ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಗುರುವಾರ, 7 ಫೆಬ್ರವರಿ 2019 (09:15 IST)
ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ. ಇದೀಗ ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುತ್ತಾ ಸಾಗೋಣ.


ಜನ್ಮ ದಿನಾಂಕ 2
ನಿಮ್ಮ ಜನ್ಮ ದಿನಾಂಕ 2  ಆಗಿದ್ದಲ್ಲಿ ಈ ವರ್ಷ ನೀವು ಕಳೆದ ವರ್ಷ ಅರ್ಧಕ್ಕೆ ನಿಲ್ಲಿಸಿದ ಕೆಲಸಗಳನ್ನು ಈ ವರ್ಷ ಪೂರ್ತಿ ಮಾಡುತ್ತೀರಿ. ನೀವು ಮಾಡಬೇಕಾದ ಒಂದು ಮುಖ್ಯವಾದ ಕೆಲಸವೆಂದರೆ ಏನು ಕೆಲಸ ಮಾಡಬೇಕು ಎಂದು ಪಟ್ಟಿ ಮಾಡಿ ಅದನ್ನು ಕ್ರಮ ಪ್ರಕಾರವಾಗಿ ಮಾಡುತ್ತಾ ಸಾಗುವುದು.

ಬಾಕಿ ಹಣ ಪಾವತಿ ಇರಬಹುದು, ಕೆಲಸಗಳಿರಬಹುದು, ಯೋಜನೆಗಳಿರಬಹುದು ಅದನ್ನು ಈ ವರ್ಷ ಪೂರ್ತಿ ಮಾಡಿಕೊಳ್ಳಲು ಸಕಾಲ. ಹಾಗೆಯೇ ನೀವು ಈ ವರ್ಷ ಹೆಚ್ಚು ಜನರ ಸಂಪರ್ಕ ಸಾಧಿಸುವುದು ಮತ್ತು ಸಂವಹನ ನಡೆಸುತ್ತಿದ್ದರೆ ನಿಮ್ಮ ವೃತ್ತಿ ಬದುಕಿನಲ್ಲೂ ಉನ್ನತ ಸ್ಥಾನ ಕಾಣುತ್ತೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾನುವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ