ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೌಟುಂಬಿಕ ಕೆಲಸಗಳಿಗೆ ಓಡಾಟ ಮತ್ತು ಧನವ್ಯಯ ಮಾಡಬೇಕಾದೀತು. ದೂರ ಸಂಚಾರದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು. ಅಧಿಕಾರಿ ವರ್ಗದವರಿಗೆ ಕಿರಿ ಕಿರಿ. ನಾನಾ ಕಾರಣಗಳಿಗೆ ಖರ್ಚು ವೆಚ್ಚ ತಪ್ಪದು.ಮಿಥುನ: ಕುಟುಂಬ ಸದಸ್ಯರೊಂದಿಗೆ ಯಾವುದೇ ಕಾರಣಕ್ಕೂ ವೈಮನಸ್ಯ ಮಾಡಿಕೊಳ್ಳಬೇಡಿ. ಎಚ್ಚರಿಕೆಯಿಂದ ವರ್ತಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನಬಲವಿದ್ದರೆ ಮಾತ್ರ ಯಶಸ್ಸು.ಕರ್ಕಟಕ: ವೃತ್ತಿ ರಂಗದಲ್ಲಿ ಕೊಂಚ ಅಡಚಣೆ ಎದುರಾಗುವುದು. ಆಪ್ತರೊಂದಿಗೆ ಮನಸ್ತಾಪ...