ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 1 ಮಾರ್ಚ್ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಆದರೆ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ‍್ಳುವಿರಿ. ಆರೋಗ್ಯ ಭಾಗ್ಯ ಕೈಕೊಡುವುದು. ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ.

ವೃಷಭ: ವಿದ್ಯಾರ್ಥಿಗಳು ನಿರೀಕ್ಷಿತ ಪ್ರಗತಿ ಕಾಣುವರು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಸಾಲ ಬಾಧೆಯಿಂದ ಮುಕ್ತರಾಗುವಿರಿ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಅವಿವಾಹಿತರು ಸ್ವಲ್ಪ ದಿನ ಕಾಯಬೇಕಾಗುತ್ತದೆ.

ಮಿಥುನ: ಸಾಂಸಾರಿಕವಾಗಿ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಕುಟುಂಬದವರ ಅಭಿಪ್ರಾಯ ಪರಿಗಣಿಸದೇ ಮಾಡಿದ ಕಾರ್ಯಗಳಿಂದ ಬೈಸಿಕೊಳ್ಳಬೇಕಾದೀತು. ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಶುಭ ದಿನ.

ಕರ್ಕಟಕ: ಆರ್ಥಿಕ ಮುಗ್ಗಟ್ಟುಗಳು ದೂರವಾಗಿ ಚೇತರಿಕೆ ಕಾಣುವಿರಿ. ಮೆಡಿಕಲ್ ರೆಪ್ರೆಸೆಂಟಿವ್, ಸೇಲ್ಸ ಮ್ಯಾನ್ ವೃತ್ತಿಯವರು ಲಾಭ ಕಾಣುವರು. ವ್ಯಾಪಾರಕ್ಕೆ ಕೈ ಹಾಕಿದರೆ ಅಭಿವೃದ್ಧಿ ಕಾಣುವಿರಿ. ಹಿರಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಸಿಂಹ: ವ್ಯವಹಾರದಲ್ಲಿ ಸಂಕಷ್ಟ ಎದುರಿಸಬೇಕಾದೀತು. ನಯವಂಚಕರ ಮೋಸ ಬಯಲಿಗೆ ಬರಲಿದೆ. ಅವಿವಾಹಿತರು ಸ್ವಲ್ಪ ದಿನ ಕಾಯಬೇಕಾಗುತ್ತದೆ. ವಾಸ ಸ್ಥಳ ಬದಲಾವಣೆ ಸಂಭವವಿದೆ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ.

ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರಕುವುದು. ವಾಹನ ಖರೀದಿ ಯೋಗವಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಪ್ರೇಮಿಗಳ ಪ್ರೇಮ ಪ್ರಕರಣಗಳು ಬಹಿರಂಗವಾಗಲಿದೆ.

ತುಲಾ: ಸಕಾಲದಲ್ಲಿ ಹಣಕಾಸಿನ ನೆರವು ದೊರೆಯುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರ ಅಗತ್ಯ. ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರುವುದು. ಹಿರಿಯರ ಆರೋಗ್ಯ ಸಂಬಂಧ ಆಸ್ಪತ್ರೆಗೆ ಅಲೆದಾಡಬೇಕಾದೀತು. ಕೃಷಿ ಕ್ಷೇತ್ರದಲ್ಲಿರುವವರು ಹೆಚ್ಚಿನ ಲಾಭ ಕಾಣುವರು. ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ.

ಧನು: ವಿದ್ಯಾರ್ಥಿಗಳಿಗೆ ಅಚ್ಚರಿಯ ಫಲಿತಾಂಶಗಳು ಸಿಗಲಿವೆ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರುವುದು. ಅಪರೂಪಕ್ಕೆ ಬರುವ ಮಿತ್ರರಿಂದ ಶುಭ ಸುದ್ದಿ. ಕಾರ್ಯ ನಿಮಿತ್ತ ದೂರ ಸಂಚಾರ ಮಾಡುವಿರಿ.

ಮಕರ: ವ್ಯವಹಾರ ಕ್ಷೇತ್ರದಲ್ಲಿ ಸಮಲಾಭ ಕಾಣುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ದೂರ ಸಂಚಾರ ಮಾಡಬೇಕಾಗಿಬರುತ್ತದೆ. ಇದರಿಂದ ದೇಹಾಯಾಸವಾಗುವ ಸಾಧ್ಯತೆಯಿದೆ. ಪ್ರಯಾಣದಲ್ಲಿ ಕಳ್ಳತನದ ಭೀತಿಯಿದ್ದು, ಎಚ್ಚರಿಕೆ ಅಗತ್ಯ.

ಕುಂಭ: ಮನೆಗೆ ಬೇಕಾದ ಹೊಸ ವಸ್ತು, ಆಸ್ತಿ ಖರೀದಿಗೆ ಮುಂದಾದರೆ ಲಾಭ ಪಡೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಬಹುದಿನಗಳಿಂದ ಬಾಕಿಯಿದ್ದ ದೈವ ಹರಕೆಯನ್ನು ಪೂರೈಸುವಿರಿ.

ಮೀನ: ದೇವರ ಆಶೀರ್ವಾದ ನಿಮ್ಮ ಮೇಲಿದ್ದು, ಅಂದುಕೊಂಡ ಕಾರ್ಯಗಳು ನೆರವೇರುವುದು. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಕಂಡುಕೊಳ್ಳುವುದು. ತಾಳ್ಮೆ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಮನೆಗೆ ದಾರಿದ್ರ್ಯ ಖಂಡಿತ