Select Your Language

Notifications

webdunia
webdunia
webdunia
webdunia

ರಾಹುಕಾಲದಲ್ಲಿ ಶುಭ ಕೆಲಸ ಯಾಕೆ ಮಾಡಬಾರದು

Astrology

Krishnaveni K

ಬೆಂಗಳೂರು , ಗುರುವಾರ, 23 ಮೇ 2024 (12:18 IST)
ಬೆಂಗಳೂರು: ಹಿರಿಯರು ರಾಹುಕಾಲದಲ್ಲಿ ಪ್ರಯಾಣ ಮಾಡಬಾರದು, ಶುಭ ಕೆಲಸ ಮಾಡಲು ಎಂದು ಹೇಳುತ್ತಾರೆ. ಆದರೆ ರಾಹು ಕಾಲ ದಿನದಲ್ಲಿ ಎಷ್ಟು ಹೊತ್ತು ಇರುತ್ತದೆ. ಆ ಹೊತ್ತಿನಲ್ಲಿ ಶುಭ ಕೆಲಸ ಮಾಡಬಾರದೇಕೆ ಎಂದು ನೋಡೋಣ.

ರಾಹು ಎಂಬುದು ಅಶುಭದ ಸಂಕೇತವಾಗಿದ್ದು, ಇದು ದೇವಾನುದೇವತೆಗಳನ್ನೂ ಬಿಟ್ಟಿಲ್ಲ. ರಾಹುಕಾಲವನ್ನು ಪ್ರತಿಕೂಲದ ಸಮಯ ಎಂದೇ ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸವನ್ನು ಮಾಡುವುದು ನಿಷಿದ್ಧವಾಗಿದೆ. ಸೂರ್ಯೋದಯ ಮತ್ತು ಅಸ್ತಮದ ನಡುವೆ ಸುಮಾರು 90 ನಿಮಿಷಗಳ ಅವಧಿ ರಾಹುಕಾಲವಿರುತ್ತದೆ.

ಈ ಸಮಯದಲ್ಲಿ ಹೊಸ ಉದ್ಯೋಗಕ್ಕೆ ಹೋಗುವುದು, ಹೊಸ ಕೆಲಸಗಳಿಗೆ ಕೈ ಹಾಕುವುದು, ಮಂಗಳಕಾರ್ಯ ನೆರವೇರಿಸುವುದು, ಪ್ರಯಾಣ ಮಾಡುವುದು ಮಾಡಿದರೆ ಯಶಸ್ಸು ಸಿಗುವುದಿಲ್ಲ. ರಾಹುಕಾಲದಲ್ಲಿ ಪ್ರಯಾಣ ಮಾಡುವುದರಿಂದ ಅಪಘಾತ ಭಯವಿರುತ್ತದೆ. ಕೆಲಸಕ್ಕೆ ಕೈ ಹಾಕಿದರೆ ಅದು ಪೂರ್ತಿಯಾಗದೇ ಇರಬಹುದು.

ಒಂದು ವೇಳೆ ಅನಿವಾರ್ಯವಾಗಿ ರಾಹುಕಾಲದ ಸಮಯಕ್ಕೇ ಪ್ರಯಾಣ ಮಾಡಬೇಕೆಂದಾದರೆ ಹನುಮಂತನನ್ನು ಪೂಜಿಸಿ ಅಥವಾ ಆಂಜನೇಯನ ಮಂತ್ರ ಜಪಿಸಿ ಕೆಲಸ ಮುಂದುವರಿಸಿ. ರಾಹುಕಾಲದಲ್ಲಿ ಹೊರಡಲೇಬೇಕೆಂದಾದರೆ ಮೊಸರು, ಸಕ್ಕರೆಯಂತಹ ಮಂಗಳಕರ ವಸ್ತು ಸೇವಿಸಿ ಮನೆಯಿಂದ ಹೊರಟರೆ ರಾಹುವಿನ ಪ್ರಭಾವ ತಕ್ಕಮಟ್ಟಿಗೆ ಕಡಿಮೆಯಾಗಬಹುದು

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?