ಋಣಬಾಧೆ ತೀರಿ ಧನ ಪ್ರಾಪ್ತಿಯಾಗಲು ಅರಳಿಮರದ ಬಳಿ ಹೀಗೆ ಮಾಡಿ

Webdunia
ಶನಿವಾರ, 15 ಡಿಸೆಂಬರ್ 2018 (07:40 IST)
ಬೆಂಗಳೂರು : ಕೆಲವರು ವ್ಯಾಪಾರದಲ್ಲಿ ನಷ್ಟವಾಗಿ ಸಾಲ ಮಾಡಿಕೊಂಡು ಋಣಬಾಧೆಯಿಂದ ನರಳುತ್ತಿರುತ್ತಾರೆ. ಈ ಸಮಸ್ಯೆಯಿಂದ ಹೊರಬಂದು ಮತ್ತೆ ಅವರು ಅಭಿವೃದ್ಧಿ ಹೊಂದಲು ಅರಳಿಮರದ ಬಳಿ ಹೀಗೆ ಮಾಡಿ.

ಈ ಪರಿಹಾರವನ್ನು ಶುಕ್ಲಪಕ್ಷದ ಶುಕ್ರವಾರ ದಿನದಂದು ಪ್ರಾರಂಭಿಸಿದರೆ ಒಳ್ಳೆಯದು. ಶುಕ್ರವಾರದ ದಿನದಂದು ಸೂರ್ಯೋದಯಕ್ಕೂ ಮುಂಚೆ ಎದ್ದು, ತಲೆಸ್ನಾನ ಮಾಡಬೇಕು. ಮನೆಯಲ್ಲಿ ಪೂಜೆ ಮುಗಿಸಿ ದೇವಿ ದೇವಸ್ಥಾನಕ್ಕೆ ಭೇಟಿನೀಡಿ ದರ್ಶನ ಪಡೆದು, ನಂತರ ಆ ದೇವಸ್ಥಾನದಲ್ಲಿರುವ ಅಶ್ವಥ್ ಮರದ ಹತ್ತಿರ ಹೋಗಿ ಅಲ್ಲಿ ತಾಮ್ರದ ನಾಣ್ಯವನ್ನು ತೆಗೆದುಕೊಂಡು ತಲೆಗೆ 7 ಬಾರಿ ಸುತ್ತಿಕೊಂಡು ಮನಸ್ಸಿನಲ್ಲಿ ಸಾಲದ ಬಾಧೆ ತೀರಿ ಹೋಗಿ ಧನ ಪ್ರಾಪ್ತಿಯಾಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಆ ತಾಮ್ರದ ನಾಣ್ಯವನ್ನು ಮಣ್ಣಿನ ದೀಪದಲ್ಲಿ ಹಾಕಿ ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಬೇಕು.

 

ಈ ದೀಪ ಪಶ್ಚಿಮ ದಿಕ್ಕಿಗೆ ಮುಖ  ನೋಡುವಂತೆ ಇಡಬೇಕು. ನಂತರ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಬೇಕು. ಪೂಜೆ ನಂತರ ಅಲ್ಲಿಂದ ಯಾವ ವಸ್ತುವನ್ನು ಮನೆಗೆ ಮರಳಿ ತರಬಾರದು. ಹಾಗೇ ಮನೆಗೆ ಹೋಗುವ ದಾರಿಯಲ್ಲಿ ಯಾರಬಳಿ ಮಾತನಾಡಬಾರದು. ಈ ಬಗ್ಗೆ ಯಾರ ಬಳಿಯೂ ಹೇಳಬಾರದು. ಈ ಪೂಜೆ ಸಂಜೆ 6 ಗಂಟೆಯ ಒಳಗೆ ಮಾಡಿದರೆ ಉತ್ತಮ. ಹೀಗೆ 7 ವಾರಗಳು ಈ ಪೂಜೆಯನ್ನು ಶೃದ್ಧೆ, ಭಕ್ತಿಯಿಂದ ಮಾಡಬೇಕು. ಇದರಿಂದ  ಋಣಬಾಧೆ ತೀರಿ ಧನ ಪ್ರಾಪ್ತಿಯಾಗುತ್ತದೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments