Publish Date: Wed, 30 Jan 2019 (09:05 IST)
Updated Date: Wed, 30 Jan 2019 (09:08 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ತುಲಾ ರಾಶಿ ನೋಡೋಣ.
ತುಲಾ ರಾಶಿಯವರಿಗೆ ರೊಮ್ಯಾಂಟಿಕ್, ಲವ್ ಬಗ್ಗೆ ಹೆಚ್ಚು ಕನಸುಗಳಿರುವುದಿಲ್ಲ. ಇವರು ರೊಮ್ಯಾನ್ಸ್ ನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಆದರೆ ಇಷ್ಟಪಟ್ಟವರಿಂದ ಮೋಸವಾದರೆ ತೀರಾ ದುಃಖಪಡುತ್ತಾರೆ.
ಈ ರಾಶಿಯವರಿಗೆ ಸಂಬಂಧದ ಮಹತ್ವದ ಬಗ್ಗೆ ಸದಾ ಅರಿವು ಮೂಡಿಸುವ ಮಿಥುನ ರಾಶಿಯವರು ತಕ್ಕ ಸಂಗಾತಿಯಾಗಬಹುದು. ಮಿಥುನ ರಾಶಿಯವರು ತುಲಾ ರಾಶಿಯವರನ್ನು ಮದುವೆಯಾದರೆ ಸಂಬಂಧದ ಮಹತ್ವ ಅವರಿಗೆ ಚೆನ್ನಾಗಿ ಅರಿವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ