Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 22 ಡಿಸೆಂಬರ್ 2018 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನೆಯಲ್ಲಿ ಅಶಾಂತಿಯ ವಾತಾವರಣವಿರುತ್ತದೆ. ವೃತ್ತಿ ಜೀವನದಲ್ಲಿ ಒತ್ತಡದ ಕಾರ್ಯ ಕೆಲಗಳಿಂದ ಹೈರಾಣಾಗುತ್ತೀರಿ. ದಿನದಂತ್ಯಕ್ಕೆ ಶುಭ ಸುದ್ದಿ.

ವೃಷಭ: ಕಾರ್ಯ ಕ್ಷೇತ್ರದಲ್ಲಿ ಜಯಗಳಿಸಿ ನೆಮ್ಮದಿ ಹೊಂದುವಿರಿ. ಕುಟುಂಬದವರ ಸಹಕಾರದಿಂದ ಸಂತಸದ ದಿನ ಕಳೆಯುವಿರಿ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.

ಮಿಥುನ: ಯಾವುದೋ ಬೇಡದ ಆಲೋಚನೆಗಳಿಂದ ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ಆರ್ಥಿಕವಾಗಿ ಲಾಭ ಗಳಿಸುವಿರಿ. ವೃತ್ತಿ ರಂಗದಲ್ಲಿ ಬಡ್ತಿಗೆ ಅವಕಾಶವಿದೆ.

ಕರ್ಕಟಕ: ಆದಾಯ ಗಳಿಕೆಯಿಂದ ಆರ್ಥಿಕ ಸಮಸ್ಯೆಗಳು ದೂರವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃತ್ತಿ ರಂಗದಲ್ಲಿ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಅಗತ್ಯ.

ಸಿಂಹ: ಕುಟುಂಬದವರ ಸಹಕಾರದಿಂದ ನೆಮ್ಮದಿಯ ವಾತಾವರಣವಿರುತ್ತದೆ. ಅವಿವಾಹಿತರಿಗೆ ಕಂಕಣ ಬಲ ಸಾಧ್ಯತೆಯಿದೆ. ಖರ್ಚು ವೆಚ್ಚದ ಬಗ್ಗೆ ಎಚ್ಚರವಿರಲಿ.

ಕನ್ಯಾ: ಕಾರ್ಯ ಸಾಧನೆಗಾಗಿ ಹೆಚ್ಚಿನ ಓಡಾಟ ನಡೆಸಬೇಕಾದೀತು. ವೃತ್ತಿ ರಂಗದಲ್ಲಿ ಸಮಸ್ಥಿತಿ ಮುಂದುವರಿಯಲಿದೆ. ದೇವರ ದರ್ಶನ ಪಡೆಯುವಿರಿ.

ತುಲಾ: ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ನಿರಾಶೆಯಾಗಬಹುದು. ಸಹೋದ್ಯೋಗಿಗಳಿಂದ ಕಿರಿ ಕಿರಿ ಅಥವಾ ವಂಚನೆ ಆಗಬಹುದು. ಕುಟುಂಬದವರೊಂದಿಗೆ ಎಚ್ಚರಿಕೆಯಿಂದ ಚರ್ಚಿಸಿ.

ವೃಶ್ಚಿಕ: ಅಂದುಕೊಂಡ ಕಾರ್ಯಗಳು ನಿಧಾನಗತಿಯಿಂದ ನಡೆದು ಕೊಂಚ ಮನಸ್ಸಿಗೆ ಕಿರಿ ಕಿರಿ ಆಗಬಹುದು. ಖರ್ಚು ವೆಚ್ಚಗಳು ಅಧಿಕವಾಗುವುದು. ಉದ್ಯೋಗ ಬದಲಾವಣೆ ಸಾಧ್ಯತೆಯಿದೆ.

ಧನು: ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಮಿತ್ರರೊಂದಿಗೆ ವಿಶ್ರಾಂತಿಯ ದಿನದ ಮಜಾ ಅನುಭವಿಸುವಿರಿ. ಮಂಗಲ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಮಕರ: ಬೇಡದ ಅಪವಾದದ ಭೀತಿ ಎದುರಿಸಬೇಕಾದೀತು. ಇಂಜಿನಿಯರಿಂಗ್ ವೃತ್ತಿಯವರಿಗೆ ಯಶಸ್ಸು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು.

ಕುಂಭ: ಶತ್ರುಕಾಟವಿದ್ದರೂ ನಿಮ್ಮ ಯಶಸ್ಸಿಗೆ ತೊಂದರೆಯಿಲ್ಲ. ಮನಸ್ಸಿಗೆ ಕಿರಿ ಕಿರಿ ಇರುತ್ತದೆ. ಸಂಗಾತಿಯ ಸೂಕ್ತ ಸಲಹೆಯಿಂದ ಸಮಸ್ಯೆಗಳು ಪರಿಹಾರವಾಗಲಿದೆ.

ಮೀನ: ಅನಾರೋಗ್ಯ ಸಮಸ್ಯೆಗಳು ದೂರವಾಗಿ ಉಲ್ಲಾಸದಾಯಕ ವಾತಾವರಣ ನೆಲೆಸುವುದು. ಆದಾಯವಿದ್ದಷ್ಟೇ ಖರ್ಚುಗಳೂ ತಲೆದೋರುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಈ ದಿಕ್ಕಿನಲ್ಲಿ ತುಳಸಿ ಗಿಡ ಬೆಳೆದರೆ ಆರ್ಥಿಕ ಸಮಸ್ಯೆ ಖಂಡಿತ