ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಶುಕ್ರವಾರ, 1 ಮಾರ್ಚ್ 2019 (08:56 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.


5 ನೇ ತಾರೀಖಿನಂದು ಜನಿಸಿದವರು
ಈ ದಿನಾಂಕದಂದು ಜನಿಸಿದವರೊಂದಿಗೆ ಕೆಲಸ ಮಾಡಲು ಯಾರೇ ಆದರೂ ಇಷ್ಟಪಡುತ್ತಾರೆ. ಅವರಿಗೆ ಜನರನ್ನು ಹೇಗೆ ನಿಭಾಯಿಸಬೇಕು, ಹೇಗೆ ಖುಷಿಯಾಗಿಡಬೇಕು ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಇವರು ತುಂಬಾ ಜಾಣರು, ಟ್ಯಾಲೆಂಟೆಡ್, ಹಾಗೂ ಬಹುಮುಖ ಪ್ರತಿಭೆಗಳು. ಇವರು ಇರುವಲ್ಲಿ ಒಂದು ರೀತಿಯ ಧನಾತ್ಮಕ ಎನರ್ಜಿ ತುಂಬಿರುತ್ತದೆ.

ಇವರು ಚುರುಕಾಗಿರಲು ಬಯಸುತ್ತಾರೆ. ಕೆಲಸವಿಲ್ಲದೇ ಕೂತರೆ ಇವರಿಗೆ ಬೋರ್ ಆಗುತ್ತದೆ. ಹೀಗಾಗಿ ಈ ದಿನದಂದು ಜನಿಸಿದವರು ಉತ್ತಮ ಶಿಕ್ಷಕರಾಗಬಹುದು. ಕಲಾ ಕ್ಷೇತ್ರದಲ್ಲಿ ಹೆಸರು ಮಾಡಬಹುದು. ಹಾಗೆಯೇ ಉತ್ತಮ ಸಂವಹನಕಾರರು, ಉದ್ಯಮಿಗಳೂ ಆಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?