Publish Date: Wed, 19 Dec 2018 (09:10 IST)
Updated Date: Wed, 19 Dec 2018 (09:12 IST)
ಬೆಂಗಳೂರು: ಕೆಲವು ರಾಶಿಯವರ ಗುಣ ಸ್ವಭಾವ ಮಹಿಳೆಯರನ್ನು ಆಕರ್ಷಿಸುತ್ತದೆ. ಸಿಂಹ, ತುಲಾ ಮತ್ತು ಮಿಥುನ ರಾಶಿ ಹೊಂದಿರುವ ಪುರುಷರು ಹುಡುಗಿಯರ ವಿಚಾರದಲ್ಲಿ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯ ಪುರುಷರಿಗೆ ಮಹಿಳೆಯರು ಬೇಗನೇ ಆಕರ್ಷಿತರಾಗುತ್ತಾರಂತೆ.
ಮಿಥುನ
ಮಿಥುನ ರಾಶಿಯ ಪುರುಷರು ಭಾವಜೀವಿಗಳಾಗಿರುತ್ತಾರೆ. ಇವರು ಇನ್ನೊಬ್ಬರ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುವವರಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಹುಡುಗಿಯರಿಗೆ ಈ ರಾಶಿಯ ಹುಡುಗರು ಬೇಗನೇ ಇಷ್ಟವಾಗುತ್ತಾರೆ.
ತುಲಾ
ಈ ರಾಶಿಯವರು ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ಮಹಿಳೆಯರನ್ನು ಹೆಚ್ಚು ಸೆಳೆಯುತ್ತಾರೆ. ನೋಡಲೂ ಸುಂದರವಾಗಿರುತ್ತಾರೆ. ಹೀಗಾಗಿ ಹುಡುಗಿಯರು ಬೇಗನೇ ಇವರ ಬಲೆಗೆ ಬೀಳುತ್ತಾರೆ.
ಸಿಂಹ
ಈ ರಾಶಿಯವರು ಸ್ನೇಹ ಜೀವಿಗಳು. ಎಲ್ಲರೊಂದಿಗೆ ನಗು ನಗುತ್ತಾ ಇರುವ ಇವರ ಸ್ವಭಾವ ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ಹಾಗೇ ಇವರು ವಿಶಾಲ ಹೃದಯಿಗಳೂ, ಕರುಣಾಮಯಿಗಳೂ ಆಗಿರುತ್ತಾರೆ. ಹುಡುಗಿಯರು ಇಷ್ಟಪಡಲು ಇಷ್ಟಿದ್ದರೆ ಸಾಲದೇ?!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ