ಬೆಂಗಳೂರು : ದೇವಿಗೆ ಆಶ್ವೀಜ ಮಾಸವೆಂದರೆ ತುಂಬಾ ಇಷ್ಟ. ಈ ಮಾಸದಲ್ಲಿ ದೇವಿಯನ್ನು ಭಕ್ತಿ, ಶೃದ್ಧೆಯಿಂದ ಪೂಜಿಸಿದರೆ ದೇವಿಯ ಕೃಪಕಟಾಕ್ಷ ದೊರೆಯುತ್ತದೆ.
ನವೆಂಬರ್ 14ರೊಳಗೆ ಬೆಳಿಗ್ಗೆ ತಣ್ಣಿರಿನಿಂದ ಸ್ನಾನ ಮಾಡಿ. ದೇವಿಗೆ ಕೆಂಪು ಬಣ್ಣದ ಬಟ್ಟೆ ಎಂದರೆ ತುಂಬಾ ಇಷ್ಟ . ಆದಕಾರಣ ನೀವು ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ. ದೇವಿಯ ಮೂರ್ತಿಯನ್ನು ಅಥವಾ ಫೋಟೊವನ್ನು ಅರಶಿನ ನೀರಿನಿಂದ ಕ್ಲೀನ್ ಮಾಡಿಕೊಂಡು ಕುಂಕುಮ ಹಚ್ಚಿ.
ಬಳಿಕ ದೇವಿಗೆ ಇಷ್ಟವಾದ ಅಶೋಕ ಹೂವನ್ನು ಅರ್ಪಿಸಿ ದೇವಿಗೆ ಪೂಜೆ ಮಾಡುವಾಗ “ಓಂ ವಿಶ್ವ ಮಾತೃಯೇ ನಮಃ” ಮಂತ್ರವನ್ನು ಜಪಿಸಿ. ಆಮೇಲೆ ಮುತ್ತೇದೆಯರಿಗೆ ತಾಂಬೂಲವನ್ನು ನೀಡಿ. ಇದರಿಂದ ದೇವಿಯ ಅನುಗ್ರಹ ದಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.