವಾಸ ಕೈಗೊಂಡು ಮಾನಸಿಕವಾಗಿ ಸಂತಸದ ವಾತಾವರಣದಲ್ಲಿರುವಿರಿ. ಧನಾಗಮನವಾದರೂ, ಅಷ್ಟೇ ಖರ್ಚುಗಳೂ ಇರಲಿವೆ. ಹೊಸ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಎಚ್ಚರವಿರಲಿ.

ಮೀನ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ನೆಮ್ಮದಿ ಪಡೆಯುವಿರಿ. ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಖರ್ಚುವೆಚ್ಚಗಳು ವಿಪರೀತ ಆಗುತ್ತವೆ. ಎಲ್ಲದಕ್ಕೂ ಕಡಿವಾಣ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments