ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 10 ಡಿಸೆಂಬರ್ 2018 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ಯಶಸ್ಸಿಗೆ ಕೊರತೆಯಿಲ್ಲ. ಖರ್ಚು ವೆಚ್ಚಗಳಾಗಬಹುದು.

ವೃಷಭ: ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಸಂಬಂಧಿಗಳಿಂದ ಸಹಕಾರ ದೊರೆಯಲಿದ್ದು, ಸಂಬಂಧಗಳ ಮಹತ್ವ ಅರಿಯುವಿರಿ.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಮೇಲ್ವರ್ಗದವರ ಒತ್ತಡದಿಂದ ಇಷ್ಟವಿಲ್ಲದ ಕೆಲಸ ಅನಿವಾರ್ಯವಾಗಿ ಮಾಡಬೇಕಾಗಬಹುದು. ಆದರೆ ಇದು ತಾತ್ಕಾಲಿಕ.

ಕರ್ಕಟಕ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ದೂರ ಪ್ರಯಾಣದ ಯೋಗವಿದೆ. ಆದರೆ ಪ್ರಯಾಣಿಸುವಾಗ ಹಣ, ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರವಿರಲಿ.

ಸಿಂಹ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆಯಿದೆ. ದೇವರ ಕಾರ್ಯಗಳಲ್ಲಿ ಭಾಗಿಯಾಗಿ.

ಕನ್ಯಾ: ಉತ್ತಮ ಆದಾಯ ಗಳಿಸುವಿರಿ. ಸಾಂಸಾರಿಕವಾಗಿ ನೆಮ್ಮದಿ ಕಾಣುವಿರಿ. ಒಟ್ಟಿನಲ್ಲಿ ಈವತ್ತು ನಿಮಗೆ ಶುಭದಿನ.

ತುಲಾ: ವೃತ್ತಿರಂಗದಲ್ಲಿ ಕಿರಿ ಕಿರಿ ಇದ್ದರೂ ಮುಂಬಡ್ತಿಗೆ ಧಕ್ಕೆಯಿಲ್ಲ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಅನಗತ್ಯ ಮಾತುಗಳಿಗೆ ಕಿವಿಗೊಡಬೇಡಿ. ಸಂಗಾತಿಯಿಂದಲೇ ಅಸಹಕಾರ ಸಿಕ್ಕರೂ ಧೃತಿಗೆಡದೇ ಮುನ್ನಡೆಯಿರಿ.

ಧನು: ತಾಳ್ಮೆಯಿಂದ ಮುನ್ನಡೆದರೆ ಕೈ ಹಿಡಿದ ಕಾರ್ಯಗಳಲ್ಲಿ ಜಯ ಶತಸ್ಸಿದ್ಧ. ದೈವಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಮಕರ: ಕೈ ಹಿಡಿದ ಕಾರ್ಯಗಳಿಗೆ ಆಪ್ತರು, ಕುಟುಂಬದವರಿಂದ ಸಹಕಾರ ಸಿಕ್ಕಿ ಯಶಸ್ಸು ಸಾಧಿಸುವಿರಿ. ಅನಿರೀಕ್ಷಿತ ಶುಭವಾರ್ತೆ ಕೇಳಿಬಂದರೂ ಬರಬಹುದು.

ಕುಂಭ: ಆರೋಗ್ಯ ಸಮಸ್ಯೆಯಿಂದ ಬೇಸರದಿಂದಿರುವಿರಿ. ತಾಳ್ಮೆಗೆಡದಿರಿ. ಧನಲಾಭ ಯೋಗವಿದೆ.

ಮೀನ: ಹಿರಿಯರ ಸಲಹೆಗಳಿಗೆ ಕಿವಿಗೊಟ್ಟು ಕಾರ್ಯ ಮಾಡಿದರೆ ಯಶಸ್ಸು ಖಂಡಿತಾ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ರುದ್ರಾಷ್ಟಕಂ ಸ್ತೋತ್ರ ಕನ್ನಡದಲ್ಲಿ, ಇಂದು ತಪ್ಪದೇ ಓದಿ

ಗ್ರಹ ದೋಷ ನಿವಾರಣೆಗೆ ಈ ಸ್ತೋತ್ರವನ್ನು ಓದಿ

ಶುಕ್ರವಾರ ದೇವಿಯ ಈ ಸ್ತೋತ್ರವನ್ನು ಓದಿ

ಗುರು ಅಷ್ಟಕಂ ಸ್ತೋತ್ರ ಇಲ್ಲಿದೆ, ಓದುವುದರ ಫಲವೇನು ತಿಳಿದುಕೊಳ್ಳಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಸರಸ್ವತಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments