Select Your Language

Notifications

webdunia
webdunia
webdunia
webdunia

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

Lakshmi Godess

Krishnaveni K

ಬೆಂಗಳೂರು , ಬುಧವಾರ, 21 ಜನವರಿ 2026 (08:29 IST)
ನೀವು ಜೀವನದಲ್ಲಿ ಮಾಡುವ ಈ ನಾಲ್ಕು ತಪ್ಪುಗಳು ದಾರಿದ್ರ್ಯಕ್ಕೆ ಕಾರಣವಾಗಬಹುದು. ಗರುಡ ಪುರಾಣದ ಪ್ರಕಾರ ನೀವು ಜೀವನದಲ್ಲಿ ಮಾಡುವ ಈ ತಪ್ಪುಗಳು ದಾರಿದ್ರ್ಯ ಹೆಗಲಿಗೇರಲು ಕಾರಣವಾಗಬಹುದು.
 

ಹರಿದ ಮತ್ತು ಕೊಳಕು ಬಟ್ಟೆ ಧರಿಸಬೇಡಿ

ಗರುಡ ಪುರಾಣದ ಪ್ರಕಾರ ಕೊಳಕು ಬಟ್ಟೆ ಧರಿಸಿದರೆ ದಾರಿದ್ರ್ಯ ಹೆಗಲಿಗೇರುವುದು. ಶುದ್ಧ ಬಟ್ಟೆಯನ್ನು ಧರಿಸಿದರೆ ಲಕ್ಷ್ಮೀ ದೇವಿಯನ್ನು ಪ್ರಸನ್ನವಾಗುತ್ತಾಳೆ.
 

ಇತರರ ದೋಷಗಳನ್ನು ಎತ್ತಿ ಆಡುವುದು

ಇತರರ ದೋಷಗಳನ್ನು ಎತ್ತಿ ಆಡುವುದು ಮನುಷ್ಯರ ಗುಣ. ಆದರೆ ಇದರಿಂದ ಲಕ್ಷ್ಮೀ ದೇವಿಯ ಅಸಮಾಧಾನಕ್ಕೆ ಕಾರಣವಾಗಬೇಕಾಗುತ್ತದೆ.
 

ಬೆಳಿಗ್ಗೆ ತಡವಾಗಿ ಏಳಬೇಡಿ

ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವುದು ಸಮೃದ್ಧಿಯ ಸಂಕೇತ. ತಡವಾಗಿ ಏಳುವ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಅಭಿವೃದ್ಧಿ ಕಾಣಲಾರರು.
 

ಹಣದ ಮದ

ನನ್ನಲ್ಲಿ ಹಣವಿದೆ ಎಂದು ಮದ, ದರ್ಪ ತೋರಿದರೆ ಲಕ್ಷ್ಮೀ ದೇವಿಯು ಮುನಿಸಿಕೊಳ್ಳುತ್ತಾಳೆ. ಅತಿಯಾಗಿ ಖರ್ಚು ಮಾಡುವುದು, ದುಡ್ಡಿನ ವಿಚಾರದಲ್ಲಿ ಅನಾದರಣೆ ತೋರಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ